ನಂದಿನಿ ಉತ್ಪನ್ನಗಳಿಗೆ ಶಿವಣ್ಣ ರಾಯಭಾರಿ: ತಂದೆ-ತಮ್ಮನ ಹಾದಿಯಲ್ಲಿ ಸೆಂಚುರಿಸ್ಟಾರ್

Public TV
1 Min Read
Shiavaraj kumar

ರ್ನಾಟಕದ ಹೆಮ್ಮೆಯ ಪ್ರತೀಕ ನಂದಿನಿ ಹಾಲು ಉತ್ಪನ್ನಗಳಿಗೆ (Nandini Product) ರಾಯಭಾರಿಯಾಗಿ ಸ್ಯಾಂಡಲ್ ವುಡ್ ನ ಹೆಸರಾಂತ ನಟ ಶಿವರಾಜ್ ಕುಮಾರ್ ಆಯ್ಕೆಯಾಗಿದ್ದಾರೆ. ಇಂದು ಶಿವರಾಜ್ ಕುಮಾರ್ ಜೊತೆ ಕೆಎಂಎಫ್ ಅಧಿಕಾರಿಗಳು ಮಾತುಕತೆ ನಡೆಸಿ, ಶಿವರಾಜ್ ಕುಮಾರ್ (Shivaraj Kumar) ಅವರನ್ನು ಒಪ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸೇರಿದಂತೆ ಹಲವರು ಹಾಜರಿದ್ದರು.

Nandini
ಕೆಎಂಎಫ್ (KMF) ಗೂ ಡಾ.ರಾಜ್ ಕುಟುಂಬಕ್ಕೂ ಹತ್ತಿರದ ನಂಟಿದೆ. 1996ರಲ್ಲಿ ಡಾ.ರಾಜ್ ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಿ (Ambassador) ಒಪ್ಪಿಕೊಂಡರು. ಉಚಿತವಾಗಿಯೇ ಅದನ್ನು ಮಾಡಿಕೊಂಡು ಬಂದರು. ಡಾ.ರಾಜ್ ಕುಮಾರ್ ಕಾಣಿಸಿಕೊಂಡ ಏಕೈಕ ಜಾಹೀರಾತು ಅದಾಗಿತ್ತು. ಡಾ.ರಾಜ್ ಕುಮಾರ್ ಮರಣಾನಂತರ ಆ ಜವಾಬ್ದಾರಿಯನ್ನು ಪುನೀತ್ ರಾಜ್ ಕುಮಾರ್ (Puneeth) ಮುಂದುವರೆಸಿಕೊಂಡು ಹೋಗುತ್ತಿದ್ದರು.


ಪುನೀತ್ ನಿಧನಾನಂತರ ಮತ್ತೆ ಡಾ.ರಾಜ್ (Raj Kumar) ಕುಟುಂಬಕ್ಕೆ ಆ ಸೇವೆ ಹುಡುಕಿಕೊಂಡು ಹೋಗಿದೆ. ಶಿವರಾಜ್ ಕುಮಾರ್ ಕೂಡ ನಂದಿನಿ ಉತ್ಪನ್ನಗಳ ರಾಯಭಾರಿಯಾಗಿ ತಂದೆ ಮತ್ತು ಸಹೋದರನ ಕೆಲಸವನ್ನು ಮುಂದುರೆಸಿಕೊಂಡು ಹೋಗಲಿದ್ದಾರೆ. 1996ರಿಂದ ಡಾ.ರಾಜ್ ಕುಮಾರ್ ರಾಯಭಾರಿಯಾಗಿದ್ದರೆ, 2009ರಲ್ಲಿ ಪುನೀತ್ ನೇಮಕವಾಗಿದ್ದರು. 2023ರಿಂದ ಆ ಜವಾಬ್ದಾರಿಯನ್ನು ಶಿವಣ್ಣ ವಹಿಸಿಕೊಂಡಿದ್ದಾರೆ.

Web Stories

Share This Article