ಶಿವಮೊಗ್ಗ ಬಿಜೆಪಿಯಲ್ಲಿ ತಣ್ಣಗಾಗದ ಬಂಡಾಯ- ಈಶ್ವರಪ್ಪ ಮನವೊಲಿಕೆ ಯತ್ನ ವಿಫಲ

Public TV
2 Min Read
KS ESHWARAPPA REBEL copy

– ಮೋದಿ ಕಾರ್ಯಕ್ರಮಕ್ಕ ಹೋಗಲ್ಲವೆಂದು ಮಾಜಿ ಸಚಿವ ಸ್ಪಷ್ಟನೆ

ಶಿವಮೊಗ್ಗ: ಹಾವೇರಿ ಲೋಕಸಭಾ ಟಿಕೆಟ್ ಪುತ್ರ ಕಾಂತೇಶ್‍ಗೆ ಸಿಗದ ಕಾರಣ ರೆಬಲ್ ಆಗಿರುವ ಈಶ್ವರಪ್ಪ ಬಿಜೆಪಿಗರ ಯಾರ ಮಾತಿಗೂ ನಿರ್ಧಾರ ಬದಲಿಸ್ತಿಲ್ಲ. ಈಶ್ವರಪ್ಪ ಸಂಧಾನಕ್ಕೆ ಬಿಜೆಪಿಗರ ಸರ್ಕಸ್ ಮುಂದುವರಿದಿದೆ.

Narendra Modi

ಶಿವಮೊಗ್ಗಕ್ಕೆ ಸೋಮವಾರ ಪ್ರಧಾನಿ ಮೋದಿ (Narendra Modi) ಆಗಮಿಸ್ತಿರುವ ಹಿನ್ನೆಲೆಯಲ್ಲಿ ಇಂದು ಈಶ್ವರಪ್ಪ ಮನವೊಲಿಕೆಗೆ ಯತ್ನ ನಡೀತು. ಶಿವಮೊಗ್ಗದ ಮಲ್ಲೇಶ್ವರ ನಗರದ ಈಶ್ವರಪ್ಪ ನಿವಾಸಕ್ಕೆ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಮನವೊಲಿಕೆಗೆ ಯತ್ನಿಸ್ತು. ಆದರೆ ಸ್ವಲ್ಪ ಕೆಲಸ ಇದೆ ಅಂತ ಸಂಧಾನಕಾರರನ್ನು ಮನೆಯಲ್ಲಿಯೇ ಬಿಟ್ಟು ಈಶ್ವರಪ್ಪ ಹೊರಗೆ ಹೋಗಿದ್ದರು. 1 ಗಂಟೆಗಳ ಕಾಲ ಕಾದ ಅಗರ್ವಾಲ್ ತಂಡ ಬೇಸರದಿಂದ ಹೊರ ಬಂತು. ಇದನ್ನೂ ಓದಿ: ನಿಮ್ಮ ಜೀವನ ನಮಗೆ ಬಹಳ ಮುಖ್ಯ- ಟವರ್‌ನಿಂದ ಇಳಿಯುವಂತೆ ಜನರಿಗೆ ಮೋದಿ ಮನವಿ

ಬಳಿಕ ಮಾತಾಡಿದ ಅಗರ್ವಾಲ್, ವೈಯಕ್ತಿಕ ವಿಚಾರಕ್ಕೆ ಭೇಟಿಯಾಗಲು ಬಂದಿದ್ದೆ ಎಂದು ಸಂಧಾನದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಇದಕ್ಕೂ ಮುನ್ನ ಆರಗ ಜ್ಞಾನೇಂದ್ರ, ಎಂಎಲ್‍ಸಿಗಳಾದ ರವಿಕುಮಾರ್, ಡಿ.ಎಸ್. ಅರುಣ್ ಭೇಟಿ ನೀಡಿ 1 ಗಂಟೆಗಳ ಕಾಲ ಮಾತುಕತೆ ನಡೆಸಿದ್ರು. ನಾಳೆ ಮೋದಿ ಕಾರ್ಯಕ್ರಮಕ್ಕೆ ಬನ್ನಿ. ಆಮೇಲೆ ನಿಮ್ಮ ಸಮಸ್ಯೆ ಪರಿಹರಿಸೋಣ ಎಂಬ ಸಂಧಾನಕಾರರ ಮನವಿಗೆ ಈಶ್ವರಪ್ಪ ಸ್ಪಂದಿಸಲಿಲ್ಲ. ಬಂದ ದಾರಿಗೆ ಸುಂಕ ಇಲ್ಲದಂತೆ ವಾಪಸ್ ಹೋದ ನಾಯಕರು ವಾಪಸ್ ಹೋಗಿದ್ದರು. ಈಶ್ವರಪ್ಪ ಸಂದೇಶವನ್ನು ಯಡಿಯೂರಪ್ಪಗೆ ಮುಟ್ಟಿಸಿದರು. ಸಂಧಾನಕಾರರು ಮನೆಯಿಂದ ಹೊರ ಹೋದ ಬಳಿಕ ಈಶ್ವರಪ್ಪ ಮನೆಗೆ ಹಿಂದಿರುಗಿದರು.

BS YEDIYURAPPA VIJAYENDRA

ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ: ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ (K.S Eshwarappa) ತಾವು ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ನಾನೇಕೆ ಸ್ಪರ್ಧಿಸ್ತಿದ್ದೇನೆ ಅಂತ ಅಗರ್ವಾಲ್, ಆರಗ ತಂಡಕ್ಕೆ ಹೇಳಿದ್ದೇನೆ. ನಾಳೆಯ ಮೋದಿ ಕಾರ್ಯಕ್ರಮಕ್ಕೆ ಬರಲ್ಲ. ಎಲೆಕ್ಷನ್ ಗೆದ್ದು ಮೋದಿಗೆ ಬೆಂಬಲ ಕೊಡ್ತೇನೆ. ಪಕ್ಷದಲ್ಲಿ ಹಿಂದುತ್ವದ ಪರವಾಗಿ ಕೆಲಸ ಮಾಡಿದವರಿಗೆ ಮೋಸ ಮಾಡಿದ್ದಾರೆ. ಯಡಿಯೂರಪ್ಪ ಕುಟುಂಬದ ಕೈಯಲ್ಲಿ ಪಕ್ಷ ಒದ್ದಾಡುತ್ತಿದೆ. ಯಡಿಯೂರಪ್ಪ ಕೆಜೆಪಿ ಕಟ್ಟಿದ್ದಾಗ ಪಡೆದಿದ್ದು 6 ಸೀಟ್. ಯಡಿಯೂರಪ್ಪ ಹಠ ಹಿಡಿದು ಮಗನನ್ನು ರಾಜ್ಯಾಧ್ಯಕ್ಷ ಮಾಡಿದ್ದಾರೆ. ಯಡಿಯೂರಪ್ಪ, ವಿಜಯೇಂದ್ರ ತಾಯಿಯಂತಿರುವ ಪಕ್ಷದ ಕುತ್ತಿಗೆ ಹಿಸುಕುತ್ತಿದ್ದಾರೆ. ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಎಂದು ಈಶ್ವರಪ್ಪ ಖಡಕ್ಕಾಗಿ ನುಡಿದಿದ್ದಾರೆ.

Share This Article