ಏಕಾಂಗಿಯಾಗಿ ಸ್ಪರ್ಧಿಸಿದ್ದರಿಂದ ಕಾಂಗ್ರೆಸ್‌ಗೆ ಸೋಲು – ಮೈತ್ರಿ ಪಕ್ಷವನ್ನೇ ಟೀಕಿಸಿದ ಶಿವಸೇನೆ

Public TV
1 Min Read
Sanjay Raut

ಮುಂಬೈ: ಹರಿಯಾಣದಲ್ಲಿ (Hariyana Election) ಸೋತ ಕಾಂಗ್ರೆಸ್‌ಗೆ (Congress) ಈಗ ಮಹಾರಾಷ್ಟ್ರದಲ್ಲಿ ಕಂಪನ ಆರಂಭವಾಗಿದೆ.  ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಕಾಂಗ್ರೆಸ್‌ ನಿರ್ಧಾರವನ್ನು ಮೈತ್ರಿ ಪಕ್ಷ ಶಿವಸೇನೆ (ಯುಬಿಟಿ) ಟೀಕಿಸಿದೆ.

Shiv Sena (UBT) ಸಂಸದ ಸಂಜಯ್ ರಾವುತ್, ಕಾಂಗ್ರೆಸ್ ದೇಶಾದ್ಯಂತ ಏಕಾಂಗಿಯಾಗಿ ಹೋಗಲು ಬಯಸಿದರೆ ಉಳಿದವರು ಅವರ ರಾಜ್ಯಗಳಲ್ಲಿ ತಮ್ಮದೇ ಆದ ನಿರ್ಧಾರವನ್ನು ತೆಗೆದುಕೊಳ್ಳಲು ಸ್ವತಂತ್ರರು ಎಂದು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.Sharad Pawar Uddhav Thackeray

ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಮಿತ್ರಪಕ್ಷಗಳ ಬಗೆಗಿನ ಕಾಂಗ್ರೆಸ್‌ ಧೋರಣೆಯೇ ಕಾರಣ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ (Saamana) ಬುಧವಾರ ಸಂಪಾದಕೀಯ ಬರೆದಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಮಹಾರಾಷ್ಟ್ರದಲ್ಲಿ (Maharashtra) ಸೀಟು ಹಂಚಿಕೆಯ ಬಗ್ಗೆ ಶಿವಸೇನೆ ಮತ್ತು ಕಾಂಗ್ರೆಸ್ ಮಧ್ಯೆ ನಡೆಯುತ್ತಿರುವ ಮಾತುಕತೆ ಸಮಯದಲ್ಲೇ ಈ ಸಂಪಾದಕೀಯ ಬಂದಿರುವುದು ವಿಶೇಷ. ಇದನ್ನೂ ಓದಿ: ಭೂಪಿಂದರ್‌ ಹೂಡಾಗೆ ಮಣೆ ಹಾಕಿ ಕೈ ಸುಟ್ಟುಕೊಂಡ ಕಾಂಗ್ರೆಸ್!‌

ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿಕೂಟದಲ್ಲಿ ಸ್ಪರ್ಧಿಸಿದ್ದರಿಂದ INDIA ಗೆದ್ದಿದೆ. ಆದರೆ ಹರಿಯಾಣದಲ್ಲಿ ಮೈತ್ರಿ ಮಾಡಿಕೊಳ್ಳದೇ ಏಕಾಂಗಿಯಾಗಿ ಹೋಗಿದ್ದರಿಂದ ಸೋತಿದೆ. ಜನರು ಬಿಜೆಪಿಯಿಂದ ಅಸಮಾಧಾನಗೊಂಡಿದ್ದರು ಸುಲಭವಾಗಿ ಗೆಲ್ಲಬಹುದಾಗಿದ್ದ ರಾಜ್ಯವನ್ನು ಕಳೆದುಕೊಳ್ಳುವ ಕಲೆ ಕಾಂಗ್ರೆಸ್‌ಗೆ ಇದೆ ಎಂದು ವ್ಯಂಗ್ಯವಾಡಿದೆ.

rahul sharad pawar uddhav thackeray

ಹರಿಯಾಣದಂತೆ, ಕಾಂಗ್ರೆಸ್ ದೇಶಾದ್ಯಂತ ಏಕಾಂಗಿಯಾಗಿ ಹೋಗಲು ಬಯಸಿದರೆ ಪಕ್ಷವು ಅದನ್ನು ಘೋಷಿಸಬೇಕು. ಇದರಿಂದ ಮೈತ್ರಿಯಲ್ಲಿರುವ ಪ್ರತಿಯೊಬ್ಬರೂ ಆಯಾ ರಾಜ್ಯಗಳಲ್ಲಿ ತಮ್ಮದೇ ಆದ ನಿರ್ಧಾರವನ್ನು ತೆಗೆದುಕೊಳ್ಳಲು ಮುಕ್ತರಾಗುತ್ತಾರೆ ಎಂದು ಅವರು ಹೇಳಿದರು. ಇದನ್ನೂ ಓದಿ: ಆಯುಧ ಪೂಜೆಗೂ ದುಡ್ಡಿಲ್ಲದೆ ದಿವಾಳಿ ಆಯ್ತಾ KSRTC – ಒಂದು ಬಸ್ಸಿಗೆ ತಲಾ 100 ರೂ. ಖರ್ಚು ಮಾಡುವಂತೆ ಸೂಚನೆ

ಮಹಾರಾಷ್ಟ್ರದಲ್ಲಿ ಈ ವರ್ಷದ ಅಂತ್ಯದಲ್ಲೇ ಚುನಾವಣೆ ನಡೆಯಲಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌, ಎನ್‌ಸಿಪಿ, ಶಿವಸೇನೆ ಮೈತ್ರಿ ಮಾಡಿಕೊಂಡಿತ್ತು. ಈ ಮೈತ್ರಿ ಫಲ ನೀಡಿತ್ತು. ಒಟ್ಟು 47 ಸ್ಥಾನಗಳ ಪೈಕಿ INDIA ಒಕ್ಕೂಟ 30 ಸ್ಥಾನಗಳನ್ನು ಗೆದ್ದರೆ ಎನ್‌ಡಿಎ 17 ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಿತ್ತು.

 

Share This Article