ಕನ್ನಡದ ಬಗ್ಗೆ ಕಮಲ್ ಹಾಸನ್‌ಗೆ ಪ್ರೀತಿಯಿದೆ, ಯಾಕೆ ಅದನ್ನ ದೊಡ್ಡ ವಿಷಯ ಮಾಡ್ತೀರಾ?: ಶಿವಣ್ಣ

Public TV
1 Min Read
Shivarajkumar Kamal Haasan

– ಬರೀ ಬಾಯಿಮಾತಿಗೆ ಕನ್ನಡ ಕನ್ನಡ ಅನ್ನಬಾರದು: ವಿವಾದಕ್ಕೆ ಶಿವಣ್ಣ ಫಸ್ಟ್ ರಿಯಾಕ್ಷನ್

ಬೆಂಗಳೂರು: ಕನ್ನಡದ ಬಗ್ಗೆ ಕಮಲ್ ಹಾಸನ್ (Kamal Haasan) ಅವರಿಗೂ ಪ್ರೀತಿ ಇದೆ. ಈಗ ಯಾಕೆ ಅದನ್ನ ದೊಡ್ಡ ವಿಚಾರ ಮಾಡುತ್ತೀರಾ ಎಂದು ವಿವಾದದ ಬಗ್ಗೆ ನಟ ಶಿವಣ್ಣ (Shivarajkumar) ಪ್ರತಿಕ್ರಿಯೆ ನೀಡಿದ್ದಾರೆ.

ಕನ್ನಡ (Kannada) ತಮಿಳಿನಿಂದ ಹುಟ್ಟಿದ್ದು ಎಂಬ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ಕುರಿತು ಮಾತನಾಡಿದ ಅವರು, ಕಮಲ್ ಹಾಸನ್ ನನಗೆ ಬಹಳ ಇಷ್ಟ. ನನ್ನ ತಂದೆ ಮತ್ತು ಕಮಲ್ ಅವರ ಸಂಬಂಧ ಬೇರೆ. ಅದಕ್ಕಾಗಿ ನಾನು ಅವರ ಅಭಿಮಾನಿಯಲ್ಲ. ನಾನು ಕಮಲ್ ಅವರನ್ನು ನನಗೆ ಸ್ಪೂರ್ತಿ ಎಂದು ಭಾವಿಸಿದ್ದೇನೆ. ನಮ್ಮನ್ನ ಅವರ ಕಾರ್ಯಕ್ರಮಕ್ಕೆ ಕರೆದಿದ್ದರು. ಹೀಗಾಗಿ ಹೋದ್ವಿ- ಬಂದ್ವಿ ಅಷ್ಟೇ ಎಂದರು. ಇದನ್ನೂ ಓದಿ: ಶಶಿ ತರೂರ್ ಬಿಜೆಪಿಯ ಸೂಪರ್ ವಕ್ತಾರ ಆಗಿದ್ದಾರೆ: ಕಾಂಗ್ರೆಸ್ ಕಿಡಿ

ಬರೀ ಬಾಯಿಯಲ್ಲಿ ಮಾತ್ರ ಕನ್ನಡ ಕನ್ನಡ ಅನ್ನಬಾರದು. ಕನ್ನಡಕ್ಕಾಗಿ ನಾನು ಹೋರಾಟ ಮಾಡುತ್ತೇನೆ, ಕನ್ನಡಕ್ಕಾಗಿ ನಾನು ಸಾಯುತ್ತೇನೆ. ಕನ್ನಡ ಅಂತೀರಾ, ಸ್ಟಾರ್ ನಟರಿಗೆ ಮಾತ್ರ ಬೆಂಬಲಿಸೋದು. ಹೊಸಬರನ್ನೂ ಕೂಡ ಬೆಳೆಸಬೇಕು. ಕಮಲ್ ಹಾಸನ್ ಅವರಿಗೆ ಇದೆಲ್ಲ ಗೊತ್ತಾಗುತ್ತದೆ. ಅವರೇ ಅದನ್ನು ಸರಿ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: Kodagu | ಕಾಲೇಜು ಹಾಸ್ಟೆಲ್‌ನಲ್ಲಿ ರಾಯಚೂರು ಮೂಲದ ವಿದ್ಯಾರ್ಥಿನಿ ಆತ್ಮಹತ್ಯೆ

ಇದಕ್ಕೂ ಮುನ್ನ ಕೇರಳದಲ್ಲಿ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಲ್ ಹಾಸನ್, ನಾನು ಹೇಳಿದ್ದು ನನ್ನ ಪ್ರಕಾರ ಸರಿ. ನಾನು ಕ್ಷಮೆ ಕೇಳಲ್ಲ. ಭಾಷೆ ಬಗ್ಗೆ ಮಾತಾಡಲು ರಾಜಕಾರಣಿಗಳಿಗೆ ಅರ್ಹತೆ ಇಲ್ಲ. ಅನೇಕ ಇತಿಹಾಸಕಾರರು ನನಗೆ ಭಾಷಾ ಇತಿಹಾಸವನ್ನು ಕಲಿಸಿದ್ದಾರೆ. ಭಾಷೆ ಬಗ್ಗೆ ಆಳವಾದ ಚರ್ಚೆಗಳು ನಡೆಯಲಿ. ಇದನ್ನು ಇತಿಹಾಸಕಾರರು, ಪುರಾತತ್ವಶಾಸ್ತ್ರಜ್ಞರು ಮತ್ತು ಭಾಷಾ ತಜ್ಞರಿಗೆ ಬಿಡೋಣ ಎಂದಿದ್ದಾರೆ. ಇದನ್ನೂ ಓದಿ: ಯುಪಿಯಲ್ಲಿ ರೇಪಿಸ್ಟ್, ಕೊಲೆಗಾರರ ವಿರುದ್ಧ ‘ಆಪರೇಷನ್ ಲಂಗ್ಡಾ’ – 11 ಕ್ರಿಮಿನಲ್ಸ್ ಕಾಲಿಗೆ ಗುಂಡೇಟು

Share This Article