ಶಿರೂರು ಗುಡ್ಡ ಕುಸಿತ ಪ್ರಕರಣ – ಕಾರ್ಯಾಚರಣೆ ಸ್ಥಗಿತಗೊಳಿಸಿದ ಜಿಲ್ಲಾಡಳಿತ

Public TV
2 Min Read
Shirur Landslide 1

ಕಾರವಾರ: ಶಿರೂರು ಗುಡ್ಡ ಕುಸಿತ (Shirur Landslide) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಳುಗು ತಜ್ಞರ ತಂಡ ಎಷ್ಟೇ ಹುಡುಕಿದರೂ ಲಾರಿ ಹಾಗೂ ನಾಪತ್ತೆಯಾದ ಮೂವರ ಮೃತದೇಹ ಸಿಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

ಗಂಗಾವಳಿ ನದಿ (Gangavali River) ನೀರಿನ ವೇಗ ಹೆಚ್ಚಿದೆ. ಅಲ್ಲದೇ ನದಿಯ ಒಳಗೆ ಮಣ್ಣು, ಕಲ್ಲು ಬಂಡೆ ಹಾಗೂ ಮರದ ದಿಮ್ಮಿ ಇರುವ ಹಿನ್ನೆಲೆ ಕಾರ್ಯಾಚರಣೆಯಲ್ಲಿ ಲಾರಿ ಮೇಲಕ್ಕೆ ಎತ್ತಲು ಜಿಲ್ಲಾಡಳಿತ ಯಶಸ್ವಿಯಾಗಲಿಲ್ಲ. ಆದ್ದರಿಂದ ಕಾರ್ಯಾಚರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೋಚಿಂಗ್ ಸೆಂಟರ್‌ಗೆ ಮಳೆ ನೀರು ನುಗ್ಗಿ ಮೂವರು UPSC ಆಕಾಂಕ್ಷಿಗಳು ಸಾವು – ಮಾಲೀಕ ಸೇರಿ ಇಬ್ಬರು ಅರೆಸ್ಟ್‌

shirur landslide

ಭೂ ಕುಸಿತದಿಂದ ಕಾಣೆಯಾದ ಕೇರಳ ಮೂಲದ ಅರ್ಜುನ್, ಶಿರೂರಿನ ಜಗನ್ನಾಥ ನಾಯ್ಕ, ಗಂಗೆ ಕೊಳ್ಳದ ಲೋಕೇಶ್‌ಗಾಗಿ ಗಂಗಾವಳಿ ನದಿಗೆ ಮುಳುಗು ತಜ್ಞರ ತಂಡ ಇಳಿದಿತ್ತು. ನೌಕಾದಳ, ಭೂಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಹೆಸ್ಕಾಂ ಹಾಗೂ ಈಶ್ವರ್ ಮಲ್ಪೆ ಅವರ ತಂಡ ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಆಲದ ಮರದ ದಿಮ್ಮಿ, ವಿದ್ಯುತ್ ಕಂಬ, ತಂತಿಗಳನ್ನು ಮುಳುಗು ತಜ್ಞರು ಪತ್ತೆಹಚ್ಚಿದ್ದಾರೆ. ಆದರೆ ಲಾರಿ ಹಾಗೂ ಕಾಣೆಯಾದವರ ಮೃತದೇಹಗಳು ಪತ್ತೆಯಾಗಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Paris Olympics 2024: ಭಾರತಕ್ಕೆ ಮೊದಲ ಪದಕ – ಐತಿಹಾಸಿಕ ಗೆಲುವಿನೊಂದಿಗೆ ಕಂಚು ಗೆದ್ದ ಮನು ಭಾಕರ್‌

ಕಾರ್ಯಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಈಜು ತಜ್ಞ ಈಶ್ವರ್ ಮಲ್ಪೆ, ನಾನು ಈ ಹಿಂದೆ ಮಾಡಿದ ಬಹಳಷ್ಟು ಕಾರ್ಯಾಚರಣೆ ಯಶಸ್ವಿ ಆಗಿದೆ. ಆದರೆ ಇವತ್ತಿನ ಕಾರ್ಯಾಚರಣೆಯಲ್ಲಿ ಯಶಸ್ಸು ಸಿಗದೇ ಇರುವ ದುಃಖ ನನಗಿದೆ. ನಿರಂತರ ಮಳೆಯಿಂದ ಗಂಗಾವಳಿ ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿ ಆಗುತ್ತಲೇ ಇದೆ. ನದಿಯ ನೀರಿನ ವೇಗ ಮತ್ತು ಕೆಸರು ನೀರಿನಿಂದ ಕಾರ್ಯಾಚರಣೆಯಲ್ಲಿ ಯಶಸ್ಸು ಕಾಣುವುದಕ್ಕೆ ಆಗಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ – ಪರಮೇಶ್ವರ್

ನಾನು ಶನಿವಾರ ನದಿಗೆ ಇಳಿದಾಗ ಅಲ್ಲಿ ಬಂಡೆಕಲ್ಲು ಹಾಗೂ ಮಣ್ಣು ಹೊರತುಪಡಿಸಿ ಬೇರೆ ಏನು ಕಾಣಲಿಲ್ಲ. ಭಾನುವಾರ ಕಾರ್ಯಾಚರಣೆ ಮಾಡಿದ ಪಾಯಿಂಟ್‌ನಲ್ಲಿ ಆಲದ ಮರ ಕಾಣಿಸಿತ್ತು. ಮರದ ಸುತ್ತ ಏನಿದೆ ಎಂಬುವುದನ್ನು ನೋಡಲು ಪ್ರಯತ್ನಿಸಿದೆ. ಆದರೆ ನದಿಯ ನೀರಿನ ವೇಗ ಜಾಸ್ತಿ ಇರುವ ಹಿನ್ನೆಲೆ ಅಲ್ಲಿ ಇರಲಾಗಲಿಲ್ಲ. ಕೆಸರು ನೀರು ಇರೋತನಕ ಕಾರ್ಯಾಚರಣೆ ಮಾಡುವುದು ಕಷ್ಟ. ನಾನು ನದಿಯ ಒಳಗೆ ಎಷ್ಟೆ ಇಳಿದರೂ ಸರಿಯಾಗಿ ಏನೂ ಕಾಣಲಿಲ್ಲ. ನದಿಯ ನೀರು ಕೆಸರು ಮಿಶ್ರಿತ ಆಗಿರುವುದರಿಂದ ಏನೂ ಸರಿಯಾಗಿ ಕಾಣುತ್ತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಎನ್‌ಡಿಎ ಅವಧಿಯಲ್ಲಿ 2,95,817 ಕೋಟಿ ರೂ. ತೆರಿಗೆ ಹಂಚಿಕೆ: ರಾಜ್ಯ ಸರ್ಕಾರಕ್ಕೆ ನಿರ್ಮಲಾ ತಿರುಗೇಟು

Share This Article