ಸಿಡ್ನಿ: ಟಿ20 ವಿಶ್ವಕಪ್‍ಗೆ (T20 World Cup) ಆಯ್ಕೆ ಆಗಿದ್ದ ವೆಸ್ಟ್ ಇಂಡೀಸ್‍ನ (West Indies) ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಶಿಮ್ರಾನ್ ಹೆಟ್ಮೆಯರ್ (Shimron Hetmyer) ಎರಡೆರಡು ಬಾರಿ ವಿಮಾನ ಮಿಸ್ (Missing Flight) ಮಾಡಿಕೊಂಡ ಪರಿಣಾಮ ಅವರನ್ನು ವಿಶ್ವಕಪ್ ತಂಡದಿಂದ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ (CWI) ಕೈಬಿಟ್ಟಿದೆ.
ಶಿಮ್ರಾನ್ ಹೆಟ್ಮೆಯರ್ ಶನಿವಾರದಂದು ಆಸ್ಟ್ರೇಲಿಯಾ (Australia) ತೆರಳಬೇಕಿತ್ತು. ಆದರೆ ವೈಯಕ್ತಿಕ ಕಾರಣಗಳನ್ನು ನೀಡಿ ಹೆಟ್ಮೆಯರ್ ವಿಮಾನವನ್ನು ಸೋಮವಾರಕ್ಕೆ ಬದಲಾಯಿಸಿ ಎಂದು ಕ್ರಿಕೆಟ್ ಬೋರ್ಡ್‍ಗೆ ಮನವಿ ಮಾಡಿಕೊಂಡಿದ್ದರು. ಆ ಬಳಿಕ ಸೋಮವಾರದ ವಿಮಾನವನ್ನು ಹೆಟ್ಮೆಯರ್ ಮಿಸ್ ಮಾಡಿಕೊಂಡಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ತೀವ್ರ ಅಶಿಸ್ತಿನ ಕಾರಣಕ್ಕಾಗಿ ಆಯ್ಕೆಗಾರರು ತಂಡದಿಂದ ಅವರನ್ನು ಕೈಬಿಟ್ಟಿದ್ದಾರೆ. ಅವರ ಸ್ಥಾನಕ್ಕೆ ಶಮರ್ ಬ್ರೂಕ್ಸ್‌ರನ್ನು ಆಯ್ಕೆ ಮಾಡಲಾಗಿದೆ ಎಂದು ಐಸಿಸಿಗೆ (ICC) ತಿಳಿಸಿದೆ. ಇದನ್ನೂ ಓದಿ: ಬುಮ್ರಾ ಇಲ್ಲ ಈ ಬಾರಿ ವಿಶ್ವಕಪ್ ಡೌಟ್ – BCCI ವಿರುದ್ಧ ಅಭಿಮಾನಿಗಳು ಗರಂ
ಹೆಟ್ಮೆಯರ್ ಕುಟುಂಬದ ಕಾರಣ ಹೇಳಿ ಶನಿವಾರ ಆಸ್ಟ್ರೇಲಿಯಾಗೆ ತಂಡದೊಂದಿಗೆ ತೆರಳಲು ಸಾಧ್ಯವಿಲ್ಲ ಬದಲಿ ವ್ಯವಸ್ಥೆಯಾಗಿ ಸೋಮವಾರ ವಿಮಾನ ವ್ಯವಸ್ಥೆ ಮಾಡಿಕೊಡುವಂತೆ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್‍ಗೆ ಮನವಿ ಮಾಡಿಕೊಂಡಿದ್ದರು. ಆ ಬಳಿಕ ಸೋಮವಾರ ವಿಮಾನವನ್ನು ಮಿಸ್ ಮಾಡಿಕೊಂಡಿದ್ದರು. ಹಾಗಾಗಿ CWI ಈ ನಿರ್ಧಾರಕ್ಕೆ ಮುಂದಾಗಿದೆ. ಇದನ್ನೂ ಓದಿ: ಸ್ಫೋಟಕ ಶತಕ ಸಿಡಿಸಿ T20ನಲ್ಲಿ ವಿಶ್ವದಾಖಲೆ ಬರೆದ ಮಿಲ್ಲರ್
ಉತ್ತಮ ಫಾರ್ಮ್‍ನಲ್ಲಿದ್ದ ಹೆಟ್ಮೆಯರ್ ವೆಸ್ಟ್ ಇಂಡೀಸ್ ತಂಡದ ಬ್ಯಾಟಿಂಗ್ ಬಲವಾಗಿದ್ದರು. ಆದರೆ ಇದೀಗ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಈ ಮೊದಲು ಸ್ಟಾರ್ ಆಟಗಾರರಾದ ಸುನೀಲ್ ನರೇನ್ ಮತ್ತು ಆಂಡ್ರೆ ರಸೆಲ್‍ರನ್ನು ವಿಶ್ವಕಪ್ ತಂಡದಿಂದ ಕೈಬಿಡಲಾಗಿತ್ತು. ಇದೀಗ ಹೆಟ್ಮೆಯರ್‌ರನ್ನು ಕೈಬಿಡಲಾಗಿದೆ. ಈ ನಡೆಗೆ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.