ಕಾರವಾರ: ಆಪರೇಷನ್ ಬಳಿಕ ಚೇತರಿಸಿಕೊಂಡಿರುವ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shiva Rajkumar) 29 ವರ್ಷಗಳ ಬಳಿಕ ಪ್ರವಾಸಿತಾಣವಾಗಿರುವ ಯಾಣಗೆ (Yana) ಭೇಟಿ ನೀಡಿದ್ದಾರೆ.
ಇದೇ ಜಾಗದಲ್ಲಿ ಸೂಪರ್ ಹಿಟ್ ಸಿನಿಮಾ `ನಮ್ಮೂರ ಮಂದಾರ ಹೂವೆ’ ಸಿನಿಮಾದ ಶೂಟಿಂಗ್ ಆಗಿತ್ತು. ಹಳೆಯ ಫೋಟೋ ಹಾಗೂ ಇತ್ತೀಚೆಗೆ ಭೇಟಿ ಕೊಟ್ಟ ಫೋಟೋವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡು ಶಿವಣ್ಣ ಖುಷಿ ಹಂಚಿಕೊಂಡಿದ್ದಾರೆ. ಶಿವಣ್ಣ ಜೊತೆ ಪತ್ನಿ ಗೀತಾ ಕೂಡ ಯಾಣಗೆ ಭೇಟಿ ಕೊಟ್ಟಿದ್ದಾರೆ.
View this post on Instagram
ಇನ್ನೂ ಯಾಣಕ್ಕೆ ಭೇಟಿ ನೀಡಿರುವ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಶಿವಣ್ಣ, ಬಾಳಿನ ಬೆನ್ನು ಹತ್ತಿ.. ನೂರಾರು ಊರು ಸುತ್ತಿ.. ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂ ಎಂಬ ಸಾಲು ಬರೆದುಕೊಂಡಿದ್ದಾರೆ.