ಚಂದನವನದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ಜೇಮ್ಸ್’ ಸಿನಿಮಾ ರಿಲೀಸ್ ಆಗಿ ಒಂದು ವಾರ ಕಳೆದರೂ ಇದರ ಹವಾ ಮಾತ್ರ ಕಡಿಮೆಯಾಗಿಲ್ಲ. ಫಸ್ಟ್ ಡೇ ಫಸ್ಟ್ ಶೋ ಜೇಮ್ಸ್ ಸಿನಿಮಾ ನೋಡಿದ ಬಳಿಕವೂ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಪತ್ನಿ ಗೀತಾ ಅವರ ಜೊತೆ ಸಿನಿಮಾ ವೀಕ್ಷಿಸಿದ್ದಾರೆ.
ಶನಿವಾರ(ಇಂದು) ತ್ರಿವೇಣಿ ಚಿತ್ರಮಂದಿರದಲ್ಲಿ 4 ಗಂಟೆಗೆ ‘ಜೇಮ್ಸ್’ ಸಿನಿಮಾವನ್ನು ಫ್ಯಾನ್ಸ್ ಜೊತೆ ನೋಡಲು ಶಿವಣ್ಣ, ಗೀತಾ ಅವರಿಗೆ ರಿಯಲ್ ಸ್ಟಾರ್ ಉಪೇಂದ್ರ ಸಹ ಸಾಥ್ ಕೊಟ್ಟಿದ್ದಾರೆ. ಅಪ್ಪು ಸಿನಿಮಾನ್ನ ಫಸ್ಟ್ ಡೇ ಫಸ್ಟ್ ಶೋ ನೋಡಿದೆ. ಇವತ್ತು ಗೀತಾ ನಾನು ಒಟ್ಟಿಗೆ ಸಿನಿಮಾ ನೋಡಬೇಕು ಅಂತ ಬಂದಿದ್ವಿ. ನಾನು ಏನ್ ಹೇಳಲಿ ನನ್ನ ತಮ್ಮನ ನಟನೆ ಮತ್ತು ಅವನ ಬಗ್ಗೆ. ಅವರ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದೀನಿ. ಅಪ್ಪು ಇಲ್ಲ ಅನ್ನೋದು ಕಾಡುತ್ತೆ ಎಂದು ಹೇಳಿದರು. ಇದನ್ನೂ ಓದಿ: RRR ಸಿನಿಮಾದಲ್ಲಿ ತಾಂತ್ರಿಕ ದೋಷ- ಥಿಯೇಟರ್ ಗಾಜು ಹೊಡೆದ ಫ್ಯಾನ್ಸ್, ಟಿಕೆಟ್ ದರ ವಾಪಸ್
‘ಓಂ’ ಸಿನಿಮಾದ ನಂತ್ರ ನಾನು ಉಪೇಂದ್ರ ಜೊತೆ ‘ಜೈಲು’ ಎಂಬ ಹೊಸ ಸಿನಿಮಾ ಮಾಡಬೇಕು ಅನ್ನೋದು ಅಪ್ಪುಗೆ ಆಸೆಯಿತ್ತು. ಆದರೆ ಅದು ಆಗಿಲ್ಲ. ನಾನು ಮದುವೆ ಮಾಡಿಕೊಂಡು ಬಂದಾಗ ಅವನಿನ್ನೂ ಚಿಕ್ಕವನು. ಹೇಗೆ ಮರೆಯಲಿ? ಎಂದು ಭಾವುಕರಾದರು.
ಅಪ್ಪು ನೆನೆದು ಕಣ್ಣೀರು ಹಾಕಿದ ಗೀತಾ ಶಿವರಾಜ್ ಕುಮಾರ್, ಸಿನಿಮಾ ನೋಡ್ತಿದ್ರೆ ಸಾಕಷ್ಟು ನೆನಪಾಗುತ್ತೆ ಮಾತನಾಡಲಾಗುತ್ತಿಲ್ಲ ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: ಸಂಚಾರಿ ವಿಜಯ್ ‘ತಲೆದಂಡ’ ನೆನೆದ ಮಾಲಿವುಡ್ ಸೂಪರ್ ಸ್ಟಾರ್