ಶಿವಮೊಗ್ಗ: ಉದ್ವಿಗ್ನಗೊಂಡಿರುವ ಶಿವಮೊಗ್ಗದಲ್ಲಿ ಇಂದು ಸಹ ನಿಷೇಧಾಜ್ಞೆ ಮುಂದುವರಿದಿದೆ. ಇಂದಿನಿಂದ ಶಾಲಾ-ಕಾಲೇಜುಗಳು ಮತ್ತೆ ಆರಂಭಗೊಂಡಿವೆ.
Advertisement
ಘಟನೆ ನಡೆದಾಗಿನಿಂದ ಶಿವಮೊಗ್ಗದಲ್ಲೇ ಇರುವ ಎಡಿಜಿಪಿ ಅಲೋಕ್ ಕುಮಾರ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. 40 ವರ್ಷದೊಳಗಿನ ಜನರ ಮೇಲೆ ಪೊಲೀಸ್ ಕಣ್ಗಾವಲು ಇಡಲಾಗಿದೆ. ನಗರದಲ್ಲಿ 10 ಕೆಎಸ್ಆರ್ಪಿ ತುಕಡಿ, 10 ಡಿಎಆರ್, 1 ಆರ್ಎಎಫ್, 3 ಅಡಿಷನಲ್ ಎಸ್ಪಿ, 10 ಡಿವೈಎಸ್ಪಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ.
Advertisement
Advertisement
ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ. ಈ ಮಧ್ಯೆ ಭದ್ರಾವತಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬೆಂಕಿ ಹಚ್ಚಲಾಗಿದೆ. ಇದನ್ನೂ ಓದಿ: ದಲಿತ ಬಾಲಕನ ಸಾವಿನಿಂದ ಹೆಚ್ಚಿದ ಕಾವು – ಕಾಂಗ್ರೆಸ್ನ 12 ಕೌನ್ಸಿಲರ್ಗಳು ದಿಢೀರ್ ರಾಜೀನಾಮೆ