ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಇದೀಗ ಪತಿ ಜೊತೆ ಹ್ಯಾಪಿ ಮೂಡ್‌ನಲ್ಲಿದ್ದಾರೆ. ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಕೊಟ್ಟು ಪ್ಯಾರಿಸ್‌ಗೆ ಹಾರಿದ್ದಾರೆ. ಶಿಲ್ಪಾ ಶೆಟ್ಟಿ ನಯಾ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
View this post on Instagram
ನಟಿ ಶಿಲ್ಪಾ ಶೆಟ್ಟಿಗೆ ಮದುವೆಯಾಗಿ ಮಕ್ಕಳು ಆದ್ರು ಈ ನಟಿಯ ಚಾರ್ಮ್ ಒಂದಚೂರು ಕಡಿಮೆಯಾಗಿಲ್ಲ. ಈಗಲೂ ಚಿತ್ರರಂಗದಲ್ಲಿ ಆಕ್ಟೀವ್ ಆಗಿರುವ ಶಿಲ್ಪಾ, ಖಾಸಗಿ ಶೋನಲ್ಲಿ ಜಡ್ಜ್ ಆಗಿ ಕೂಡ ಕಾಣಿಸಿಕೊಳ್ತಿದ್ದಾರೆ. ಇನ್ನು ಅಶ್ಲೀಲ ಸಿನಿಮಾ ನಿರ್ಮಾಣದ ನಂತರ ಎಲ್ಲಿಯೂ ಕಾಣಿಸಿಕೊಂಡಿರದ ರಾಜ್ ಕುಂದ್ರಾ ಇತ್ತೀಚೆಗೆಷ್ಟೇ ಪತ್ನಿಯ ಹುಟ್ಟುಹಬ್ಬದಲ್ಲಿ ಕಾಣಿಸಿಕೊಂಡಿದ್ದರು. ಈಗ ದಂಪತಿಗಳಿಬ್ಬರು ಪ್ಯಾರಿಸ್‌ಗೆ ಹಾರಿದ್ದಾರೆ. ಇದನ್ನೂ ಓದಿ:ಸಮಂತಾ ಮೊದಲ ಸಂಭಾವನೆ ಕೇಳಿದ್ರೆ ನೀವು ಶಾಕ್ ಆಗುತ್ತೀರಾ
ಪ್ಯಾರಿಸ್‌ನ ಸುಂದರ ತಾಣಗಳಿಗೆ ಶಿಲ್ಪಾ ಶೆಟ್ಟಿ ದಂಪತಿ ಭೇಟಿ ನೀಡ್ತಿದ್ದಾರೆ. ಚಿತ್ರೀಕರಣದ ಬ್ರೇಕ್‌ನ ನಂತರ ಪ್ರವಾಸಕ್ಕೆ ಪ್ಯಾರಿಸ್‌ಗೆ ತೆರಳಿದ್ದಾರೆ. ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನೋಡುಗರ ಗಮನ ಸೆಳೆಯುತ್ತಿದೆ.
Live Tv
[brid partner=56869869 player=32851 video=960834 autoplay=true]