ವಾಷಿಂಗ್ಟನ್: 14 ವರ್ಷ ಮೆಟಾ ಪ್ಲಾಟ್‌ಫಾರ್ಮ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಒಒ) ಹುದ್ದೆಯಿಂದ ಶೆರಿಲ್ ಸ್ಯಾಂಡ್‌ಬರ್ಗ್ ಕೆಳಗಿಳಿಯುತ್ತಿರುವುದಾಗಿ ತಿಳಿಸಿದ್ದಾರೆ.
ಮಾರ್ಕ್ ಜುಕರ್‌ಬರ್ಗ್ ಬಳಿಕ ಮೆಟಾದ 2ನೇ ಮುಖ್ಯ ವ್ಯಕ್ತಿ ಶೆರಿಲ್ ಗುರುವಾರ ತಮ್ಮ ಅಧಿಕೃತ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಾವು ಹುದ್ದೆಯನ್ನು ತ್ಯಜಿಸುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕಚೇರಿಯಿಂದ್ಲೇ ಕೆಲಸ ಮಾಡಿ, ಇಲ್ಲವೇ ಬಿಟ್ಟುಬಿಡಿ- ಟೆಸ್ಲಾ ಉದ್ಯೋಗಿಗಳಿಗೆ ಮಸ್ಕ್ ವಾರ್ನಿಂಗ್
Advertisement
Advertisement
ಸ್ಯಾಂಡ್‌ಬರ್ಗ್ ಕಳೆದ ವರ್ಷ ತಮ್ಮ ಹುದ್ದೆಯನ್ನು ತೊರೆಯುತ್ತಿರುವುದಾಗಿ ತಿಳಿಸಿದ್ದರು. ಆದರೂ ತಾವು ಮಂಡಳಿ ತೊರೆಯುವುದಿಲ್ಲ ಎಂದಿದ್ದರು. ಮುಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಜೇವಿಯರ್ ಒಲಿವಾ ಕಾರ್ಯನಿರ್ವಹಿಸಲಿದ್ದಾರೆ ಎಂದು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ತಮ್ಮ ಅಧಿಕೃತ ಫೇಸ್‌ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
Advertisement
14 ವರ್ಷಗಳ ಬಳಿಕ ನನ್ನ ಉತ್ತಮ ಸ್ನೇಹಿತೆ ಹಾಗೂ ಪಾಲುದಾರರಾಗಿದ್ದ ಶೆರಿಲ್ ಸ್ಯಾಂಡ್‌ಬರ್ಗ್ ಮೆಟಾದ ಸಿಒಒ ಹುದ್ದೆಯಿಂದ ಕೆಳಗಿಳಿಯುತ್ತಿದ್ದಾರೆ ಎಂದು ಜುಕರ್‌ಬರ್ಗ್ ಫೇಸ್‌ಬುಕ್ ಪೋಸ್ಟ್‌ನ ಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸಂದೇಶ ಕಳುಹಿಸಿದ ಬಳಿಕವೂ ಎಡಿಟ್‌ಗೆ ಅವಕಾಶ ನೀಡಲಿದೆ ವಾಟ್ಸಪ್
Advertisement
ಸಿಒಒ ಹುದ್ದೆಯನ್ನು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ವ್ಯಾಖ್ಯಾನಿಸಿ ಪ್ರಸಿದ್ಧಿ ಪಡೆಯುವುದು ಸಾಧ್ಯ ಎಂದು ನಾನು ಭಾವಿಸಿರಲಿಲ್ಲ. ಆದರೆ ಅದು ಸಾಧ್ಯವಿದ್ದರೂ ಮೆಟಾ ತನ್ನ ವ್ಯಾಪಾರ ಹಾಗೂ ಸೇವೆಗಳಿಂದ ಒಂದು ಅರ್ಥಪೂರ್ಣ ಹಂತವನ್ನು ತಲುಪಿದೆ ಎಂದು ನಾನು ಭಾವಿಸುತ್ತೇನೆ ಎಂದು ಸ್ಯಾಂಡ್‌ಬರ್ಗ್ ಸಿಒಒ ಹುದ್ದೆಯನ್ನು ತ್ಯಜಿಸುತ್ತಿರುವ ಬಗ್ಗೆ ಹೇಳಿದ್ದಾರೆ.
ಸ್ಯಾಂಡ್‌ಬರ್ಗ್ ಸಿಒಒ ಹುದ್ದೆಯನ್ನು ತ್ಯಜಿಸಲು ಮುಖ್ಯ ಕಾರಣ ಏನೆಂಬುದನ್ನು ಸ್ಪಷ್ಟಪಡಿಸಿದ್ದಾರೆ. ಮುಂದೆ ತಾನು ಲೋಕೋಪಕಾರಿ ಕೆಲಸದ ಮೇಲೆ ಹೆಚ್ಚು ಗಮನ ಹರಿಸಲು ಸಿಒಒ ಹುದ್ದೆಯನ್ನು ತ್ಯಜಿಸುತ್ತಿರುವುದಾಗಿ ತಿಳಿಸಿದ್ದಾರೆ.