– ಮುಂಬೈ, ಬೆಳಗಾವಿ ಗಡಿ ಮೂಲಕ ಬಸ್ಸಿನಲ್ಲಿ ಶಿವಮೊಗ್ಗಕ್ಕೆ ಎಂಟ್ರಿ
ಶಿವಮೊಗ್ಗ: ಗುಜರಾತ್‍ನ ಅಹಮದಾಬಾದ್‍ನಿಂದ ಶುಕ್ರವಾರ ರಾತ್ರಿ ಶಿವಮೊಗ್ಗಕ್ಕೆ ವಾಪಸ್ ಬಂದಿದ್ದ ತಬ್ಲಿಘಿಗಳಿಂದ ಈಗ ಗ್ರೀನ್ ಝೋನ್‍ನಲ್ಲಿದ್ದ ಜಿಲ್ಲೆ ರೆಡ್ ಝೋನ್ ಪಟ್ಟಿಗೆ ಸೇರಿದೆ.
ಅಹಮದಾಬಾದ್‍ನಿಂದ ಬಂದ 9 ತಬ್ಲಿಘಿಗಳ ಪೈಕಿ 8 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಾರ್ಚ್ 5ರಂದು ಗುಜರಾತ್‍ನ ಅಹಮದಾಬಾದ್‍ಗೆ ದಾವಣಗೆರೆಯಿಂದ ರೈಲಿನ ಮೂಲಕ ಜಿಲ್ಲೆಯ ಈ 9 ಜನರು ತೆರಳಿದ್ದರು. ಜಮಾತ್‍ನ ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿದ ನಂತರ ಮಸೀದಿಯೊಂದರಲ್ಲಿ ಇವರೆಲ್ಲಾ ಆಶ್ರಯ ಪಡೆದಿದ್ದರು. ಅಲ್ಲದೇ ಲಾಕ್‍ಡೌನ್ ವೇಳೆ ಗುಜರಾತ್ ಸರ್ಕಾರ ಇವರನ್ನೆಲ್ಲಾ ಕ್ವಾರಂಟೈನ್‍ನಲ್ಲಿ ಕೂಡ ಇರಿಸಿತ್ತು. ಅಲ್ಲಿನ ಸರ್ಕಾರದ ಅನುಮತಿ ಮೇರೆಗೆ ಶುಕ್ರವಾರ ರಾತ್ರಿ ಈ ತಬ್ಲಿಘಿಗಳು ಮುಂಬೈ, ಬೆಳಗಾವಿ ಮೂಲಕ ಶಿವಮೊಗ್ಗಕ್ಕೆ ಎಂಟ್ರಿಯಾಗಿದ್ದರು. ಗುಜರಾತ್‍ನಿಂದ ಬಸ್ಸಿನಲ್ಲಿ ಬಂದಿದ್ದ ತಬ್ಲಿಘಿಗಳು ಮೊದಲು ನಗರದ ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣಕ್ಕೆ ತಲುಪಿದ್ದರು. ಇವರನ್ನು ಬಿಟ್ಟು ಬಸ್ ಗುಜರಾತ್‍ಗೆ ವಾಪಸ್ ತೆರೆಳಿದೆ. ಇದನ್ನೂ ಓದಿ: ತಬ್ಲಿಘಿಗಳಿಂದ ಶಿವಮೊಗ್ಗಕ್ಕೂ ವಕ್ಕರಿಸಿದ ಕೊರೊನಾ – 8 ಸೋಂಕಿತ ಪ್ರಕರಣ ಪತ್ತೆ
Advertisement
Advertisement
ಇವರೆಲ್ಲರನ್ನೂ ಪ್ರಾಥಮಿಕ ಹಂತದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಹಾಗೆಯೇ ಶಿವಮೊಗ್ಗದ ಬಾಪೂಜಿನಗರದ ಹಾಸ್ಟೆಲ್‍ವೊಂದರಲ್ಲಿ ಇವರನ್ನು ಕ್ವಾರಂಟೈನ್ ಮಾಡಿ ನಿಗಾವಹಿಸಲಾಗಿತ್ತು. ಆದರೆ ಇಂದು ಈ 9 ಮಂದಿಯಲ್ಲಿ 8 ಮಂದಿಗೆ ಸೊಂಕು ತಗುಲಿರುವುದು ದೃಢಪಟ್ಟಿದೆ. ಕೊರೊನಾ ದೃಢಪಟ್ಟ 8 ಸೋಂಕಿತರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
Advertisement
ಸೋಂಕಿತರ ವಿವರ:
ರೋಗಿ 808: ಶಿವಮೊಗ್ಗದ ಶಿಕಾರಿಪುರದ 65 ವರ್ಷದ ವೃದ್ಧ. ಅಹಮದಾಬಾದ್, ಗುಜರಾತ್‍ಗೆ ಪ್ರಯಾಣಿಸಿದ್ದರು.
ರೋಗಿ 809: ಶಿವಮೊಗ್ಗದ ಶಿಕಾರಿಪುರದ 65 ವರ್ಷದ ವೃದ್ಧ. ಅಹಮದಾಬಾದ್, ಗುಜರಾತ್‍ಗೆ ಪ್ರಯಾಣಿಸಿದ್ದರು.
ರೋಗಿ-810: ಶಿವಮೊಗ್ಗ ಶಿಕಾರಿಪುರದ 18 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
ರೋಗಿ-811: ಶಿವಮೊಗ್ಗ ಶಿಕಾರಿಪುರದ 56 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
ರೋಗಿ-812: ಶಿವಮೊಗ್ಗ ಶಿಕಾರಿಪುರದ 43 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
ರೋಗಿ-813: ಶಿವಮೊಗ್ಗ ಶಿಕಾರಿಪುರದ 25 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
ರೋಗಿ-814: ಶಿವಮೊಗ್ಗ ತೀರ್ಥಹಳ್ಳಿಯ 27 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
ರೋಗಿ-815: ಶಿವಮೊಗ್ಗ ಶಿಕಾರಿಪುರದ 20 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.