ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಡ್ರಮ್ ಬಾರಿಸಿದ್ದಾರೆ. ಮಹಿಳೆಯರು ಸಖತ್ ಸ್ಟೇಪ್ ಹಾಕಿರುವ ವೀಡಿಯೋ ಸಖತ್ ವೈರಲ್ ಆಗಿದೆ.
Advertisement
ಶಿವರಾಜ್ ಸಿಂಗ್ ಚೌಹಾಣ್ ಬುಡಕಟ್ಟು ಜನರ ಸಂಗೀತ ವಾದ್ಯವನ್ನು ಜನಸಾಮಾನ್ಯ ಮಹಿಳೆಯರ ಜೊತೆ ನೆಲದಲ್ಲಿ ಕುಳಿತು ಭಜನೆ ಮಾಡಿದ್ದಾರೆ. ಈ ವೀಡಿಯೋವನ್ನು ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿ ಸರಳ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನೂ ಓದಿ: 2047ರ ಮೊದಲು ನವ ಭಾರತವನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ: ಮೋದಿ
Advertisement
Covid Protocols Only For Aam Aadmi, Not For Netas?#NoMasks #NoSocialDistancing @ChouhanShivraj pic.twitter.com/QK5gCcPHzy
— Sanjay Jha (@JhaSanjay07) January 23, 2022
Advertisement
ಜಿಲ್ಲೆಯ ಹಳ್ಳಿಯೊಂದರಲ್ಲಿ ಅಭಿವೃದ್ಧಿ ಕಾರ್ಯಗಳ ಯೋಜನೆಗೆ ಭೂಮಿ ಪೂಜೆ, ಹಾಗೂ ಅಭಿವೃದ್ಧಿ ಪರಿಶೀಲನೆ ಕಾರ್ಯಕ್ರಮಕ್ಕೆ ಸಿಎಂ ಚೌಹಾಣ್ ಆಗಮಿಸಿದ್ದರು. ಬೂರಾ ವಿಸ್ತಾರಕ್ ಯೋಜನೆಗಾಗಿ ಸಾಗರ್ ಜಿಲ್ಲೆಗೆ ಆಗಮಿಸಿದ್ದರು. ಸಂವಾದದ ವೇಳೆ ಬುಡಕಟ್ಟು ಜನರ ಸಂಗೀತ ವಾದ್ಯ ನುಡಿಸುತ್ತದ್ದಂತೆ ಮಹಿಳೆಯರು ಸಹ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ತನ್ನ ಅನುಕೂಲಕ್ಕಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ: ಉದ್ಧವ್ ಠಾಕ್ರೆ