ಬೆಂಗಳೂರು: ಕನ್ನಡಿಗರನ್ನು ಕೆಣಕಬೇಡಿ ಅಂದ್ರೂ ಪುಂಡಾಟ ನಿಲ್ಲುತ್ತಿಲ್ಲ. ಇದೀಗ ಕನ್ನಡಿಗರ ಮೇಲೆ ಹಲ್ಲೆ ಮಾಡಿ ಶಿವಸೇನೆ ಕಾರ್ಯಕರ್ತರು ನಿಂದಿಸಿದ್ದಾರೆ.
ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಮನೆಗೆ ತೆರಳಿ ಹಲ್ಲೆಗೈದು ಕಾರ್ಯಕರ್ತರು ನಿಂದಿಸಿದ್ದಾರೆ. ಮಹಿಳೆಯರು ಇರುವ ಮನೆಗೆ ನುಗ್ಗಿದ 50ಕ್ಕೂ ಹೆಚ್ಚು ಶಿವಸೇನೆ ಕಾರ್ಯಕರ್ತರು, ಮರಾಠಿಯಲ್ಲೇ ಕ್ಷಮೆ ಕೇಳುವಂತೆ ಕಪಾಳಕ್ಕೆ ಹೊಡೆದಿದ್ದಾರೆ. ಇದನ್ನೂ ಓದಿ: ಮತಾಂತರ ತಡೆ ಮಸೂದೆಗೆ ವಿರೋಧ ಇದೆ: ಸಿದ್ದರಾಮಯ್ಯ
- Advertisement
- Advertisement
ಸರ್ವ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಶಿವಕುಮಾರ್ ನಾಯ್ಕ್‍ಗೆ ಹೊಡೆದಿದ್ದಾರೆ. ಅಲ್ಲದೆ ಕೊರಳ ಪಟ್ಟಿ ಹಿಡಿದು ಹಲ್ಲೆ ಮಾಡಿದ್ದಾರೆ. ಈ ವೇಳೆ ಮತ್ತೊಬ್ಬ ಕಾರ್ಯಕರ್ತ ಅದನ್ನು ತನ್ನ ಮೊಬೈಲ್ ನಲ್ಲಿ ವೀಡಿಯೋ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಮಗಳು – ತಾಳಿ ಕಿತ್ತು, ಜುಟ್ಟು ಹಿಡಿದು ಧರ, ಧರನೇ ಎಳೆದಾಡಿದ ತಂದೆ
ಕರ್ನಾಟಕ- ಮಹಾರಾಷ್ಟ್ರ ಒಂದಾಗಲಿ ಎಂದು ಮಹಾರಾಷ್ಟ್ರದಲ್ಲಿರುವ ಬಸವಣ್ಣನ ಪುತ್ಥಳಿಗೆ ಪೂಜೆ ಮಾಡಿದ್ದ ಶಿವಕುಮಾರ್ ನಾಯ್ಕ್ ಹಾಗೂ ತಂಡ ಬೆಳಗಾವಿ ಗಡಿ ವಿಚಾರದಲ್ಲಿ ಮಾತನಾಡಲು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯ ನಿವಾಸಕ್ಕೆ ಹೋಗಲು ಪ್ರಯತ್ನಿಸಿದ್ದರು. ಇದನ್ನೂ ಓದಿ: ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ ಅಂತೀರೋ ರಮ್ಯಾ
ಕಳೆದ ನಾಲ್ಕು ದಿನಗಳಿಂದ ಶಿವಕುಮಾರ್ ಅವರನ್ನ ಗಮನಿಸಿದ ಶಿವಸೇನೆ ಕಾರ್ಯಕರ್ತರು ನಿನ್ನೆ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಬಂದು 50 ಜನ ಹಲ್ಲೆ ಮಾಡಿದ್ದಾರೆ. ಚಂಬೂರು ಎಂಬ ಸ್ಥಳದಲ್ಲಿ ಕನ್ನಡ ಹೋರಾಟಗಾರರು ಉಳಿದುಕೊಂಡಿದ್ದರು. ಬೆಂಗಳೂರಿನಿಂದ ಮಹಾರಾಷ್ಟ್ರಕ್ಕೆ ಹೋಗಿ ಕನ್ನಡ ಶಾಲುನ್ನು ಧರಿಸಿ ಇಡೀ ಮಹಾರಾಷ್ಟ್ರವನ್ನು ಶಿವಕುಮಾರ್ ತಂಡ ಸುತ್ತಾಡಿತ್ತು. ಈ ಹಿನ್ನೆಲೆಯಲ್ಲಿ ಪುಂಡರು ಕೃತ್ಯ ಎಸಗಿದ್ದಾರೆ.