ChikkamagaluruDistrictsKarnatakaLatestMain Post

ಹಾಸ್ಟೆಲ್ ಮಕ್ಕಳ ಜೊತೆ ಸಾಲಿನಲ್ಲಿ ಕೂತು ಊಟ ಮಾಡಿದ ಕರಂದ್ಲಾಜೆ

ಚಿಕ್ಕಮಗಳೂರು: ಕೇಂದ್ರ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ (Shobha Karandlaje) ಶುಕ್ರವಾರ ಮಕ್ಕಳ (Children) ಜೊತೆ ಸರದಿ ಸಾಲಲ್ಲಿ ಕೂತು ಹಾಸ್ಟೆಲ್ (Hostel) ಊಟವನ್ನು ಸವಿದಿದ್ದಾರೆ.

ಶೋಭಾ ಕರಂದ್ಲಾಜೆ ಅವರು ಇಂದು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದರು. ಈ ವೇಳೆ, ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ್ದರು. ಭೇಟಿಯ ಬಳಿಕ ಹಾಸ್ಟೆಲ್ ಮಕ್ಕಳ ಜೊತೆ ಟೇಬಲ್ ಮೇಲೆ ಸರದಿ ಸಾಲಲ್ಲಿ ಕೂತು ಊಟ ಮಾಡಿದ್ದಾರೆ. ಇದನ್ನೂ ಓದಿ: ಅಂಗಾಂಗ ದಾನ ಮಾಡಿ 9 ಜೀವಗಳಿಗೆ ಬೆಳಕಾದ ರಕ್ಷಿತಾ ಕುಟುಂಬಕ್ಕೆ ಸರ್ಕಾರದಿಂದ 8 ಲಕ್ಷ ರೂ. ಪರಿಹಾರ

ಊಟ ಮುಗಿಸಿ ಹೊರಬಂದಾಗಲೂ ಊಟಕ್ಕೆಂದು ಸರದಿ ಸಾಲಿನಲ್ಲಿ ನಿಂತಿದ್ದ ಮಕ್ಕಳನ್ನು ಆತ್ಮೀಯಂತೆಯಿಂದ ಮಾತನಾಡಿಸಿ, ಅವರ ಕಷ್ಟ-ಸುಖ, ಕುಂದು-ಕೊರತೆಯನ್ನು ಕೇಳಿದ್ದಾರೆ. ಮಕ್ಕಳಿರುವ ಜಾಗಕ್ಕೆ ಹೋಗಿ ಮಾತನಾಡಿಸಿದ ಸಂಸದೆಯನ್ನು ಕಂಡು ಮಕ್ಕಳು ಸಂತಸ ವ್ಯಕ್ತಪಡಿಸಿದ್ದಾರೆ.

ಶೋಭಾ ಮಕ್ಕಳಿಗೆ ಚೆನ್ನಾಗಿದ್ದೀರಾ? ಎಂದು ಕೇಳಿದಾಗ, ಮಕ್ಕಳು ಹೌದು ಮೇಡಂ, ನೀವು ಚೆನ್ನಾಗಿದ್ದೀರಾ? ಎಂದು ಆತ್ಮೀಯತೆಯಿಂದಲೇ ಕೇಳಿದ್ದಾರೆ. ಮಕ್ಕಳನ್ನು ಕಂಡು ಸಂಸದೆ ಹಾಗೂ ಸಂಸದರನ್ನು ಕಂಡು ಮಕ್ಕಳೂ ಖುಷಿ ಪಟ್ಟಿದ್ದಾರೆ. ಇದನ್ನೂ ಓದಿ: ಕೈಗಾರಿಕಾ ಸ್ಥಾಪನೆಗಾಗಿ ಹೆಚ್ಚುವರಿ 50 ಸಾವಿರ ಎಕರೆ ಜಮೀನು ಭೂ ಸ್ವಾಧೀನ – ನಿರಾಣಿ

Live Tv

Leave a Reply

Your email address will not be published.

Back to top button