ಬೆಂಗಳೂರು: ಶಿವಮೊಗ್ಗದ ತುಂಗಾ ತೀರದಲ್ಲಿ ನಡೆದಿದ್ದ ಬಾಂಬ್ ಟ್ರಯಲ್ ಬ್ಲ್ಯಾಸ್ಟ್ ಪ್ರಕರಣಕ್ಕೆ (Shivamogga Trial Blast Case) ರೋಚಕ ಟ್ವಿಸ್ಟ್ ಸಿಕ್ಕಿದೆ. ಮತ್ತಿಬ್ಬರು ಶಂಕಿತ ಉಗ್ರರನ್ನು ರಾಷ್ಟ್ರೀತ ತಿನಿಖಾ ದಳ(NIA) ಬಂಧಿಸಿದೆ.
ಟ್ರಯಲ್ ಬ್ಲಾಸ್ಟ್ ಸಂಬಂಧ ರಾಜ್ಯದ ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ ಮತ್ತು ಬೆಂಗಳೂರು ಸೇರಿದಂತೆ 6 ಕಡೆ ಎನ್ಐಎ ದಾಳಿ ನಡೆಸಿದೆ. ದಾಳಿ ವೇಳೆ ಇಬ್ಬರು ಐಸಿಸ್ ಸಕ್ರಿಯ ಸದಸ್ಯರಾದ ಉಡುಪಿ ಬ್ರಹ್ಮಾವರದ ವರಂಬಳ್ಳಿ ರೇಶಾನ್ ತಾಜೂದ್ದೀನ್ ಶೇಕ್ ಮತ್ತು ಶಿವಮೊಗ್ಗದ ಟಿಪ್ಪು ಸುಲ್ತಾನ್ ನಗರದ ಹುಝೇರ್ ಪಾರ್ಹನ್ ಬೇಗ್‌ನನ್ನು ಬಂಧನ ಮಾಡಲಾಗಿದೆ. ಇದನ್ನೂ ಓದಿ: ಮಂಗಳೂರಿನ ಎಂಜಿನಿಯರಿಂಗ್ ಕಾಲೇಜ್ ಮೇಲೆ NIA ದಾಳಿ
Advertisement
Advertisement
ಪ್ರಕರಣದ ಎ2 ಆರೋಪಿಯಾಗಿದ್ದ ಮಾಜ್ ವಿಚಾರಣೆ ವೇಳೆ ಇಬ್ಬರ ಹೆಸರು ಬೆಳಕಿಗೆ ಬಂದಿತ್ತು. ಆರೋಪಿ ಮಾಜ್ ಗೆ ರೇಶಾನ್ ತಾಜೂದ್ದೀನ್ ಸಹಪಾಠಿಯಾಗಿದ್ದ. ಇಬ್ಬರು ಆರೋಪಿಗಳು ಐಸಿಸ್ ಸಂಪರ್ಕಿತರಿಂದ ಕ್ರಿಪ್ಟೋ ವ್ಯಾಲೆಟ್ ಹಣ ಪಡೆದು ದೊಡ್ಡ ಮಟ್ಟದ ದುಷ್ಕೃತ್ಯ ಮತ್ತು ಚಟುವಟಿಕೆ ನಡೆಸುವವರಿಗೆ ಹಣ ಒದಗಿಸಿದ ಆರೋಪ ಕೇಳಿ ಬಂದಿದೆ.
Advertisement
ದಾಳಿ ವೇಳೆ ಡಿಜಿಟಲ್ ಸಾಧನ ಮತ್ತು ಹಲವು ದಾಖಲೆಗಳು ಸಿಕ್ಕಿದ್ದು, ದೊಡ್ಡ ದೊಡ್ಡ ಲಿಕ್ಕರ್ ಶಾಪ್, ಗೋಡಾನ್ ಹಾಗೂ ಟ್ರಾನ್ಸ್ ಫರ್ಮರ್‌ಗಳಿಗೆ ಬೆಂಕಿ ಹಚ್ಚಲು ಟಾರ್ಗೆಟ್ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ.
Advertisement
ದೇಶದ ಏಕತೆ, ಸಾರ್ವಭೌಮತೆ ಮತ್ತು ಭದ್ರತೆಗೆ ದಕ್ಕೆ ಉಂಟು ಮಾಡಲು ಸಂಚು ರೂಪಿಸಿದ ಆರೋಪಿಗಳನ್ನ ಸದ್ಯ ಎನ್‌ಐಎ ಬಂಧಿಸಿ ವಿಚಾರಣೆ ನಡೆಸುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k