ಕೊಪ್ಪಳ: ಈ ಹಿಂದೆ ಎಸ್‍ಟಿ (ST) ಸಮುದಾಯ ಕಾಂಗ್ರೆಸ್ (Congress) ಕಡೆ ಇತ್ತು. ಇದೀಗ ಸಮುದಾಯದ ಜನರು ಬಿಜೆಪಿಗೆ (BJP) ವಾಲಿದ್ದಾರೆ. ಶ್ರೀರಾಮುಲು (Sriramulu) ಬಂದ ನಂತರ ಕಾಂಗ್ರೆಸ್ ಪಕ್ಷದ ಪುರಷತ್ವ ಕಟ್ ಮಾಡಿದ್ದಾರೆ ಎಂದು ಶಾಸಕ ಶಿವನಗೌಡ ನಾಯಕ್ (ShivanaGowda Naik) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Advertisement
ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮೀಸಲಾತಿ ನೀಡಿದ್ದರೆ ನಾವು ಸ್ವಾಗತಿಸುತ್ತಿದ್ದೆವು. ಆದರೆ, ನಾಲ್ಕು ದಶಕದಿಂದ ಮೀಸಲಾತಿ ನೀಡಲಿಲ್ಲ. ಕಡೆಗೆ ಬಿಜೆಪಿಯೇ ಮೀಸಲಾತಿ ನೀಡಿದೆ. ಮೀಸಲಾತಿ ನೀಡಲು ಸಂಘ ಪರಿವಾರ ಬೆಂಬಲಿಸಿತು ಎಂದಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಭೀಕರ ರಸ್ತೆ ಅಫಘಾತ – ಐವರು ಕೂಲಿಕಾರ್ಮಿಕ ಮಹಿಳೆಯರು ಸಾವು
Advertisement
Advertisement
ಎಸ್‍ಟಿ ಸಮುದಾಯದ ಶ್ರೀರಾಮುಲು ಅವರಿಂದಾಗಿ ಸಮುದಾಯದ ಜನರು ಬಿಜೆಪಿಗೆ ವಾಲಿದ್ದಾರೆ. ಶ್ರೀರಾಮುಲು ಪ್ರಯಾಣ ನೋಡಿ ವಿಪಕ್ಷಗಳು ದಂಗಾಗಿದೆ. ಬಿಜೆಪಿಯು ವಾಲ್ಮೀಕಿ ಸಮಾಜದ ಪರ ಇದೆ. ಪಕ್ಷವು ಸಮಯ ಬಂದರೆ ಶ್ರೀರಾಮುಲು ಅವರಿಗೆ ಉತ್ತಮ ಸ್ಥಾನ ನೀಡಲಿದೆ. ಸಿಎಂ ಆಗುವ ಅವಕಾಶ ಬರುತ್ತದೆ. ವಾಲ್ಮೀಕಿ ಸಮಾಜದ ಜನ ಶ್ರೀರಾಮುಲು ಜೊತೆ ನಿಲ್ಲಬೇಕು. ಬಳ್ಳಾರಿಯಲ್ಲಿ ನಡೆಯುವ ಎಸ್‍ಟಿ ಸಮಾವೇಶಕ್ಕೆ ರಾಯಚೂರಿನಿಂದ 1 ಲಕ್ಷ ಜನರನ್ನು ಕರೆ ತರಲಾಗುವುದು. ಕೊಪ್ಪಳದಿಂದ ಲಕ್ಷಾಂತರ ಜನರು ಬರಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಿಂದೂ ಜಪ ಆರಂಭಿಸಿದ ಪರಮೇಶ್ವರ್ – ಗೋ ಪೂಜೆ, ಧರ್ಮಗೋಷ್ಠಿ ಆಯೋಜನೆ