ದುನಿಯಾ ಸೂರಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಕಾಂಬಿನೇಷನ್ನ `ಟಗರು’ ಸೂಪರ್ ಹಿಟ್ ಚಿತ್ರದ ನಂತರ ʻಟಗರುʼ ಪಾರ್ಟ್ 2ಗೆ ಸಿದ್ಧತೆ ನಡೆದಿತ್ತು ಎಂಬ ಸುದ್ದಿ ಇದೀಗ ಹೊರ ಬಿದ್ದಿದೆ. ಮತ್ತೊಂದು ವಿಷ್ಯ ಏನೆಂದರೆ ಅಪ್ಪು ಇದ್ದಾಗಲೇ ಟಗರು 2 ನಲ್ಲಿ ಶಿವಣ್ಣ ಮತ್ತು ಪುನೀತ್ ಒಟ್ಟಿಗೆ ನಟಿಸುವ ಪ್ಲ್ಯಾನ್ ಮಾಡಲಾಗಿತ್ತು.
Advertisement
ಶಿವರಾಜ್ಕುಮಾರ್, ಭಾವನಾ ಮೆನನ್, ಮಾನ್ವಿತಾ ನಟನೆಯ ಸೂಪರ್ ಹಿಟ್ ಚಿತ್ರ `ಟಗರು’ 2018ರಲ್ಲಿ ಬಾಕ್ಸಾಫೀಸ್ ಲೂಟಿ ಮಾಡಿತ್ತು. ಶಿವಣ್ಣ ಜೊತೆ ಡಾಲಿ, ವಸಿಷ್ಠ ಸಿಂಹ ಕೂಡ ಖಡಕ್ ಆಗಿ ನಟಿಸಿದ್ರು. ಈ ಚಿತ್ರದ ಸಕ್ಸಸ್ ನಂತರ ದುನಿಯಾ ಸೂರಿ ಟಗರು 2 ಸಿನಿಮಾ ಮಾಡಬೇಕು ಅಂತಾ ತೆರೆಮರೆಯಲ್ಲಿ ಸ್ಕ್ರೀಪ್ಟ್ ಸಿದ್ಧತೆ ನಡೆಸಿದ್ರು. ಚಿತ್ರದ ಒನ್ಲೈನ್ ಕಥೆಯನ್ನ ಶಿವಣ್ಣ ಮತ್ತು ಪುನೀತ್ಗೆ ಹೇಳಲಾಗಿತ್ತು. ಚಿತ್ರಕಥೆ ಇಷ್ಟವಾಗಿ ದೂನಿಯಾ ಸೂರಿಗೆ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿತ್ತು. ಇದನ್ನೂ ಓದಿ: ಅಕ್ಷಯ್ ಕುಮಾರ್ಗೆ ಮತ್ತೆ ಕೊರೊನಾ ಸೋಂಕು: ಕಾನ್ ಫಿಲ್ಮ್ ಫೆಸ್ಟಿವಲ್ನಿಂದ ಔಟ್
Advertisement
Advertisement
`ಟಗರು 2′ ಚಿತ್ರದಲ್ಲಿ ಶಿವಣ್ಣ ಮತ್ತು ಅಪ್ಪು ಇಬ್ಬರಿಗೂ ಪೊಲೀಸ್ ಪಾತ್ರವಿತ್ತು. ಆ್ಯಕ್ಷನ್ ಕಂಟೆಂಟ್ ಜತೆ ಇಬ್ಬರು ರಾಜರತ್ನರನ್ನ ಕಣ್ತುಂಬಿಕೊಳ್ಳಬಹುದಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ಸ್ಟ್ರಾಂಗ್ ಕಥೆಯನ್ನ ತೆರೆಯ ಮೇಲೆ ತರೋದಕ್ಕೆ ದುನಿಯಾ ಸೂರಿ ಪ್ಲ್ಯಾನ್ ಮಾಡಿದ್ದಾರೆ. ಶಿವಣ್ಣನ ಎದುರು ಟಗರು 2ನಲ್ಲಿ ಅಪ್ಪು ಮಾಡಬೇಕಿದ್ದ ಪಾತ್ರಕ್ಕೆ ಯಾವ ನಟ ಕಾಣಿಸಿಕೊಳ್ಳಬಹುದು ಎಂಬ ಕುತೂಹಲ ಹುಟ್ಟು ಹಾಕಿದೆ. ಎಲ್ಲದಕ್ಕೂ ಚಿತ್ರತಂಡದ ಅಧಿಕೃತ ಮಾಹಿತಿಗಾಗಿ ಕಾದು ನೋಡಬೇಕಿದೆ.