ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಶಬರಿ ಮಲೆ ಯಾತ್ರೆಗೂ ಬ್ರೇಕ್ ಬಿದ್ದಿದೆ.
ಶಿವಣ್ಣ ಪ್ರತಿ ಬಾರಿ ಮಾಲೆ ಧರಿಸಿಕೊಂಡು ತಮ್ಮ ತಂಡದೊಂದಿಗೆ ಶಬರಿಮಲೆಯ ಸ್ವಾಮಿ ಅಯ್ಯಪ್ಪ ದರ್ಶನಕ್ಕೆ ಹೋಗುತ್ತಿದ್ದರು. ಈ ಬಾರಿಯೂ ಮಾಲೆ ಧರಿಸಿಕೊಂಡು ಸ್ವಾಮಿ ಅಯ್ಯಪ್ಪ ದೇವಾಲಯಕ್ಕೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೊರೊನಾ ವೈರಸ್‍ನಿಂದ ಶಿವಣ್ಣ ಮುಂಜಾಗ್ರತವಾಗಿ ಶಬರಿ ಮಲೆ ಯಾತ್ರೆಯನ್ನು ರದ್ದು ಮಾಡಿದ್ದಾರೆ.
Advertisement
Advertisement
ಹೀಗಾಗಿ ಶಿವಣ್ಣ ಇಂದು ಮನೆಯಲ್ಲಿ ಪೂಜೆ ಮಾಡಿ ಮಾಲೆ ಬಿಚ್ಚಲಿದ್ದಾರೆ. ಈ ಪೂಜೆಯಲ್ಲಿ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಕುಟುಂಬ ಸದಸ್ಯರು ಭಾಗಿಯಾಗಿದ್ದಾರೆ. ಮನೆಯಲ್ಲಿ ಪೂಜೆಯನಂತರ ಜಾಲಹಳ್ಳಿಯ ಅಯ್ಯಪ್ಪ ದೇವಸ್ಥಾನಕ್ಕೆ ಶಿವರಾಜ್‍ಕುಮಾರ್ ಭೇಟಿ ಕೊಡಲಿದ್ದಾರೆ.
Advertisement
ಶಿವಣ್ಣ ಅವರು ನಿರ್ದೇಶಕ ರಘುರಾಮ್ ಮತ್ತು ಅವರ ಬಳಗ ಫೆಬ್ರವರಿ 21ರಂದು ಮಾಲೆ ಧರಿಸಿತ್ತು. ಇಂದು ಸಂಜೆ ಶಬರಿಮಲೆ ಯಾತ್ರೆಗೆ ತೆರಳು ನಿರ್ಧರಿಸಿದ್ದರು. ಅದೇ ರೀತಿ ಯಾತ್ರೆ ಮುಗಿಸಿ ಮಾರ್ಚ್ 18ರಂದು ವಾಪಸ್ ಬರಬೇಕಿತ್ತು. ಆದರೆ ಕೇರಳದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅನೇಕ ದೇವಾಲಯಗಳು ಬಂದ್ ಆಗಿವೆ.
Advertisement
ಶಬರಿಮಲೆ ದೇವಸ್ಥಾನ ಮಂಡಳಿ ಕೂಡ ಭಕ್ತರು ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುವುದು ಬೇಡ ಎಂದು ತಿಳಿಸಿದೆ. ಈ ಎಲ್ಲಾ ಕಾರಣ ದಿಂದ ಶಿವರಾಜ್ ಕುಮಾರ್ ಯಾತ್ರೆಯನ್ನು ಕೈಬಿಟ್ಟಿದ್ದಾರೆ.