ಮುಂಬೈ: ಬಾಬರಿ ಧ್ವಂಸ ಸಂದರ್ಭದಲ್ಲಿ ಶಿವಸೇನೆಯ ಪಾತ್ರದ ಬಗ್ಗೆ ಬಿಜೆಪಿ ತನ್ನ ನಾಯಕರನ್ನು ಕೇಳಬೇಕು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಬರಿ ಮಸೀದಿ ಧ್ವಂಸವಾದಾಗ ಶಿವಸೇನೆ ನಾಯಕರು ಎಲ್ಲಿದ್ದರು ಎಂದು ಯಾರಾದರೂ ಹೇಳಿದರೆ ಅವರು ಅವರ ನಾಯಕ ದಿವಂಗತ ಸುಂದರ್ ಸಿಂಗ್ ಭಂಡಾರಿ ಅವರನ್ನು ಕೇಳಬೇಕು. ಜೊತೆಗೆ ಆಗಿನ ಸಿಬಿಐ ಮತ್ತು ಐಬಿ ವರದಿ ಪರಿಶೀಲಿಸಿ ಎಂದರು.
Advertisement
Advertisement
ಶಿವಸೇನೆ ಎಲ್ಲಿತ್ತು ಎಂದು ಕೇಳುವವರಿಗೆ ತಿಳುವಳಿಕೆ ಇಲ್ಲ. ಅದಕ್ಕೆ ಉತ್ತರ ಸಿಗುತ್ತದೆ. ಪರಿಸ್ಥಿತಿ ಬದಲಾಗಿದೆ, ಸಮಸ್ಯೆಗಳೂ ಇವೆ. ಇದಕ್ಕೆಲ್ಲಾ ಜನರು ಕಿವಿಕೊಡುವುದಿಲ್ಲ ಎಂದ ಅವರು, ಹಣದುಬ್ಬರ, ನಿರುದ್ಯೋಗ ಮತ್ತು ಚೀನಾದ ಆಕ್ರಮಣದಂತಹ ಸಮಸ್ಯೆಗಳಿಂದ ಗಮನವನ್ನು ಬೇರಡೆಗೆ ಸೆಳೆಯಲು ಹನುಮಾನ್ ಚಾಲೀಸಾ ಮತ್ತು ಅಯೋಧ್ಯೆಯ ಪಠಣದ ಸಮಸ್ಯೆಗಳನ್ನು ತರಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಮೋದಿ ಮುಟ್ಟಿದ್ರೆ, ಗುಜರಾತ್ ಹೋಗುತ್ತೆ – ಅಡ್ವಾಣಿಗೆ ಅಂದು ಠಾಕ್ರೆ ನೀಡಿದ್ದ ಸಲಹೆಯ ಬಗ್ಗೆ ಉದ್ಧವ್ ಮಾತು
Advertisement
Advertisement
ಇದಕ್ಕೂ ಮುನ್ನ, ಹಿಂದುತ್ವದ ವಿಚಾರದಲ್ಲಿ ಶಿವಸೇನೆ ವಿರುದ್ಧ ವಾಗ್ದಾಳಿ ನಡೆಸಿದ ಫಡ್ನವಿಸ್, ಬಾಬ್ರಿ ಕಟ್ಟಡವನ್ನು ಕೆಡವಿದಾಗ ತಾನು ಅಯೋಧ್ಯೆಯಲ್ಲಿದ್ದೆ. ಅದು ಸಂಭವಿಸಿದಾಗ ಯಾವುದೇ ಶಿವಸೇನಾ ನಾಯಕರೂ ಅಲ್ಲಿ ಇರಲಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ನಾನು ಬಾಬರಿ ಮಸೀದಿ ಧ್ವಂಸದಲ್ಲಿ ಭಾಗಿಯಾಗಿದ್ದೆ, ಶಿವಸೇನೆ ನಾಯಕರು ಯಾರೂ ಇರಲಿಲ್ಲ : ಫಡ್ನವೀಸ್