ಶಿವಮೊಗ್ಗ: ಧರ್ಮಾಧಾರಿತವಾಗಿ ಭಾರತವನ್ನು ಒಡೆದವರು ಕಾಂಗ್ರೆಸ್ಸಿಗರು. ಭಾರತ ಕಟ್ಟುವುದಕ್ಕೆ ಕಾಂಗ್ರೆಸ್ ಬಿಡುತ್ತಿಲ್ಲ. ಒಂದೇ ತಾಯಿಯ ಮಕ್ಕಳಾದ ಹಿಂದೂ, ಮುಸ್ಲಿಮರನ್ನು ಬೇರೆ ಮಾಡಿ ಭಾರತಕ್ಕೆ ಕಾಂಗ್ರೆಸ್ ದ್ರೋಹ ಮಾಡುತ್ತಿದೆ. ಪೌರತ್ವ ಕಾಯ್ದೆ ಯಾವ ಹಕ್ಕನ್ನೂ ಕಿತ್ತುಕೊಳ್ಳುವುದಿಲ್ಲ ಎಂದು ವಿಧಾನ ಪರಿಷತ್‍ನ ಮಾಜಿ ಸಭಾಪತಿ ಡಿ.ಎಚ್ ಶಂಕರಮೂರ್ತಿ ಕಾಂಗ್ರೆಸ್ ವಿರುದ್ಧ ಆರೋಪಿಸಿದರು.
ತೀರ್ಥಹಳ್ಳಿಯ ತಾಲೂಕು ಕಚೇರಿ ಎದುರು ನಡೆದ ಪೌರತ್ವ ಕಾಯ್ದೆ ಬೆಂಬಲಿಸಿ ತಾಲೂಕು ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಬೃಹತ್ ಜನ ಜಾಗೃತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ನಂತರ ಭಾರತ, ಪಾಕಿಸ್ತಾನವನ್ನು ಒಡೆದ ಕಾಂಗ್ರೆಸ್ ಇಂದು ರಾಜಕೀಯ ದುರುದ್ದೇಶದಿಂದ ದೇಶದಲ್ಲಿ ದ್ವೇಷದ ವಿಷ ಬೀಜ ಬಿತ್ತುತ್ತಿದೆ. ಅಖಂಡ ಭಾರತವನ್ನು ಧರ್ಮಾಧಾರಿತವಾಗಿ ಒಡೆಯುವುದು ಬೇಡ ಎಂದು ಮಹಾತ್ಮ ಗಾಂಧಿಜೀ, ಅಂಬೇಡ್ಕರ್ ಹಲವು ಬಾರಿ ಮನವಿ ಮಾಡಿದರೂ ಕಾಂಗ್ರೆಸ್ ಕೇಳಲಿಲ್ಲ. ಕಾಂಗ್ರೆಸ್ ಸುಳ್ಳನ್ನು ಬಂಡವಾಳ ಮಾಡಿಕೊಂಡಿದೆ. ದೇಶ ಕಟ್ಟುವ ಬದಲು ಛಿದ್ರ ಮಾಡುವ ಹುನ್ನಾರ ನಡೆಸುತ್ತಿದೆ. ಇನ್ನೊಮ್ಮೆ ದೇಶವನ್ನು ಒಡೆಯಲು ಧರ್ಮದ ಹೆಸರಿನಲ್ಲಿ ಜನರನ್ನು ಬೀದಿಗೆ ತಂದು ನಿಲ್ಲಿಸುತ್ತಿದೆ ಎಂದರು.
Advertisement
Advertisement
ಪೌರತ್ವ ಕಾಯ್ದೆ ಮುಸ್ಲಿಮರು, ದಲಿತರು, ಹಿಂದುಳಿದ ವರ್ಗದವರಿಗೆ ತೊಂದರೆ ಉಂಟು ಮಾಡುತ್ತದೆ ಎಂದು ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಅಪ ಪ್ರಚಾರದಲ್ಲಿ ತೊಡಗಿವೆ. ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ಜಾರಿಗೆ ತಂದಿದ್ದು, ಎಷ್ಟೇ ಪ್ರತಿರೋಧ ಎದುರಾದರೂ ವಾಪಸ್ ಪಡೆಯುವುದಿಲ್ಲ. ಬಿಜೆಪಿ ಮನೆ ಮನೆಗೆ ತೆರಳಿ ಪೌರತ್ವ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅಸ್ಸಾಂನಲ್ಲಿ ಎನ್‍ಆರ್ ಸಿ ನಿಯಮ ಜಾರಿಗೆ ತಂದರು. 1950ರಲ್ಲಿ ಪೌರತ್ವ ಪರ ಕಾಂಗ್ರೆಸ್ ನಿರ್ಣಯ ಕೈಗೊಂಡಿದೆ. ಈಗಿನ ಪ್ರಸ್ತುತ ಕಾಂಗ್ರೆಸ್ ಪೌರತ್ವ ವಿರೋಧಿಸಿ ನಿರ್ಣಯ ತೆಗೆದುಕೊಂಡಿದ್ದು ಇಂತಹ ದ್ವಂದ್ವ ನಿಲುವು ಏಕೆ ಎಂದು ಶಂಕರಮೂರ್ತಿ ಪ್ರಶ್ನಿಸಿದರು.
Advertisement