ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಇದೇ ಮೊದಲ ಬಾರಿಗೆ ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಶಿವರಾಜ್ ಕುಮಾರ್ ನಾಯಕ ಎಂದು ಈ ಹಿಂದೆಯೇ ಹೇಳಲಾಗಿತ್ತು. ಈಗ ಮತ್ತೊಂದು ಹೆಸರು ಸೇರ್ಪಡೆ ಆಗಿದ್ದು, ಶಿವರಾಜ್ ಕುಮಾರ್ (Shivraj Kumar) ಜೊತೆ ಉಪೇಂದ್ರ ಕೂಡ ನಾಯಕರಾಗಿ ನಟಿಸುತ್ತಿದ್ದಾರೆ. ಹಾಗಾಗಿ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ಸೆಟ್ಟೇರಲಿದೆ.
ಹರಿಕೃಷ್ಣ ನಂತರ ಮತ್ತೋರ್ವ ಸಂಗೀತ ನಿರ್ದೇಶಕ ಸಿನಿಮಾ ಡೈರೆಕ್ಟರ್ ಆಗಿ ಬದಲಾಗಿದ್ದು, ಅರ್ಜುನ್ ಜನ್ಯ ಈ ಸಿನಿಮಾಗಾಗಿ ವಿಶೇಷ ಕಥೆಯೊಂದನ್ನು ಹೆಣೆದುಕೊಂಡಿದ್ದಾರಂತೆ. ತಮ್ಮ ಮೊದಲ ಸಿನಿಮಾದಲ್ಲಿ ಇಬ್ಬರು ಸ್ಟಾರ್ ನಟರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ವಿಶೇಷ. ಈಗಾಗಲೇ ಈ ಇಬ್ಬರೂ ಸ್ಟಾರ್ ನಟರು ಅರ್ಜುನ್ ಜನ್ಯ ಹೇಳಿದ ಕಥೆಗೆ ಥ್ರಿಲ್ ಆಗಿದ್ದಾರಂತೆ. ಇದೊಂದು ಅಪರೂಪದ ಕಥೆ ಎಂದು ಬಣ್ಣಿಸಿದ್ದಾರಂತೆ. ಇದನ್ನೂ ಓದಿ:‘ಸಂಸ್ಕಾರ ಭಾರತ’ದಲ್ಲಿ ಅನಾಮಿಕನ ರೋಚಕ ಸ್ಟೋರಿ
ಗಾಳಿಪಟ 2 (Galipata 2) ಸೇರಿದಂತೆ ಹಲವು ಸಿನಿಮಾಗಳಿಗೆ ಬಂಡವಾಳ ಹೂಡಿರುವ ರಮೇಶ್ ರೆಡ್ಡಿ (Ramesh Reddy) ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದು, ಅತೀ ಶೀಘ್ರದಲ್ಲೇ ಮುಹೂರ್ತ ಕೂಡ ನಡೆಯಲಿದೆ. ಶಿವರಾಜ್ ಕುಮಾರ್ ವೇದ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಉಪ್ಪಿ (Upendra) ತಮ್ಮದೇ ನಿರ್ದೇಶನದ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಇಬ್ಬರ ಡೇಟ್ ಹೊಂದಾಣಿಕೆ ಮಾಡಿಕೊಂಡು ಶೂಟಿಂಗ್ ಗೆ ಸಿದ್ಧತೆ ನಡೆಸಲಿದ್ದಾರಂತೆ ಜನ್ಯ.