ಶಿವಮೊಗ್ಗ: ಮಹಾನಗರ (Shivamogga City Corporation) ಪಾಲಿಕೆ ಮೇಯರ್ (Mayor) ಆಗಿ ಶಿವಕುಮಾರ್ ಮತ್ತು ಉಪ ಮೇಯರ್ (Deputy Mayor) ಆಗಿ ಲಕ್ಷ್ಮೀ ಶಂಕರನಾಯ್ಕ್ ಆಯ್ಕೆಯಾಗಿದ್ದಾರೆ.
Advertisement
ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಿತು. ಮೇಯರ್ ಸ್ಥಾನ ಎಸ್‌ಸಿ ಸಮುದಾಯಕ್ಕೆ ಹಾಗೂ ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗ ಮಹಿಳೆಗೆ ಮೀಸಲಾಗಿತ್ತು. ಬಿಜೆಪಿ (BJP) ಬಹುಮತ ಹೊಂದಿರುವ ಪಾಲಿಕೆಯಲ್ಲಿ ಮೇಯರ್ ಆಗಿ ಎಸ್.ಶಿವಕುಮಾರ್ ಮತ್ತು ಉಪಮೇಯರ್ ಆಗಿ ಲಕ್ಷ್ಮೀ ಶಂಕರನಾಯ್ಕ್ ಆಯ್ಕೆಯಾದರು. ಇದನ್ನೂ ಓದಿ: ಸಿದ್ದು, ಡಿಕೆಶಿಗೆ ಖರ್ಗೆಯ ಭಯ ಶುರುವಾಗಿದೆ: ಕಟೀಲ್
Advertisement
Advertisement
ಪಾಲಿಕೆಯ ಒಟ್ಟು 35 ಸದಸ್ಯರಲ್ಲಿ 23 ಸದಸ್ಯರು ಬಿಜೆಪಿಯ ಶಿವಕುಮಾರ್ ಪರ ಮತದಾನ ಹಾಕಿದ್ದಾರೆ. ಅದರಂತೆ ಮಾಜಿ ಸಚಿವ ಹಾಗೂ ಶಿವಮೊಗ್ಗ ನಗರ ಶಾಸಕ ಈಶ್ವರಪ್ಪ, ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ಎಂಎಲ್ಸಿ ಆಯನೂರು ಮಂಜುನಾಥ್ ಸಹ ಮತ ಚಲಾಯಿಸುವ ಮೂಲಕ 26 ಮತಗಳನ್ನ ಪಡೆದರು. ಇವರ ಪ್ರತಿ ಸ್ಪರ್ಧಿ ಆರ್.ಸಿ.ನಾಯ್ಕ್ 11 ಮತ ಪಡೆದರು.
Advertisement
ಉಪಮೇಯರ್ ಆಗಿ ಲಕ್ಷ್ಮೀ ಶಂಕರನಾಯ್ಕ್ 26 ಮತಗಳನ್ನು ಪಡೆದರೆ, ಇವರ ಪ್ರತಿಸ್ಪರ್ಧಿ ರೇಖಾ ರಂಗನಾಥ್ 11 ಮತ ಪಡೆದು ಸೋಲು ಅನುಭವಿಸಿದರು. ನೂತನ ಮೇಯರ್ ಹಾಗೂ ಉಪ ಮೇಯರ್ ಅವರನ್ನು ಮಾಜಿ ಸಚಿವ ಈಶ್ವರಪ್ಪ ಅಭಿನಂದಿಸಿದರು. ಇದನ್ನೂ ಓದಿ: ಮುಂದಿನ 18 ತಿಂಗಳಲ್ಲಿ ರಾಜ್ಯದಲ್ಲಿ ಐದು ಏರ್‌ಪೋರ್ಟ್ ನಿರ್ಮಾಣ: ಮುರುಗೇಶ್ ನಿರಾಣಿ