Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಜಾಶ್ರಯಕ್ಕೆ ಹಸೀನಾ ಯುಕೆಗೆ ಹೋಗೋದು ಯಾಕೆ? – ವಾಯುನೆಲೆಯಲ್ಲಿ ದೋವಲ್‌ ಭೇಟಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ರಾಜಾಶ್ರಯಕ್ಕೆ ಹಸೀನಾ ಯುಕೆಗೆ ಹೋಗೋದು ಯಾಕೆ? – ವಾಯುನೆಲೆಯಲ್ಲಿ ದೋವಲ್‌ ಭೇಟಿ

Latest

ರಾಜಾಶ್ರಯಕ್ಕೆ ಹಸೀನಾ ಯುಕೆಗೆ ಹೋಗೋದು ಯಾಕೆ? – ವಾಯುನೆಲೆಯಲ್ಲಿ ದೋವಲ್‌ ಭೇಟಿ

Public TV
Last updated: August 6, 2024 8:08 am
Public TV
Share
2 Min Read
Sheikh Hasina 1
SHARE

ನವದೆಹಲಿ: ಬಾಂಗ್ಲಾದೇಶದ (Bangladesh) ಮಾಜಿ ಪ್ರಧಾನಿ ಶೇಖ್‌ ಹಸೀನಾ (Sheikh Hasina) ಅವರಿಗೆ ಯುಕೆ (United Kingdom) ರಾಜಾಶ್ರಯ ನೀಡಲು ಒಪ್ಪುವರೆಗೂ ಅವರಿಗೆ ಭಾರತ (India) ಮಧ್ಯಂತರ ರಾಜಾಶ್ರಯ ನೀಡಲಿದೆ.

ಸೋಮವಾರ ಸಂಜೆ ದೆಹಲಿಯಿಂದ 30 ಕಿ.ಮೀ ದೂರದಲ್ಲಿರುವ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಹಿಂಡನ್‌ ವಾಯುನೆಲೆಗೆ ಹಸೀನಾ ಬಂದಿಳಿದಿದ್ದಾರೆ. ಹಿಂಡನ್‌ ವಾಯುನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ಅವರು ಶೇಖ್‌ ಹಸೀನಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇದನ್ನೂ ಓದಿ: ದೇಶ ತೊರೆದ ಶೇಖ್ ಹಸೀನಾಗೆ ಭಾರತ ಆಶ್ರಯ – ʻಮಹಾ ಪಲಾಯನʼ ಬೆನ್ನಲ್ಲೇ ಉದ್ರಿಕ್ತರಿಂದ ಸಂಭ್ರಮಾಚರಣೆ

Bangladesh

ಸದ್ಯ ಬಾಂಗ್ಲಾದೇಶ ಏರ್‌ಫೋರ್ಸ್‌ ಸಿ-130 ಮಿಲಿಟರಿ ಟ್ರಾನ್ಸ್‌ಪೋರ್ಟ್‌ ವಿಮಾನ ವಾಯುನೆಲೆಯಲ್ಲಿ ಲ್ಯಾಂಡ್‌ ಆಗಿದೆ. ಯಾವಾಗ ಶೇಖ್‌ ಹಸೀನಾ ಯುಕೆಗೆ ತೆರಳಲಿದ್ದಾರೆ ಎನ್ನುವುದು ಖಚಿತವಾಗಿಲ್ಲ. ಇಂದು ಮಧ್ಯಾಹ್ನದ ನಂತರ ಯುಕೆಗೆ ಹೋಗಲಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದರೆ ಇನ್ನೂ ರಾಜಾಶ್ರಯ ನೀಡುವ ಬಗ್ಗೆ ಯುಕೆ ಅನುಮತಿ ನೀಡಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಯುಕೆ ಅನುಮತಿ ನೀಡುವವರೆಗೂ ಹಸೀನಾ ಭಾರತದಲ್ಲೇ ಇರಲಿದ್ದಾರೆ.

 

ಯುಕೆಗೆ ರಾಜಾಶ್ರಯ ಹೇಗೆ?
ಬಾಂಗ್ಲಾದೇಶ ರಾಷ್ಟ್ರಪಿತ ಶೇಖ್ ಮುಜಿಬುರ್ ರೆಹಮಾನ್ ಅವರಿಗೆ ಇಬ್ಬರು ಹಸೀನಾ ಮತ್ತು ರೆಹನಾ ಇಬ್ಬರು ಪುತ್ರಿಯರು. ರೆಹನಾ ಅವರ ಪುತ್ರಿ ಟುಲಿಪ್‌ ಸಿದ್ದಿಕಿ ಲೇಬರ್‌ ಪಕ್ಷದ ನಾಯಕಿ ಮತ್ತು ಸಂಸತ್‌ ಸದಸ್ಯರಾಗಿದ್ದಾರೆ. ಈ ಕಾರಣಕ್ಕೆ ಹಸೀನಾ ಬ್ರಿಟನ್‌ಗೆ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ.

