ನವದೆಹಲಿ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರನ್ನು ಕ್ರಿಕೆಟಿಗ ಶಿಖರ್ ಧವನ್ ನಕಲು ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಶಿಖರ್ ಧವನ್ ವಿಡಿಯೋಗೆ ಫನ್ನಿ ಕಮೆಂಟ್ ಬಂದಿದ್ದು, ನೋಡುಗರನ್ನು ನಗೆಗಡಲಲ್ಲಿ ತೇಲಿಸಿದೆ.
ಹೌಸ್‍ಫುಲ್-4 ಚಿತ್ರದ ಅಕ್ಷಯ್ ಕುಮಾರ್ ನಟನೆಯ ಬಾಲಾ ಪಾತ್ರವನ್ನು ಶಿಖರ್ ಧವನ್ ನಕಲಿಸಿದ್ದಾರೆ. ಧವನ್ ಜೊತೆಯಲ್ಲಿ ಖಲೀಲ್ ಅಹಮದ್, ಯಜುವೇಂದ್ರ ಚಹಲ್ ಮತ್ತು ರೋಹಿತ್ ಶರ್ಮಾ ಇರೋದನ್ನು ವಿಡಿಯೋದಲ್ಲಿ ನೋಡಬಹುದು.
Advertisement
Advertisement
ವಿಡಿಯೋದಲ್ಲಿ ಖಲೀಲ್, ರೋಹಿತ್ ಶರ್ಮಾ ಗ್ಲವ್ಸ್ ಎಲ್ಲಿಟ್ಟಿದ್ದಾರೆ ನಿಮಗೆ ಗೊತ್ತಾ ಅಂತಾ ಕೇಳ್ತಾರೆ. ಶಿಖರ್ ಉತ್ತರಿಸುವಾಗ ಚಹಲ್ ಗ್ಲಾಸ್‍ಗೆ ಚಮಚದಿಂದ ಹೊಡೆದು ಶಬ್ದ ಮಾಡತ್ತಿದ್ದಂತೆ ಧವನ್ ಬಾಲಾ ಪಾತ್ರದಾರಿ ಆಗ್ತಾರೆ. ಹೀಗೆ ಎರಡ್ಮೂರು ಸಾರಿ ಧವನ್ ಬಾಲಾರಂತೆ ಮಾಡೋದನ್ನು ನೋಡಿ ಎಲ್ಲರೂ ನಗುತ್ತಾರೆ.
Advertisement
https://www.instagram.com/p/B4mJeJ2H0K3/?utm_source=ig_embed&utm_campaign=embed_video_watch_again
Advertisement
ಈ ಫನ್ನಿ ದೃಶ್ಯಗಳನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿರುವ ಶಿಖರ್ ಧವನ್, ಬಾಲಾನ ಸೈಡ್ ಎಫೆಕ್ಟ್ ಎಂದು ಬರೆದುಕೊಂಡಿದ್ದಾರೆ. ಹಾಗೆ ವಿಡಿಯೋವನ್ನು ಅಕ್ಷಯ್ ಕುಮಾರ್, ಖಲೀಲ್ ಮತ್ತು ಚಹಲ್ ಗೆ ಟ್ಯಾಗ್ ಮಾಡಿದ್ದಾರೆ. ಕೇವಲ ಒಂದು ದಿನದಲ್ಲಿ 7 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ.