ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ 12 ಗಂಟೆಗಳ ಬಳಿಕ ಅವರ ಆಪ್ತ ಸಂಸದ ಸಂಜಯ್ ರಾವತ್ ಪಕ್ಷ ಅಧಿಕಾರದ ಹಿಂದೆ ಬಿದ್ದಿಲ್ಲ ಎಂದು ಗುಡುಗಿದ್ದಾರೆ.
Advertisement
ಅಧಿಕಾರಕ್ಕಾಗಿ ಶಿವಸೇನೆ ಹುಟ್ಟಿಲ್ಲ, ಶಿವಸೇನೆಗಾಗಿ ಅಧಿಕಾರ ಹುಟ್ಟಿದೆ ಎಂಬುವುದು ಬಾಳಾಸಾಹೇಬ್ ಠಾಕ್ರೆಯವರ ಮಂತ್ರವಾಗಿದೆ. ಹಾಗಾಗಿ ನಾವು ಕೆಲಸ ಮಾಡಿ ಮತ್ತೊಮ್ಮೆ ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಆಕೆಯ ಮೇಲೆ ಪದೇ-ಪದೇ ಅತ್ಯಾಚಾರ ಮಾಡಿದ್ರು, ನರಮಾಂಸ ತಿನ್ನುವಂತೆ ಒತ್ತಾಯಿಸಿದ್ರು!
Advertisement
Advertisement
ಸುಮಾರು 10 ದಿನಗಳ ಹೋರಾಟ, ಸಮಾಲೋಚನೆ, ಆರೋಪ, ಪ್ರತ್ಯಾರೋಪಗಳು ಮತ್ತು ಭಾವನಾತ್ಮಕ ಮನವಿಗಳ ಬಳಿಕ, ಉದ್ಧವ್ ಠಾಕ್ರೆ ಅವರು ಗುರುವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿಗದಿಯಾಗಿದ್ದ ವಿಶ್ವಾಸ ಮತಯಾಚನೆಗೂ ಮುನ್ನವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದನ್ನೂ ಓದಿ: ಕಟ್ಟಡದ ಟೆರೇಸ್ ಮೇಲಿಂದ ಗ್ಯಾಲರಿಗೆ ಹಗ್ಗ ಕಟ್ಟಿ ನೇಣು ಬಿಗಿದು ವೃದ್ಧ ಆತ್ಮಹತ್ಯೆ
Advertisement
ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಲು ಅಗತ್ಯವಿರುವ ಸಂಖ್ಯಾಬಲವನ್ನು ಹೊಂದಿರುವ ಬಿಜೆಪಿ-ಶಿವಸೇನಾ ಬಂಡಾಯ ಶಾಸಕರ ಒಕ್ಕೂಟವು ಸರ್ಕಾರ ರಚಿಸಲಿದ್ದು, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಜುಲೈ 1ರಂದು ಶುಕ್ರವಾರ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಲ್ಲದೇ ಏಕನಾಥ್ ಶಿಂಧೆ ಅವರು ಶನಿವಾರದ ಹೊತ್ತಿಗೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.