ದೀಪಿಕಾಗೆ ಶೈನ್ ಪ್ರಪೋಸ್ – ಯಾರಿಗಾಯ್ತು ಮೊದಲು ಲವ್?

Advertisements

ಬೆಂಗಳೂರು: ಬಿಗ್ ಬಾಸ್ ಸೀಸನ್- 7ರ ಸ್ಪರ್ಧಿ ಶೈನ್ ಶೆಟ್ಟಿ ಮನೆ ಸದಸ್ಯರ ಮುಂದೆಯೇ ದೀಪಿಕಾ ದಾಸ್ ಅವರನ್ನು ಕುಂದಾಪುರ ಸ್ಟೈಲ್‍ನಲ್ಲಿ ಪ್ರಪೋಸ್ ಮಾಡಿದ್ದಾರೆ.

ಸೋಮವಾರ ಬಿಗ್ ಬಾಸ್ ಮನೆಯ ಸದಸ್ಯರಿಗೆ ಮನರಂಜನೆ ಸಲುವಾಗಿ ‘ಚಕ್ರವ್ಯೂಹ’ ಎಂಬ ಟಾಸ್ಕ್ ನೀಡಿದ್ದರು. ಈ ಟಾಸ್ಕ್ ನಲ್ಲಿ ಕ್ಯಾಪ್ಟನ್ ಶೈನ್ ಗಾರ್ಡನ್ ಏರಿಯಾದಲ್ಲಿ ಇರಿಸಲಾಗಿದ್ದ ಚಕ್ರವನ್ನು ತಿರುಗಿಸಬೇಕಿತ್ತು. ಈ ವೇಳೆ ಮುಳ್ಳಿನ ಬಳಿ ಯಾರ ಹೆಸರು ನಿಲ್ಲುತ್ತದೋ ಅವರು ಮನೆಯ ಸದಸ್ಯರು ಹೇಳುವಂತೆ ಮಾಡಬೇಕು ಎಂದು ಹೇಳಿದ್ದರು. ಶೈನ್ ಹೆಸರು ಮುಳ್ಳಿನ ಬಳಿ ನಿಂತಾಗ ಮನೆಯ ಸದಸ್ಯರು ಕುಂದಾಪುರ ಸ್ಟೈಲ್‍ನಲ್ಲಿ ದೀಪಿಕಾರನ್ನು ಪ್ರಪೋಸ್ ಮಾಡಲು ಕೇಳಿದ್ದಾರೆ.

Advertisements

ದೀಪಿಕಾರನ್ನು ಪ್ರಪೋಸ್ ಮಾಡುವ ಮೊದಲು ಶೈನ್ ಸೂಪರ್ ಮ್ಯಾನ್‍ನಂತೆ ಉಡುಪು ಧರಿಸಬೇಕು ಎಂದು ಸದಸ್ಯರು ಹೇಳಿದ್ದರು. ಶೈನ್ ಈ ಉಡುಪುನಲ್ಲಿಯೇ ದೀಪಿಕಾರನ್ನು ಪ್ರಪೋಸ್ ಮಾಡಿದ್ದಾರೆ. ಶೈನ್, ದೀಪಿಕಾ ಕುತ್ಕೋ, ನೀವು ಒಂಥರಾ ಇಷ್ಟವಾಗಿ ಬಿಟ್ರಿ. ನಾನು ಈ ಡ್ರೆಸ್ ಹಾಕಿದಾಗಲೂ ನೀವು ನನಗೆ ಇಷ್ಟವಾಗಿಬಿಟ್ರಿ. ಎಂಥಾ ಸೌಂದರ್ಯ. ಸೌಂದರ್ಯ ಎನ್ನುವುದು ನಿಮ್ಮ ಮುಖದಲ್ಲಿ ಅಲ್ಲ ಮನಸ್ಸಿನಲ್ಲಿಯೂ ಇದೆ. ನೀವು ಚಂದದ ಗೊಂಬೆ. ಚಂದವಾಗಿ ಟಾಸ್ಕ್ ಮಾಡಿದ್ದೀರಿ. ಎರಡು ವಾರ ಕ್ಯಾಪ್ಟನ್ ಆಗಿದ್ರಿ. ಎಂಥ ಕ್ಯಾಪ್ಟನ್‍ಶಿಪ್ ಎಂದರೆ ಮತ್ತೆ ಮತ್ತೆ ನಿಮ್ಮ ತಂಡದಲ್ಲಿ ಟಾಸ್ಕ್ ಮಾಡಬೇಕು ಎಂದು ಅನಿಸುತ್ತೆ ಎಂದರು.

ಇದೇ ವೇಳೆ ಮದುವೆಯಾದ ಮೇಲೆ ಒಂದೇ ಕೈಯಲ್ಲಿ ಹಗ್ಗ ಹಿಡಿದುಕೊಂಡು ನಿಲ್ಲುವಂತೆ ಹೇಳುತ್ತೇನೆ. ಆಗ ನಾನು ನಿಮ್ಮ ಪಕ್ಕದಲ್ಲಿಯೇ ನಿಲ್ಲುತ್ತೇನೆ. ಆ ರೀತಿ ನಾವಿಬ್ಬರು ಪ್ರೀತಿ ಮಾಡೋಣ. ನಮ್ಮ ಪ್ರೀತಿಗೆ ನೀರು ಎರಸಲು ಕಾಯುತ್ತಿದ್ದಾರೆ. ನೀನು ನನ್ನ ಪ್ರೀತಿಯನ್ನು ಒಪ್ಪಲಿಲ್ಲ ಎಂದರೆ ನಾನು ಈ ಸ್ವಿಮ್ಮಿಂಗ್ ಪೂಲ್‍ಗೆ ಹಾರಿ ಸತ್ತಿಲ್ಲ ಎಂದರೂ ಸತ್ತವನಂತೆ ನಟಿಸುತ್ತೇನೆ. ನೀವು ದೀಪಿಕಾ ದಾಸ್ ಶೆಟ್ಟಿ ಎಂದು ಹೆಸರಿಟ್ಟುಕೊಂಡರು ನನಗೆ ಬೇಜಾರ್ ಇಲ್ಲ ಎಂದು ಶೈನ್ ಕುಂದಾಪುರ ಸ್ಟೈಲ್‍ನಲ್ಲಿ ದೀಪಿಕಾರನ್ನು ಪ್ರಪೋಸ್ ಮಾಡಿದ್ದಾರೆ.

Advertisements

ಶೈನ್, ದೀಪಿಕಾ ಅವರನ್ನು ಪ್ರಪೋಸ್ ಮಾಡಿದ ಸಂಚಿಕೆ ವಾಹಿನಿಯಲ್ಲಿ ಪ್ರಸಾರವಾಗಿಲ್ಲ. ಬದಲಾಗಿ ಅನ್‍ಸೀನ್‍ನಲ್ಲಿಈ ಸಂಚಿಕೆ ವೀಕ್ಷಿಸಬಹುದು.

Advertisements
Exit mobile version