ಬೆಂಗಳೂರು: ನಾವು ಬಾಲಿವುಡ್ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಹಾಡುಗಳನ್ನು ಚಿಕ್ಕವರಿದ್ದಾಗಿನಿಂದಲೂ ಕೇಳುತ್ತಾ ಬೆಳೆದಿದ್ದೇವೆ ಎಂದು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಸಂತಾಪ ವ್ಯಕ್ತಪಡಿಸಿದರು.
ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಇಂದು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧನರಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಾವು ಲತಾ ಮಂಗೇಶ್ಕರ್ ಅವರ ಹಾಡುಗಳನ್ನು ಚಿಕ್ಕವರಿದ್ದಾಗಿನಿಂದಲೂ ಕೇಳುತ್ತಾ ಬೆಳೆದಿದ್ದೇವೆ. ಭಾರತೀಯ ಚಲನಚಿತ್ರರಂಗದಲ್ಲಿ ಲತಾ ಅವರದ್ದು ಅತ್ಯುತ್ತಮ ಧ್ವನಿ ಎಂದರೇ ತಪ್ಪಾಗಲಾರದು. ಅಷ್ಟೇ ಅಲ್ಲದೆ ಅವರು ಹಾಡೋದನ್ನು ಬಿಟ್ಟು ಅದರ ಆಚೆಗೆ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದರು ಎಂದರು. ಇದನ್ನೂ ಓದಿ: ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಇನ್ನಿಲ್ಲ
Advertisement
Advertisement
ಲತಾ ಮಂಗೇಶ್ಕರ್ ಅವರನ್ನು ಭೇಟಿಯಾಗುವ ಭಾಗ್ಯ ನನಗೆ ಇದುವರೆಗೂ ಸಿಗಲಿಲ್ಲ. ಅಪ್ಪಾಜಿ ಡಾ. ರಾಜ್‍ಕುಮಾರ್ ಅವರನ್ನು ಭೇಟಿ ಮಾಡಿದ್ದರು. ನಮ್ಮ ಮಾವನವರಾದ ಬಂಗಾರಪ್ಪ ಅವರು ಕೂಡಾ ಅವರನ್ನು ಭೇಟಿ ಆಗಿದ್ದರು. ಬಂಗಾರಪ್ಪ ಅವರು ಸಿಎಂ ಆಗಿದ್ದಾಗ ಒಮ್ಮೆ ಅವರು ಬೆಂಗಳೂರಿಗೆ ಬಂದಿದ್ದ ಫೋಟೋವನ್ನು ನೋಡಿದ್ದು, ಮಧು ಬಂಗಾರಪ್ಪ ಅವರು ಅದನ್ನು ತೋರಿಸಿದ್ದರು ಎಂದು ಹೇಳಿದರು.
Advertisement
ಅಪ್ಪಾಜಿ ರಾಜ್‍ಕುಮಾರ್ ಅವರು ಈ ಹಿಂದೆ ಬಾಂಬೆಯಲ್ಲಿದ್ದಾಗ ಲತಾರವರನ್ನು ಭೇಟಿ ಆಗಿದ್ದಾರೆ. ಅವರ ಧ್ವನಿ ಭಾರತೀಯ ಚಲನಚಿತ್ರರಂಗದಲ್ಲಿ ಎಂದಿಂದಿಗೂ ಅಜರಾಮರ. ಬೇರೆ ಮಕ್ಕಳಿಗೂ ಹಾಡಲು ಪ್ರೋತ್ಸಾಹ ನೀಡುತ್ತಿದ್ದು, ಅಂತ ಒಳ್ಳೇಯ ವಕ್ತಿತ್ವದ ಗಾಯಕಿಯನ್ನು ಕಳೆದುಕೊಂಡಿರುವುದು ನಮಗೆ ತುಂಬಾ ನೋವು ತಂದಿದೆ. ಭಾರತೀಯ ಚಲನಚಿತ್ರ ರಂಗಕ್ಕೆ ಇದು ಒಂದು ದೊಡ್ಡ ನಷ್ಟ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ್ದ ಲತಾ ಮಂಗೇಶ್ಕರ್
Advertisement
ಲತಾ ಅವರು ಹಾಡಿರುವ ಅನೇಕ ಹಿಂದಿ ಸಾಫ್ಟ್, ಡಿವೋಶನಲ್ ಹಾಗೂ ಎಮೋಷನಲ್ ಹಾಡುಗಳ ಛಾಪು ಯಾವಗಲೂ ಸಂಗೀತಕ್ಷೇತ್ರದಲ್ಲಿ ಅಚ್ಚ ಅಳಿಯದೇ ಇದ್ದೇ ಇರುತ್ತೆ. ಅವರು ಹಾಡಿರುವ ಯಾವುದೇ ಹಾಡನ್ನು ಕೇಳಿದರು ಸಾಕು ಲತಾ ಮಂಗೇಶ್ಕರ್ ಅವರೇ ಹಾಡಿದ್ದಾರೆ ಅಂತಾ ಗೊತ್ತಾಗುತ್ತೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೌನ ಮುರಿದರು.