ಬಾಂಗ್ಲಾದೇಶದ ಪರಿಸ್ಥಿತಿಯನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ವಿವರಿಸಿದ್ದಾರೆ. ಮೋದಿ ಅವರು ಹಸೀನಾ ಅವರನ್ನು ಭೇಟಿ ಮಾಡುತ್ತಾರೆಯೇ ಎನ್ನುವುದರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ.

bangladesh protest

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಕೂಡ ಜೈಶಂಕರ್ ಅವರೊಂದಿಗೆ ಮಾತನಾಡಿದ್ದಾರೆ. ಸಂಸತ್ತಿನ ಹೊರಭಾಗದಲ್ಲಿ ಇಬ್ಬರೂ ಸಂಕ್ಷಿಪ್ತವಾಗಿ ಮಾತನಾಡಿದರು ಎಂದು  ಕಾಂಗ್ರೆಸ್‌ ತಿಳಿಸಿದೆ.

 

ಬಾಂಗ್ಲಾದಲ್ಲಿ ಹಿಂಸಾಚಾರಕ್ಕೆ ಕಾರಣ ಏನು?
ಬಾಂಗ್ಲಾದೇಶದಲ್ಲಿ ಪ್ರಸ್ತುತ ಕೋಟಾ ವ್ಯವಸ್ಥೆ ಪ್ರಕಾರ ಸರ್ಕಾರಿ ಉದ್ಯೋಗಗಳಲ್ಲಿ 56% ಕಾಯ್ದಿರಿಸಲಾಗಿದೆ. ಇದರಲ್ಲಿ 1971ರ ವಿಮೋಚನಾ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ ಶೇ.30, ಹಿಂದುಳಿದ ಜಿಲ್ಲೆಗಳವರಿಗೆ ಶೇ.10, ಮಹಿಳೆಯರಿಗೆ ಶೇ.10, ಜನಾಂಗೀಯ ಅಲ್ಪಸಂಖ್ಯಾತರಿಗೆ ಶೇ.5 ಹಾಗೂ ಅಂಗವಿಕಲರಿಗೆ ಶೇ.1 ಮೀಸಲಾತಿ ಕಲ್ಪಿಸಲಾಗಿದೆ. ವಿಮೋಚನಾ ಹೋರಾಟದ ಕುಟುಂಬಸ್ಥರಿಗೆ ಕಲ್ಪಿಸಿರುವ ಶೇ.30 ಮೀಸಲಾತಿ ರದ್ದು ಪಡಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ಬೇಡಿಕೆಯನ್ನು ನಿರ್ಗಮಿತ ಪ್ರಧಾನಿ ಶೇಕ್‌ ಹಸೀನಾ ತಿರಸ್ಕರಿಸಿದ್ದರಿಂದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ವಿದ್ಯಾರ್ಥಿಗಳ ಪ್ರತಿಭಟನೆಗೆ ಸೇನೆ, ವಿಪಕ್ಷಗಳಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದರಿಂದ ಆಕ್ರೋಶ ಕಟ್ಟೆಯೊಡೆದಿದೆ. ಇದರ ಬೆನ್ನಲ್ಲೇ ಶೇಖ್‌ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದಾರೆ.

TAGGED:bangladeshsheikh hasinaUnited Kingdomಬಾಂಗ್ಲಾದೇಶಭಾರತಯುಕೆಶೇಖ್‌ ಹಸೀನಾ
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Abhishek Sharma 2
Cricket

ಹೈದರಾಬಾದ್‌ನಲ್ಲಿ ಸನ್‌ ಶೈನ್‌ – ಸಿಎಸ್‌ಕೆ ವಿರುದ್ಧ 10 ರನ್‌ಗಳ ಸೂಪರ್‌ ಜಯ

Public TV
By Public TV
2 hours ago
Mallikarjun kharge
Latest

543 ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ: ಮೋದಿಗೆ ಖರ್ಗೆ ಸವಾಲು

Public TV
By Public TV
2 hours ago
Iran Foreign Minister Abbas Araghchi
Latest

ಇರಾನ್‌ ವಿದೇಶಾಂಗ ಸಚಿವರನ್ನೇ ಮೂರ್ಖ ಎಂದ ಐಆರ್‌ಜಿಸಿ

Public TV
By Public TV
3 hours ago
Abhishek Sharma 1
Cricket

ಸಿಎಸ್‌ಕೆ ವಿರುದ್ಧ 15 ಎಸೆತಗಳಲ್ಲಿ ಫಿಫ್ಟಿ – ತನ್ನದೇ ದಾಖಲೆ ಮುರಿದ ಅಭಿ

Public TV
By Public TV
3 hours ago
Caste Census
Bengaluru City

ಜನಗಣತಿಗೆ ಗೈರಾದ್ರೆ ಕಠಿಣ ಕ್ರಮ – 1 ಸಾವಿರ ದಂಡದೊಂದಿಗೆ 3 ವರ್ಷ ಜೈಲು

Public TV
By Public TV
3 hours ago
Narendra Modi
Latest

ಇವರಿಗೆ ಅಧಿಕಾರ ಒಂದೇ ಕುಟುಂಬದ ಕೈಯಲ್ಲಿರಬೇಕು, ಹೆಣ್ಣುಮಕ್ಕಳು ಅಳುತ್ತಿದ್ದರೆ ಕಾಂಗ್ರೆಸ್, ಮಿತ್ರಪಕ್ಷಗಳು ಹಬ್ಬ ಮಾಡುತ್ತಿವೆ: ಮೋದಿ ಆಕ್ರೋಶ

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?