ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಹಬ್ಬವೋ ಹಬ್ಬ. 60ನೇ ವಸಂತಕ್ಕೆ ಕಾಲಿಟ್ಟ ಶುಭ ಸಂದರ್ಭದಲ್ಲಿ ಒಂದೊಂದೇ ಚಿತ್ರದ ಅಪ್‌ಡೇಟ್ಸ್ ರಿವೀಲ್ ಆಗುತ್ತಿದೆ. ಈ ವೇಳೆ ಸಂದೇಶ್ ನಾಗಾರಾಜ್ ನಿರ್ಮಾಣದ, ಶಿವಣ್ಣ ನಟನೆಯ ನಿರೀಕ್ಷಿತ ʻಘೋಸ್ಟ್ʼ ಚಿತ್ರದ ಪೋಸ್ಟರ್ ಅನ್ನು ಇಂದು ಕಿಚ್ಚ ಸುದೀಪ್ ರಿಲೀಸ್ ಮಾಡಿ, ನಟ ಶಿವಣ್ಣಗೆ ಶುಭ ಹಾರೈಸಿದ್ದಾರೆ.

On the occasion of ShivaAnna’s 60th Birthday, I’m glad to present the
‘KING OF ALL MASSES’ poster from his upcoming film #GHOST directed by Srini
Happy returns Anna,,, &
Best wishes to Sandesh Productions@NimmaShivanna@lordmgsrinivas@SandeshPro#KINGOFALLMASSES pic.twitter.com/n7CuIvYWpI
— Kichcha Sudeepa (@KicchaSudeep) July 12, 2022
`ಘೋಸ್ಟ್’ ಚಿತ್ರದ ಫಸ್ಟ್ ಲುಕ್ ಈ ಮೊದಲೇ ರಿಲೀಸ್ ಆಗಿ ಹೈಪ್ ಕ್ರಿಯೇಟ್ ಮಾಡಿತ್ತು. ಈ ಚಿತ್ರದ ನಯಾ ಪೋಸ್ಟರ್ ನೋಡುಗರನ್ನ ಸಿಕ್ಕಾಪಟ್ಟೆ ಅಟ್ರಾಕ್ಟ್ ಮಾಡುತ್ತಿದೆ. ಫುಲ್ ಮಾಸ್ ಶಿವಣ್ಣ ಪೋಸ್ ಮಾಡಿದ್ದಾರೆ. ರಿವಾಲ್ವರ್ ಹಿಂದೆ ನಿಂತಿರುವ ಶಿವಣ್ಣ ಖಡಕ್ ಲುಕ್ ಈ ಪೋಸ್ಟರ್‌ನಲ್ಲಿ ನೋಡಬಹುದಾಗಿದೆ. ಪಕ್ಕಾ ಮಾಸ್ ಕಥೆಗೆ ನಿರ್ದೇಶಕ ಶ್ರೀನಿ ಮೊದಲ ಬಾರಿಗೆ ಶಿವಣ್ಣ ಡೈರೆಕ್ಷನ್ ಮಾಡ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಈ ಚಿತ್ರ ಹೇಗೆ ಮೋಡಿ ಮಾಡಬಹುದು ಅಂತಾ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]

