ಶಿವಮೊಗ್ಗ: ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿರುವುದರಿಂದ ಜಿಲ್ಲೆಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಟೇಲ್ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು, ಪಾಲಿಕೆ ವತಿಯಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಮಾರ್ಚ್ 27ರಿಂದ ಪ್ಯಾಕ್ಡ್ ಆಹಾರ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ.
ಗ್ರಾಹಕರು ದೂರವಾಣಿ ಮೂಲಕ ಆರ್ಡರ್ ಮಾಡಿದರೆ ಒಂದು ಗಂಟೆಯ ಒಳಗಾಗಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟ ಮನೆ ಬಾಗಿಲಿಗೆ ಬರಲಿದೆ. ಈ ಆಹಾರದ ಮೆನು ಹಾಗೂ ಬೆಲೆ ಎಷ್ಟು? ಎನ್ನುವುದರ ಮಾಹಿತಿ ಇಲ್ಲಿದೆ.
Advertisement
Advertisement
ಬೆಳಗಿನ ಉಪಹಾರ :
2ಇಡ್ಲಿ-1 ವಡೆ 40 ರೂ.
ಉಪ್ಪಿಟ್ಟು- 30 ರೂ.
ಸೆಟ್‍ದೋಸೆ- 50 ರೂ.
ರೈಸ್‍ಬಾತ್ ವಿತ್ ಚಟ್ನಿ- 50 ರೂ.
Advertisement
ಮಧ್ಯಾಹ್ನದ ಊಟ:
ಚಪಾತಿ, ಪಲ್ಯ, ವೈಟ್‍ರೈಸ್, ಸಾಂಬಾರ್, ಪಾಪಡ್, ಮಜ್ಜಿಗೆ- 80 ರೂ.
ಮಿನಿಮೀಲ್ಸ್- 40 ರೂ.
ರೈಸ್ ಬಾತ್, ಸಾಗು ಹಾಗೂ ಮೊಸರನ್ನ, ಉಪ್ಪಿನಕಾಯಿ- 60 ರೂ.
Advertisement
ರಾತ್ರಿ ಊಟ:
2 ಚಪಾತಿ, ಸಾಗು 50 ರೂ.
ರೈಸ್ ಬಾತ್, ಸಾಗು ಹಾಗೂ ಮೊಸರನ್ನ, ಉಪ್ಪಿನಕಾಯಿ 60 ರೂ.
ಬೆಳಗಿನ ಉಪಹಾರದ ಅವಧಿ ಬೆಳಿಗ್ಗೆ 7:30ರಿಂದ 10ರವರೆಗೆ, ಮಧ್ಯಾಹ್ನದ ಊಟ 12:30ರಿಂದ 3ರವರೆಗೆ ಮತ್ತು ರಾತ್ರಿ ಊಟ 7:30ರಿಂದ 8:30ರವರೆಗೆ ಲಭ್ಯವಿರುತ್ತದೆ. ಬಿಲ್‍ನ ಮೊತ್ತವನ್ನು ಪೇಟಿಯಂ, ಗೂಗಲ್‍ಪೇ ಅಥವಾ ನಗದು ರೂಪದಲ್ಲಿ ಸಂದಾಯ ಮಾಡಬಹುದಾಗಿದೆ. ಆರ್ಡರ್ ನೀಡಲು 9972593256 ಅಥವಾ 7829678298 ಸಂಪರ್ಕಿಸುವಂತೆ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ತಿಳಿಸಿದ್ದಾರೆ.