ದುಬೈ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವಕ್ರಿಕೆಟ್‍ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ಆಟಗಾರ. ಕೇವಲ ಅಭಿಮಾನಿಗಳು ಮಾತ್ರವಲ್ಲದೇ ಹಲವು ಕ್ರಿಕೆಟ್ ಆಟಗಾರರು ಧೋನಿಗೆ ಹೆಚ್ಚಿನ ಗೌರವ ನೀಡುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪಾಕ್ ತಂಡದ ಹಿರಿಯ ಆಟಗಾರ ಶೋಯಿಬ್ ಮಲಿಕ್, ಧೋನಿ ಬಳಿ ತೆರಳಿ ತಲೆ ಮೇಲಿದ್ದ ಕ್ಯಾಪ್ ಸರಿಸಿ ಗೌರವ ನೀಡಿ ಮಾತನಾಡಿದ್ದಾರೆ.
ಏಷ್ಯಾಕಪ್ ಟೂರ್ನಿಯ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಟಗಾರರು ಈಗಾಗಲೇ ದುಬೈ ತೆರಳಿದ್ದು, ಅಭ್ಯಾಸದಲ್ಲಿ ತೊಡಗಿದ್ದಾರೆ. ಇದೇ ವೇಳೆ ಪಾಕ್ ಆಟಗಾರ ಶೋಯಿಬ್ ಮಲಿಕ್ ಅಭ್ಯಾಸ ಮಾಡಿ ಕುಳಿತಿದ್ದ ಧೋನಿಯನ್ನು ಹುಡುಕಿಕೊಂಡು ಬಂದು ಮಾತನಾಡಿಸಿದ್ದಾರೆ. ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಲಿಕ್ ತಲೆ ಮೇಲಿದ್ದ ಕ್ಯಾಪ್ ಸರಿಸಿ ಗೌರವ ನೀಡಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೇ ಕೆಲ ಸಮಯ ಇಬ್ಬರು ಆಟಗಾರರು ಮಾತಕತೆ ನಡೆಸಿದ್ದಾರೆ.
Advertisement
#WATCH: Mahendra Singh Dhoni and Shoaib Malik meet during practice in Dubai ahead of #AsiaCup2018. India and Pakistan to play each other on September 19. pic.twitter.com/KGchi5qilJ
— ANI (@ANI) September 14, 2018
Advertisement
ಟೀಂ ಇಂಡಿಯಾ ಏಷ್ಯಾಕಪ್ ಜರ್ನಿ ಸೆಪ್ಟೆಂಬರ್ 18ರಿಂದ ಆರಂಭವಾಗಲಿದ್ದು, 19 ರಂದು ಪಾಕಿಸ್ತಾನ ವಿರುದ್ಧದ ಹೈವೋಲ್ಟೆಜ್ ಪಂದ್ಯ ನಡೆಯಲಿದೆ. ಏಷ್ಯಾಕಪ್ ಕ್ರಿಕೆಟ್ ಇಂದು ಅಧಿಕೃತವಾಗಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಬಾಂಗ್ಲಾ, ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಅಂದಹಾಗೇ ಯುಎಇನಲ್ಲಿ ಇರುವರೆಗೂ 5 ಪಂದ್ಯಗಳನ್ನು ಆಡಿರುವ ಬಾಂಗ್ಲಾ ತಂಡ ಒಂದರಲ್ಲೂ ಜಯಗಳಿಸಿಲ್ಲ. ಲಂಕಾ ವಿರುದ್ಧ ಇಂದಿನ ಜಯದೊಂದಿಗೆ ದುಬೈ ಇಂಟರ್ ನ್ಯಾಷನಲ್ ಕ್ರೀಡಾಂಗಣದಲ್ಲಿ ತನ್ನ ಮೊದಲ ಸವಿ ಪಡೆಯಲು ಸಿದ್ಧತೆ ನಡೆಸಿದೆ. ಪಂದ್ಯ ಸಂಜೆ ಭಾರತೀಯ ಕಾಲಮಾನ ಸಂಜೆ 5 ಗಂಟೆಗೆ ಆರಂಭವಾಗಲಿದೆ.
Advertisement
ಭಾರತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಸೀಮಂತ ಕಾರ್ಯದಲ್ಲಿ ಪತಿ ಮಲಿಕ್ ಗೈರು ಹಾಜರಿ ಆಗಿರುವುದರಿಂದ ಬೇಸರ ವ್ಯಾಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿರುವ ಸಾನಿಯಾ, `ದೇಶದ ಕರ್ತವ್ಯ ಮೊದಲು, ಆದರೆ ಆದಷ್ಟು ಬೇಗ ವಾಪಸ್ ಬನ್ನಿ‘ ಎಂದು ಬರೆದುಕೊಂಡಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಸಾನಿಯಾ ಕುಟುಂಬದ ಎಲ್ಲಾ ಸದಸ್ಯರು ಭಾಗವಹಿಸಿ ಸಂಭ್ರಮಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.instagram.com/p/BndCxaSlvVi/?hl=en&taken-by=mirzasaniar
https://www.instagram.com/p/Bnsfgj2lRvd/?hl=en&taken-by=mirzasaniar