Connect with us

Districts

ಶಿವರಾಂ ಹೆಬ್ಬಾರ್ ಭರ್ಜರಿ ವಿಜಯೋತ್ಸವ – 2 ಕ್ವಿಂಟಾಲ್ ಸೇಬಿನ ಹಾರ ಸಮರ್ಪಣೆ

Published

on

ಕಾರವಾರ: ಉಪಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಅಭ್ಯರ್ಥಿ ಶಿವರಾಂ ಹೆಬ್ಬಾರ್ ಭರ್ಜರಿ ವಿಜಯೋತ್ಸವ ಆಚರಿಸಿದರು.

ವಾಹನದಲ್ಲಿ ಶಿರಸಿಯಾದ್ಯಂತ ಶಿವರಾಂ ಹೆಬ್ಬಾರ್ ಅವರಿಗೆ ಭರ್ಜರಿ ಮೆರವಣಿಗೆ ಮಾಡಲಾಯಿತು. ಪಟಾಕಿ ಹೊಡೆದು, ಕ್ರೇನ್ ಮೂಲಕ ಬೃಹತ್ ಸೇಬಿನ ಹಾರ ಹಾಕಿ ಅಭಿಮಾನಿಗಳಿಂದ ಸ್ವಾಗತಿಸಿ ಸಂಭ್ರಮಿಸಿದರು.

2 ಕ್ವಿಂಟಾಲ್ ಭಾರದ ಈ ಮಾಲೆಗೆ 1500ಕ್ಕೂ ಅಧಿಕ ಸೇಬು ಹಣ್ಣನ್ನು ಬಳಸಲಾಗಿದೆ. ಈ ಸಂದರ್ಭದಲ್ಲಿ ಸೇಬಿಗಾಗಿ ಅಭಿಮಾನಿಗಳು ಮುಗಿಬಿದ್ದು ಹಣ್ಣುಗಳನ್ನು ಕಿತ್ತುಕೊಂಡರು. ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆಯಲ್ಲಿ ಆಗಮಿಸಿದ ಶಿವರಾಂ ಅವರು ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದ ಶಿವರಾಂ ಹೆಬ್ಬಾರ್ ಅವರು 80,440 ಮತಗಳನ್ನು ಪಡೆದು ಭರ್ಜರಿ ಗೆಲುವು ದಾಖಲಿಸಿದರು. ಸಮೀಪದ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಭೀಮಣ್ಣ ನಾಯ್ಕ ಅವರನ್ನು 31,406 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಕಾಂಗ್ರೆಸ್‍ನಿಂದ ಗೆದ್ದು ಶಾಸಕರಾಗಿದ್ದ ಶಿವರಾಂ ಹೆಬ್ಬಾರ್ ಅವರ ರಾಜೀನಾಮೆ ಹಾಗೂ ಅನರ್ಹತೆಯಿಂದಾಗಿ ಕ್ಷೇತ್ರಕ್ಕೆ ಡಿ. 5ರಂದು ಉಪಚುನಾವಣೆಯ ಮತದಾನ ನಡೆದಿತ್ತು. 1.72 ಲಕ್ಷ ಮತದಾರರಿದ್ದ ಕ್ಷೇತ್ರದಲ್ಲಿ ಶೇ. 77.52 ಮತದಾನವಾಗಿತ್ತು. 65,381 ಪುರುಷ ಹಾಗೂ 68,182 ಮಹಿಳೆಯರು ಸೇರಿ ಒಟ್ಟು 1,33,564 ಮಂದಿಯಿಂದ ಮತದಾನವಾಗಿತ್ತು.

Click to comment

Leave a Reply

Your email address will not be published. Required fields are marked *