ಲಂಡನ್: ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಟೀಂ ಇಂಡಿಯಾ ಸ್ಫೋಟಕ ಆರಂಭಿಕ ಆಟಗಾರ ಶಿಖರ್ ಧವನ್ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ.
ಬಿಸಿಸಿಐ ಈ ಕುರಿತು ಖಚಿತ ಪಡಿಸಿದ್ದು, ಐಸಿಸಿಗೆ ಧವನ್ ಸ್ಥಾನದಲ್ಲಿ ರಿಷಬ್ ಪಂತ್ ರನ್ನ ಪಡೆಯಲು ಅನುಮತಿ ಕೋರಿದೆ. ಕೆಲ ಸಮಯದಿಂದ ಇಂಗ್ಲೆಂಡ್‍ನಲ್ಲೇ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆದಿದ್ದ ಧವನ್ ಟೂರ್ನಿಗೆ ಸಂರ್ಪೂಣರಾಗಿ ಅಲಭ್ಯರಾಗಿದ್ದಾರೆ.
Advertisement
Official Announcement ???????? – @SDhawan25 ruled out of the World Cup. We wish him a speedy recovery #TeamIndia #CWC19 pic.twitter.com/jdmEvt52qS
— BCCI (@BCCI) June 19, 2019
Advertisement
ಜೂನ್ 09 ರಂದು ನಡೆದ ಪಂದ್ಯದಲ್ಲಿ ಧವನ್ ತಮ್ಮ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ರು. ಆ ಬಳಿಕ ರಿಷಬ್ ಪಂತ್, ಧವನ್ ಸ್ಥಾನದಲ್ಲಿ ಇಂಗ್ಲೆಂಡ್‍ಗೆ ತೆರಳಿದರು. ಆದರೆ ಧವನ್ ಚೇತರಿಕೆ ಆಗುವ ವಿಶ್ವಾಸ ಹೊಂದಿದ್ದರಿಂದ ಅವರನ್ನು ಅಲ್ಲೇ ಉಳಿಸಿಕೊಳ್ಳಲಾಗಿತ್ತು. ಸದ್ಯ ಅವರಿಗೆ ಆಗಿರುವ ಗಾಯದಿಂದ ಚೇತರಿಕೆ ಕಾಣುವುದು ಕಷ್ಟಸಾಧ್ಯವಾಗಿರುವ ಪರಿಣಾಮ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ಧವನ್ ಉತ್ತಮ ಪ್ರದರ್ಶನ ನೀಡಿದ್ದು, ಇದುವರೆಗೂ ಆಡಿರುವ 20 ಇನ್ನಿಂಗ್ಸ್ ಗಳಲ್ಲಿ 65.16ರ ಸರಾಸರಿಯಲ್ಲಿ 1,238 ರನ್ ಗಳಿಸಿದ್ದಾರೆ. ಇದರಲ್ಲಿ 6 ಶತಕ ಹಾಗೂ 4 ಅರ್ಧ ಶತಕಗಳು ದಾಖಲಾಗಿದೆ.
Advertisement
Following several specialist opinions, he will remain in a cast until the middle of July and therefore will not be available for the remainder of #CWC19
— BCCI (@BCCI) June 19, 2019
Advertisement
ಜೂನ್ 16 ರಂದು ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಧವನ್ ಅವರ ಸ್ಥಾನದಲ್ಲಿ ಬಡ್ತಿ ಪಡೆದ ಕೆಎಲ್ ರಾಹುಲ್ ಸ್ಥಾನ ಬ್ಯಾಟಿಂಗ್ ನಡೆಸಿದ್ದರು. ರೋಹಿತ್, ರಾಹುಲ್ ಜೋಡಿ ಉತ್ತಮ ಆರಂಭ ನೀಡಿ ಆಯ್ಕೆ ಸಮಿತಿಯ ಗಮನ ಸೆಳೆದಿತ್ತು. ಅಲ್ಲದೇ ಪಂದ್ಯದಲ್ಲಿ ಅರ್ಧ ಶತಕ ಗಳಿಸಿದ್ದ ರಾಹುಲ್, ತಾವು ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಸಿದ್ಧ ಎಂದು ಸಾಬೀತು ಪಡಿಸಿದ್ದರು.
ವಿಶ್ವಕಪ್ ಟೂರ್ನಿಯ ಮುಂದಿನ ಹಂತದಲ್ಲಿ ಟೀಂ ಇಂಡಿಯಾ ಆಫ್ಘಾನಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳನ್ನು ಎದುರಿಸಲಿದೆ. ಐಸಿಸಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಧವನ್ ಅವರು ಟೂರ್ನಿಯಿಂದ ಹೊರ ಬಿದ್ದಿರುವುದು ತಂಡಕ್ಕೆ ಬಹುದೊಡ್ಡ ನಷ್ಟವಾಗಿದೆ. ಆದರೆ ಆಯ್ಕೆ ಸಮಿತಿ ಯಾವುದೇ ಅಡೆ ತಡೆ ಎದುರಿಸಲು ಸಿದ್ಧತೆ ನಡೆಸಿದ್ದ ಪರಿಣಾಮ ರಾಹುಲ್‍ಗೆ ಬಡ್ತಿ ನೀಡಿ ಆ ಸ್ಥಾನದಲ್ಲಿ ಅಲೌಂಡರ್ ವಿಜಯ್ ಶಂಕರ್ ಅವರಿಗೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಸ್ಥಾನ ನೀಡಿತ್ತು.
Training ✔✔#TeamIndia batsman @klrahul11 having a go at in the nets today. pic.twitter.com/J1cKy1Pyts
— BCCI (@BCCI) June 19, 2019
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]