ಬೆಂಗಳೂರು: ಸಂಸದೆ ಶೋಭಾ ಕರಂದ್ಲಾಜೆ ಇಂದು ಬೆಂಗಳೂರು ಹೊರವಲಯ ನೆಲಮಂಗಲ ನಗರದ ಬಸವಣ್ಣದೇವರ ಮಠಕ್ಕೆ ಭೇಟಿ ನೀಡಿದ್ದಾಗ ಬಡವರಿಗೆ, ನಿರಾಶ್ರಿತರಿಗೆ ತಾವೇ ಊಟ ಪ್ಯಾಕ್ ಮಾಡಿದ್ದಾರೆ.
ಪ್ರತಿನಿತ್ಯ ಸುಮಾರು 2,000 ಜನಕ್ಕೆ ಊಟ ತಯಾರಿಸುವ ಕೇಂದ್ರ ಇದ್ದಾಗಿದ್ದು, ಬಸವಣ್ಣದೇವರ ಮಠಕ್ಕೆ ಸಂಸದೆ 250 ಕೆ.ಜಿ ಅಕ್ಕಿ, 50 ಕೆ.ಜಿ ಬೇಳೆ ಪ್ಯಾಕೆಟ್ ನೀಡಿ, ಶ್ರೀಗಳ ಹಾಗೂ ಸ್ವಯಂ ಸೇವಕ ತಂಡಕ್ಕೆ ಧನ್ಯವಾದ ಹೇಳಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೆ, ಲಾಕ್‍ಡೌನ್ ಮುಂದುವರಿಕೆ ವಿಚಾರದ ಬಗ್ಗೆ ಪ್ರಧಾನಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯುತ್ತಿದೆ. ದೇಶದ ಪರಿಸ್ಥಿತಿಯನ್ನು ನೋಡಿಕೊಂಡು ಪ್ರಧಾನಿಗಳು ಕ್ರಮ ಕೈಗೊಳ್ತಾರೆ ಅದನ್ನು ಪಾಲಿಸಬೇಕು ಎಂದಿದ್ದಾರೆ.
Advertisement
Advertisement
14ನೇ ತಾರೀಖಿಗೆ ಲಾಕ್‍ಡೌನ್ ಮುಗಿಯುವ ವಿಶ್ವಾಸ ಇತ್ತು. ಆದರೆ ದೆಹಲಿಯ ತಬ್ಲಿಘಿ ಸಂಘಟನೆ ಸಮಾವೇಶದಿಂದ ಕೊರೊನಾ ಸೋಂಕು ಹೆಚ್ಚಾಗಿ ಹರಡಿದೆ. ಸುಮಾರು 40% ಕೊರೊನಾ ಹಬ್ಬಲು ತಬ್ಲಿಘಿ ಕೊಡುಗೆ ಇದೆ. ತಬ್ಲಿಘಿ ಸಂಘಟನೆಯಲ್ಲಿ ಭಾಗಿಯಾದವರು ಸಾವಿರಾರು ಮಂದಿಗೆ ಕೊರೊನಾ ಹಬ್ಬಿಸಿದ್ದಾರೆ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ ಎಂದರು.
Advertisement
Advertisement
ಈ ವೇಳೆ ಪವಾಡ ಶ್ರೀ ಬಸವದೇವರ ಮಠದ ಸಿದ್ಧಲಿಂಗ ಸ್ವಾಮೀಜಿ, ಮಾಜಿ ಶಾಸಕ ನಾಗರಾಜು, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲಯ್ಯ, ತಹಶಿಲ್ದಾರ್ ಶ್ರೀನಿವಾಸಯ್ಯ, ಪಿಎಸ್‍ಐ ಮಂಜುನಾಥ್ ಹಾಗೂ ಸ್ವಯಂ ಸೇವಕರು ದಾನಿಗಳು ಹಾಜರಿದ್ದರು.