ಬೆಂಗಳೂರು: ಯಾವುದೆ ಆಮೀಷ ಒಡ್ಡಿಲ್ಲ. ಅವನಿಗೆ ತಾಕತ್ತಿದ್ದರೆ ಗಂಡಸು ಆಗಿದ್ದರೆ ಅವನು ಆಡಿಯೋ ಬಿಡುಗಡೆ ಮಾಡಲಿ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇ ಗೌಡಗೆ ಮಾಜಿ ಸಂಸದ ಎಲ್. ಆರ್ ಶಿವರಾಮೇ ಗೌಡ (L.R Shivarame Gowda) ಸವಾಲೆಸೆದಿದ್ದಾರೆ.
ದೇವರಾಜೇ ಗೌಡ (Devaraje Gowda) ತುರ್ತು ಸುದ್ದಿಗೋಷ್ಠಿ ನಡೆಸಿ ಆರೋಪಗಳ ಸುರಿಮಳೆಗೈದರು. ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ಎಸ್ ಐಟಿ ರಚನೆ ಆದ ದಿನ ದೇವರಾಜೇ ಗೌಡ ಬಂದು ನನ್ನ ಭೇಟಿ ಮಾಡಿದ. ಡಿ.ಕೆ ಅವರನ್ನ ಭೇಟಿ ಮಾಡಿಸಿ ಅಂದ. ನಾನು ಡಿಕೆಯವರಿಗೆ ಹೇಳಿದಾಗ ಅವನು ಭೇಟಿ ಮಾಡೋದು ಬೇಡ ಅಂದ್ರು. ಆಗ ಫೋನಲ್ಲಾದರು ಮಾತಾಡಿ ಅಂತ ನಾನೇ ಫೋನ್ ಮಾಡಿ ಕೊಟ್ಟೆ ಎರಡು ನಿಮಿಷ ಮಾತಾಡಿದರು ಎಂದರು.
ಅವನೇ ನನ್ನ ಹತ್ತಿರ ಹೇಳಿದ ಬಿಜೆಪಿ ನಾಯಕರ ಹತ್ತಿರ ಮಾತನಾಡಿದ್ದೇನೆ. ಅವರು ವೀಡಿಯೋ ಬಿಡಿ ಎಂದಿದ್ದಾರೆ. ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದೆ ಅವರು ಬಿಡಿ ಅಂದ್ರು ಅದಕ್ಕೆ ಬಿಟ್ಟೆ ಅಂತ ಹೇಳಿದ್ದಾನೆ. ಸಿಬಿಐ ಬಿಟ್ಟು ಯಾವ ತನಿಖೆ ಬೇಕಾದರು ಮಾಡಲಿ. ಯಾವುದೇ ಭಯವಿಲ್ಲ. ಇದರ ಹಿಂದೆ ನನ್ನ ಪಾತ್ರವಾಗಲಿ ಡಿಕೆಶಿ ಪಾತ್ರವಾಗಲಿ ಇಲ್ಲಾ ಎಂದು ಮಾಜಿ ಸಂಸದರು ಸ್ಪಷ್ಟಪಡಿಸಿದರು.
ಹಣಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾನೆ ಅಂತ ನನ್ನ ಅಭಿಪ್ರಾಯ. ನನ್ನ ಹತ್ತಿರ ನಿನ್ನೆ ಬಂದು ಇದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದೇನೆ ಎಂದ ಊಟ ಮಾಡಿಕೊಂಡು ಹೋಗು ಅಂತ ಊಟ ಮಾಡಿಸಿ ಕಳುಹಿಸಿದೆ ಎಂದರು. ಇದನ್ನೂ ಓದಿ: ಬೆದರಿಕೆಗಳಿಗೆಲ್ಲಾ ನಾವು ತಲೆಕೆಡಿಸಿಕೊಳ್ಳಲ್ಲ- ದೇವರಾಜೇಗೌಡ ಆರೋಪಕ್ಕೆ ಡಿಕೆಶಿ ತಿರುಗೇಟು