ಬೆಂಗಳೂರು: ಶೋಭಾ ಕರಂದ್ಲಾಜೆ ಹಿಂದೂಗಳ ಪರ ಇಲ್ಲ. ಸಮಾಜ ಹಾಳು ಮಾಡುವವರ ಪರ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ಮಂಗಳೂರು ಚಲೋ ವಿಚಾರಕ್ಕೆ ಸಂಬಂಧಿಸಿದಂತೆ ಅಂಬೇಡ್ಕರ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹಿಂದುತ್ವ ಪರವಾಗಿಲ್ಲ. ಶಾಂತಿ ಕದಡುವ ಪ್ರಯತ್ನ ಮಾಡ್ತಿದ್ದಾರೆ. ಬೈಕ್ ರ‍್ಯಾಲಿಯಿಂದ ಸಾಮರಸ್ಯ ಹಾಳಾಗುತ್ತೆ ಅಂದ್ರು.
Advertisement
ಇದನ್ನೂ ಓದಿ: ಬಿಜೆಪಿಯ ‘ಸ್ಟಾರ್’ಗಳು ಇವರಂತೆ: ದರ್ಶನ್ ಕೈ ಸೇರ್ಪಡೆಗೆ ಸಿಟಿ ರವಿ ಹೇಳಿದ್ದು ಹೀಗೆ
Advertisement
ಬೈಕ್ ರ‍್ಯಾಲಿಯಿಂದಾಗಿ ಟ್ರಾಫಿಕ್ ಗೆ ತೊಂದರೆಯಾಗುತ್ತೆ, ಹಾಗಾಗಿ ಬೈಕ್ ರ‍್ಯಾಲಿಗೆ ಅನುಮತಿ ನೀಡಿಲ್ಲ. ಸಮಾವೇಶಕ್ಕೆ ನಮ್ಮ ಅಭ್ಯಂತರವಿಲ್ಲ. ಮಂಗಳೂರು ಚಲೋ ಮಾಡೋ ಬದಲು ದೆಹಲಿ ಚಲೋ ಮಾಡಲಿ ನಾವು ಕೈ ಜೋಡಿಸುತ್ತೇವೆ. ರೈತರ ಸಾಲ ಮನ್ನಾಕ್ಕಾಗಿ ದೆಹಲಿ ಚಲೋ ಮಾಡಲಿ. ನಾವು ಬಳ್ಳಾರಿಗೆ ಪಾದಯಾತ್ರೆ ಮಾಡಿದ್ವಿ. ಬೇಕಿದ್ರೆ ಪಾದಯಾತ್ರೆ ಮಾಡಿಕೊಳ್ಳಲಿ. ನಮ್ಮ ಅಭ್ಯಂತರ ಇಲ್ಲ. ಶಾಂತಿ ಕದಡುವ ಯಾವುದೇ ಕೆಲಸವನ್ನ ಸರ್ಕಾರ ಸಹಿಸಲ್ಲ ಎಂದರು.
Advertisement
ಯಾರಪ್ಪ ಬಂದ್ರು ರ‍್ಯಾಲಿ ತಡೆಯೊಲ್ಲ ಅನ್ನೊ ಬಿಎಸ್ ವೈ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಅವರು, ಯಡಿಯೂರಪ್ಪ ಹಾಗೇ ಏಕವಚನ ದಲ್ಲಿ ನನಗೆ ಮಾತನಾಡಲು ಬರಲ್ಲ. ಅವರ ಭಾಷೆ, ಕೆಟ್ಟಪದ ನಮಗೆ ಬರಲ್ಲ. ಅವರು ಶಾಂತಿ ಕಾಪಾಡುವ ಪರ ಇಲ್ಲ ಎಂದರು.
Advertisement
https://www.youtube.com/watch?v=nWAl5y1BfXw
Thousands of Yuva Morcha karyakarthas reach Freedom park Bengaluru. We are all set for #Mangaluruchalo #EmergencyinKarnataka pic.twitter.com/jWtPoE0bgC
— BJP Karnataka (@BJP4Karnataka) September 5, 2017
ಮಂಗಳೂರು ಚಲೋವನ್ನು ನಿರ್ಬಂಧಿಸಿದ ಮಾತ್ರಕ್ಕೆ ಜನರ ಭಾವನೆಗಳನ್ನು ನಿರ್ಬಂಧಿಸಲು ನಿಮ್ಮಿಂದ ಸಾಧ್ಯವೇ . #MangaluruChalo ಜನ ಶಕ್ತಿ ಸಂಘ ಶಕ್ತಿ
— Sadananda Gowda (@DVSadanandGowda) September 4, 2017
https://www.youtube.com/watch?v=CDVIA-TBxKk