ಚೆನ್ನೈ: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳಿಗೆ ನಗರದ ಪ್ರಸಿದ್ಧ ರೇಲಾ ಆಸ್ಪತ್ರೆಯಲ್ಲಿ ನಡೆದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ.
ಡಾ. ಮೊಹಮ್ಮದ್ ರೇಲಾ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು, ಸತತ 2 ಗಂಟೆಗಳ ಕಾಲ ವೈದ್ಯರು ಶ್ರೀಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ಸಿದ್ದಗಂಗಾ ಶ್ರೀಗಳು ಕ್ಷೇಮವಾಗಿದ್ದು, ಸುಮಾರು 8-10 ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು, ಶ್ರೀಗಳನ್ನು ಸದ್ಯಕ್ಕೆ ತೀವ್ರನಿಗಾ ಘಟಕದಲ್ಲಿ ಇರಿಸಲಾಗಿದ್ದು, ಇನ್ನೂ 2 ಗಂಟೆಗಳ ಕಾಲ ಐಸಿಯುನಲ್ಲೇ ಇರುತ್ತಾರೆ. ಶ್ರೀಗಳಿಗೆ ಎಚ್ಚರಗೊಂಡ ಬಳಿಕ ಮತ್ತೆ ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ವೈದ್ಯರು ಆಪರೇಷನ್ ಥಿಯೇಟರ್ ಯಿಂದ ಹೊರ ಬಂದ ಬಳಿಕ ಶ್ರೀಗಳು ಚಿಕಿತ್ಸೆಗೆ ಹೇಗೆ ಸ್ಪಂದಿಸಿದ್ದಾರೆ, ಚಿಕಿತ್ಸೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದಾರೆ.
Advertisement
ಶಸ್ತ್ರಚಿಕಿತ್ಸೆಗೂ ಮುನ್ನ ಸಿದ್ದಗಂಗಾ ಶ್ರೀಗಳ ಜೊತೆ ಸುತ್ತುರು ಮಠದ ಸ್ವಾಮೀಜಿಗಳು ಮಾತನಾಡಿದ್ದು, ಯಾವುದೇ ರೀತಿಯ ಆತಂಕ ಪಡುವುದು ಬೇಡ. ಶ್ರೀಗಳು ಲವಲವಿಕೆಯಿಂದ ಇದ್ದಾರೆ. ಈಗ ಎಂಡೊಸ್ಕೋಪಿ ಚಿಕಿತ್ಸೆಯ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆಯ ನಂತರ ಮೂರು ದಿನಗಳ ಕಾಲ ಇನ್ಫೆಕ್ಷನ್ ಇರುವ ಕಾರಣ ಭಕ್ತಾದಿಗಳನ್ನು ಶ್ರೀಗಳು ಭೇಟಿ ಮಾಡಲ್ಲ ಎಂದು ತಿಳಿಸಿದ್ದರು.
Advertisement
ಶ್ರೀಗಳಿಗೆ ಪದೇ ಪದೇ ಆರೋಗ್ಯದಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಬೇಕು ಎಂದು ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಡಾ. ರೇಲಾ ಅವರ ಜೊತೆ ಬಿಜಿಎಸ್ ಆಸ್ಪತ್ರೆಯ ಡಾ. ರವೀಂದ್ರ ಅವರು ಕೂಡ ಶತ್ರಚಿಕಿತ್ಸೆ ಮಾಡಲು ಸಹಾಯ ಮಾಡಿದ್ದಾರೆ. ಯಾರು ಆತಂಕ ಪಡೋದು ಬೇಡ. ಶಸ್ತ್ರಚಿಕಿತ್ಸೆ ನಂತರ ಕೆಲದಿನಗಳ ಕಾಲ ಶ್ರೀಗಳು ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv