ಶಿವಮೊಗ್ಗ: ನನ್ನ ಗಂಡ ನಮಾಜ್‌ಗೆ ಎಂದು ಹೋಗಿದ್ರು, ಆ ಗಲಾಟೆಗೂ ನನ್ನ ಪತಿಗೂ ಸಂಬಂಧ ಇಲ್ಲ ಎಂದು ಶಿವಮೊಗ್ಗದ ಚಾಕು ಇರಿತದ ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್ ಜಬಿ ಪತ್ನಿ ಶಬಾನಾ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದೇವೆ. ಸರ್ಕಲ್‌ನಲ್ಲಿ ಗಲಾಟೆ ಆಗುತ್ತಿದೆ ಎಂದು ಮಾತ್ರ ಗೊತ್ತಿತ್ತು. ಆದರೆ ಆ ಘಟನೆಗೂ ನನ್ನ ಪತಿಗೂ ಯಾವುದೇ ಸಂಬಂಧವಿರಲಿಲ್ಲ. ಆದರೂ ಊಟ ಮಾಡುತ್ತಿದ್ದ ನನ್ನ ಗಂಡನನ್ನು ರಾತ್ರಿ 9 ಗಂಟೆಗೆ ಐದು ಜನ ಪೊಲೀಸರು ಕರ್ಕೊಂಡು ಹೋದರು. ನನ್ನ ಪತಿ ಓಡಿ ಹೋಗುವ ಪ್ರಯತ್ನವನ್ನು ಕೂಡ ಮಾಡಿಲ್ಲ. ಆದರೂ ಬಾಯಿಗೆ ಬಟ್ಟೆ ಕಟ್ಟಿ ಕಾಲಿಗೆ ಗುಂಡು ಹೊಡೆದಿದ್ದಾರೆ ಎಂದು ಆರೋಪಿಸಿದರು.
Advertisement
Advertisement
ಪೊಲೀಸರು ಮನೆಗೆ ಬಂದಾಗ ಪತಿಯನ್ನು ಎಲ್ಲಿಗೆ ಕರ್ಕೊಂಡು ಹೋಗ್ತೀವಿ ಎಂದು ನನಗೆ ಹೇಳಿರಲಿಲ್ಲ. ಬದಲಿಗೆ ಮತ್ತೆ ಕರ್ಕೊಂಡು ಬರುತ್ತೇವೆ ಎಂದು ಪೊಲೀಸರು ಹೇಳಿ ಹೋಗಿದ್ದರು. ಅದಾದ ಬಳಿಕ ಪೊಲೀಸರು ಮತ್ತೆ ಬಂದು ನನ್ನ ಪೋನ್ ಕಸಿದುಕೊಂಡು ಹೋದರು ಎಂದು ಕಿಡಿಕಾರಿದರು. ಇದನ್ನೂ ಓದಿ: ದಲಿತ ಬಾಲಕನ ಸಾವಿನಿಂದ ಹೆಚ್ಚಿದ ಕಾವು – ಕಾಂಗ್ರೆಸ್‌ನ 12 ಕೌನ್ಸಿಲರ್‌ಗಳು ದಿಢೀರ್ ರಾಜೀನಾಮೆ
Advertisement
ಮನೆಯಿಂದ 9 ಗಂಟೆಗೆ ಕರ್ಕೊಂಡು ಹೋಗಿದ್ದು, ಆದರೆ 4 ಗಂಟೆಗೆ ಅರೆಸ್ಟ್ ಮಾಡಿದ್ವಿ, ಚೂರಿ ಹಾಕಿದ್ರು ಎಂದು ಪೊಲೀಸರು ಹೇಳುತ್ತಿದ್ದಾರೆ. ಜಬಿಗೆ ಯಾವುದೇ ಸಂಘಟನೆಯ ಜೊತೆ ಸಂಪರ್ಕ ಇಲ್ಲ. ಅಂತಹ ಗೋಜಿಗೆ ಹೋಗಿಲ್ಲ. ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದಾರೆ ಎಂದ ಅವರು, ರಾತ್ರಿ 9 ಗಂಟೆಗೆ ಪೊಲೀಸರು ಕರ್ಕೊಂಡು ಹೋದ್ರೆ ಬೆಳಗಿನ ಜಾವ 4 ಗಂಟೆಗೆ ಚೂರಿ ಎಲ್ಲಿಂದ ಬರುತ್ತೆ ಎಂದು ಪ್ರಶ್ನಿಸಿದರು.
Advertisement
ಮುಖದ ಮೇಲೆ ಬಟ್ಟೆ ಹಾಕಿ ಶೂಟ್ ಮಾಡೋದು ಯಾವ ಕಾನೂನಿನಲ್ಲಿ ಇದೆ. ಮೂರು ಮಕ್ಕಳು ಗಂಡ ಹೆಂಡತಿ ಜೀವನ ಮಾಡುತ್ತಾ ಇದ್ದೀವಿ. ಈಗ ನನ್ನ ಗಂಡನನ್ನು ಅರೆಸ್ಟ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾಶ್ಮೀರಿ ಪಂಡಿತನ ಹತ್ಯೆ ಬಳಿಕ ಮತ್ತಷ್ಟು ದಾಳಿಗಳ ಎಚ್ಚರಿಕೆ