– ಮತದಾನದ ವೇಳೆ 17 ಜನ ಬಲಿ
ಢಾಕಾ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್ ಪಾರ್ಟಿ ಜಯಗಳಿಸಿದ್ದು, ಪಕ್ಷದ ನಾಯಕಿ ಶೇಖ್ ಹಸೀನಾ ಅವರು ನಾಲ್ಕನೇ ಬಾರೀ ಪ್ರಧಾನಿ ಅಧಿಕಾರ ಸ್ವೀಕರಿಸಲಿದ್ದಾರೆ.
ಬಾಂಗ್ಲಾದೇಶ 300 ಕ್ಷೇತ್ರಗಳ ಪೈಕಿ 299 ಕ್ಷೇತ್ರಗಳ ಮತದಾನವು ನಿನ್ನೆ ಬೆಳಗ್ಗೆ 8ರಿಂದ ಸಂಜೆ 6 ಗಂಟೆವರೆಗೆ ನಡೆಯಿತು. ಬಳಿಕ ಆರಂಭವಾದ ಮತ ಎಣಿಕೆಯಲ್ಲಿ ಅವಾಮಿ ಲೀಗ್ ಪಾರ್ಟಿ ಮುನ್ನಡೆ ಸಾಧಿಸಿದೆ.
Advertisement
Advertisement
17 ಜನ ಬಲಿ:
ಮತದಾನದ ವೇಳೆ ಆಡಳಿತರೂಢ ಅವಾಮಿ ಲೀಗ್ ಪಾರ್ಟಿ ಮತ್ತು ವಿಪಕ್ಷ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ (ಬಿಎನ್‍ಪಿ) ಕಾರ್ಯಕರ್ತರ ನಡುವೆ ಜಗಳ ಆರಂಭವಾಗಿ ಹಿಂಸಾಚಾರಕ್ಕೆ ತಿರುಗಿತ್ತು. ಪರಿಣಾಮ ಓರ್ವ ಪೊಲೀಸ್, ಸರ್ಕಾರಿ ಅಧಿಕಾರಿಗಳು, ಅವಾಮಿ ಲೀಗ್ ಪಾರ್ಟಿ ಐವರು ಸದಸ್ಯರು, ಬಿಎನ್‍ಪಿ ಕಾರ್ಯಕರ್ತರು ಸೇರಿದಂತೆ 17 ಜನರು ಬಲಿಯಾಗಿದ್ದಾರೆ. ಇವರಲ್ಲಿ ಮೂವರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.
Advertisement
ಇವಿಎಂ ಬಳಕೆ:
ಸಾರ್ವತ್ರಿಕ ಚುನಾವಣೆ ವೇಳೆ ಇದೇ ಮೊದಲಬಾರಿಗೆ ಬಾಗ್ಲಾದೇಶ ಚುನಾವಣಾ ಆಯೋಗವು ಮತಯಂತ್ರ (ಇವಿಎಂ) ಬಳಕೆ ಮಾಡಿದೆ. 300 ಕ್ಷೇತ್ರಗಳ ಪೈಕಿ 21 ಲಕ್ಷ ಜನಸಂಖ್ಯೆ ಇರುವ 6 ಕ್ಷೇತ್ರಗಳಲ್ಲಿ ಇವಿಎಂ ವ್ಯವಸ್ಥೆ ಅಳವಡಿಸಲಾಗಿತ್ತು. ಎರಡು ಕಡೆಗಳಲ್ಲಿ ಮಾತ್ರ ಇವಿಎಂ ದೋಷ ಕಂಡುಬಂದಿದೆ.
Advertisement
ಚುನಾವಣಾ ಭದ್ರತೆ:
ಸಾರ್ವತ್ರಿಕ ಚುನಾವಣೆ ವೇಳೆ ಭಾರೀ ಭದ್ರತೆಗೆ ಮುಂದಾಗಿದ್ದ ಆಡಳಿತ ರೂಢ ಪಕ್ಷವು, 6 ಲಕ್ಷ ಸೈನಿಕರು, ಸ್ಥಳೀಯ ಪೊಲೀಸ್ ಹಾಗೂ ವಿವಿಧ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಿತ್ತು. ಆದರೆ ಅವಾಮಿ ಲೀಗ್ ಪಾರ್ಟಿ ಮತ್ತು ಬಿಎನ್‍ಪಿ ಕಾರ್ಯಕರ್ತರ ಮಾರಾಮರಿಯಿಂದಾಗಿ 17 ಜನರು ಮೃತಪಟ್ಟಿದ್ದಾರೆ. ಬಿಎನ್‍ಪಿ ಸದಸ್ಯನೊಬ್ಬ ಹಿಂಸಾಚಾರದ ವೇಳೆ ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv