ಗ್ಲೋಬಲ್ ಸ್ಟಾರ್ ರಾಮ್ ಚರಣ್‌ಗೆ (Ram Charan) ಇಂದು (ಮಾ.27) ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ರಾಮ್ ಚರಣ್‌ಗೆ ಶಿವಣ್ಣ ವಿಶೇಷವಾಗಿ ಹುಟ್ಟುಹಬ್ಬಕ್ಕೆ (Birthday) ಶುಭಕೋರಿದ್ದಾರೆ. ಇದನ್ನೂ ಓದಿ:ಸಂಕ್ರಾಂತಿಗೆ ಸ್ಟಾರ್ ವಾರ್- ವಿಜಯ್ ನಟನೆಯ ‘ಜನ ನಾಯಗನ್’ ಎದುರು ಅಬ್ಬರಿಸಲಿದೆ ಜ್ಯೂ.ಎನ್‌ಟಿಆರ್ ಸಿನಿಮಾ
‘ರಾಮ್ ಚರಣ್ ಯುವ ಶಕ್ತಿ’ ಎಂಬ ಬೆಂಗಳೂರು ಫ್ಯಾನ್ಸ್ ಟೀಮ್‌ವೊಂದು ಶಿವಣ್ಣ ನಿವಾಸಕ್ಕೆ ಭೇಟಿ ನೀಡಿದೆ. ರಾಮ್ ಚರಣ್ ಹುಟ್ಟುಹಬ್ಬದ ಪ್ರಯುಕ್ತ ಶಿವಣ್ಣ ಕೈಯಲ್ಲಿ ಕೇಕ್ ಕಟ್ ಮಾಡಿಸಿದ್ದಾರೆ. ಅದಷ್ಟೇ ಅಲ್ಲ, ನಟನ ಹುಟ್ಟುಹಬ್ಬಕ್ಕೆ ಬ್ಲಡ್ ಕ್ಯಾಂಪ್ ಕೂಡ ಮಾಡುತ್ತಿದ್ದಾರೆ.
ಈ ವೇಳೆ ಅಭಿಮಾನಿಗಳ ಜೊತೆ ರಾಮ್ ಚರಣ್ ಜೊತೆಗಿನ ಬಾಂಧವ್ಯದ ಬಗ್ಗೆ ಶಿವಣ್ಣ ಮಾತನಾಡಿ, ರಾಮ್ ಚರಣ್ ಸರ್‌ಗೆ ದೇವರು ಆರೋಗ್ಯ ಕೊಟ್ಟು ಕಾಪಾಡಲಿ. ಫಸ್ಟ್ ಟೈಮ್ ಅವರೊಂದಿಗೆ ‘ಪೆಡ್ಡಿ’ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂಬುದು ಖುಷಿಯಾದ ವಿಷಯ. ನನಗೆ ಅವರು ತುಂಬಾ ಇಷ್ಟವಾದ ವ್ಯಕ್ತಿ. ಅವರಿಗೆ ಆ್ಯಕ್ಟಿಂಗ್ ಅನ್ನು ಸರಾಗವಾಗಿ ಮಾಡುತ್ತಾರೆ. ತಂದೆಯ ಗುಣವೇ ಅವರಿಗೆ ಬಂದಿದೆ. ಅವರ ಕುಟುಂಬ ಜೊತೆಗಿನ ನಮ್ಮ ಒಡನಾಟ ಎಂದಿಗೂ ನಾನು ಮರೆಯೋದಿಲ್ಲ. ರಾಮ್ ಚರಣ್ ಸರ್ ದೇವರು ನಿಮಗೆ ಒಳ್ಳೆಯದು ಮಾಡಲಿ, ವಿ ಲವ್ ಯೂ ಎಂದು ಶಿವಣ್ಣ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.
ಇನ್ನೂ ರಾಮ್ ಚರಣ್ ಹುಟ್ಟುಹಬ್ಬದ ಹಿನ್ನೆಲೆ ‘ಆರ್‌ಸಿ 16’ ಚಿತ್ರದ ಟೈಟಲ್ ರಿವೀಲ್ ಆಗಿದೆ. ‘ಪೆಡ್ಡಿ’ (Peddi) ಎಂದು ಚಿತ್ರಕ್ಕೆ ಟೈಟಲ್ ಇಡಲಾಗಿದೆ. ರಾಮ್‌ಗೆ ನಾಯಕಿಯಾಗಿ ಜಾನ್ವಿ ಕಪೂರ್ (Janhvi Kapoor) ನಟಿಸುತ್ತಿದ್ದಾರೆ. ಶಿವಣ್ಣ ಕೂಡ ಪವರ್‌ಫುಲ್ ರೋಲ್ ಮಾಡುವ ಮೂಲಕ ಸಾಥ್ ನೀಡುತ್ತಿದ್ದಾರೆ. ಈ ಚಿತ್ರವನ್ನು ‘ಉಪ್ಪೇನ’ (Uppena) ಖ್ಯಾತಿಯ ನಿರ್ದೇಶಕ ಬುಚ್ಚಿ ಬಾಬು ಸನಾ ನಿರ್ದೇಶನ ಮಾಡ್ತಿದ್ದಾರೆ.