ಪಾಕಿಸ್ತಾನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಆಯ್ಕೆ

Public TV
2 Min Read
Shehbaz Sharif 1

ಇಸ್ಲಮಾಬಾದ್: ಪಾಕಿಸ್ತಾನದ ನೂತನ ಪ್ರಧಾನ ಮಂತ್ರಿಯಾಗಿ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರ, ಶೆಹಬಾಜ್ ಷರೀಫ್ ಆಯ್ಕೆಯಾಗಿದ್ದಾರೆ.

ಸದನದ ನೂತನ ನಾಯಕರ ಆಯ್ಕೆ ಪ್ರಕ್ರಿಯೆ ಭಾನುವಾರ ಆರಂಭವಾಗಿತ್ತು. ರವಿವಾರದ ಪ್ರಮುಖ ಬೆಳವಣಿಗೆಯಾಗಿ ಬಿಲಾವಲ್ ಭುಟ್ಟೋ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮತ್ತು ವಿಪಕ್ಷಗಳ ಇತರ ಮುಖಂಡರೆಲ್ಲ ಸೇರಿ ಶೆಹಬಾಜ್ ಷರೀಫ್ ಅವರನ್ನು ಮೈತ್ರಿಕೂಟದ ಮುಖಂಡರನ್ನಾಗಿ ಆಯ್ಕೆ ಮಾಡಿದ್ದಾರೆ. ಇದನ್ನೂ ಓದಿ: ಬೆಳಗಾವಿ ಬಿಜೆಪಿಯಲ್ಲಿನ ಭಿನ್ನಮತ ಶಮನಕ್ಕೆ ಮುಂದಾದ ಅರುಣ್ ಸಿಂಗ್, ಬಿಎಸ್‍ವೈ

IMRAN KHAN

ಶನಿವಾರ ರಾತ್ರಿ ಪಾಕಿಸ್ತಾನದ ನ್ಯಾಶನಲ್ ಅಸೆಂಬ್ಲಿಯಲ್ಲಿ ನಡೆದ ಅವಿಶ್ವಾಸ ಮತ ಮಂಡನೆ ಮತದಾನದಲ್ಲಿ ಇಮ್ರಾನ್ ಖಾನ್ ಸೋಲನುಭವಿಸಿದ್ದರು. ಇದನ್ನೂ ಓದಿ: ಲವ್ ಜಿಹಾದ್ ಬದಲಿಗೆ `ಲವ್ ಕೇಸರಿ’ ಟ್ರೆಂಡ್ ಸೃಷ್ಟಿಸಲು ಶ್ರೀರಾಮಸೇನೆ ಕರೆ

ಇಮ್ರಾನ್ ಖಾನ್ ಹೇಳಿದ್ದೇನು?: 16 ಸಾವಿರ ಕೋಟಿ ರೂಪಾಯಿ ಮತ್ತು 8 ಸಾವಿರ ಕೋಟಿ ರೂಪಾಯಿಯ ಭ್ರಷ್ಟಾಚಾರದ ಕೇಸ್ ಹೊಂದಿರುವ ವ್ಯಕ್ತಿ ಆ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾರೆ. ದೇಶಕ್ಕೆ ಅದಕ್ಕಿಂತ ದೊಡ್ಡ ಅವಮಾನ ಇರಲಾರದು. ರಾಷ್ಟ್ರೀಯ ಅಸೆಂಬ್ಲಿಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಇಮ್ರಾನ್ ಖಾನ್ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಶಹಬಾಜ್ ಷರೀಫ್ ಯಾರು?: ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ಸಹೋದರನಾಗಿರುವ ಶೆಹಬಾಜ್ ಷರೀಫ್, ದೇಶದ ಹೊರಗೆ ಅಷ್ಟೊಂದು ಪ್ರಸಿದ್ದರಲ್ಲದಿದ್ದರೂ, ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದ ಪಾಕಿಸ್ತಾನದಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. 1999 ರಲ್ಲಿ ಪಾಕಿಸ್ತಾನದಲ್ಲಿ ಮಿಲಿಟರಿ ದಂಗೆಯ ನಂತರ ಶಹಬಾಜ್ ಜೈಲಿನಲ್ಲಿದ್ದರು, ಬಳಿಕ ಸೌದಿ ಅರೇಬಿಯಾಕ್ಕೆ ಗಡಿಪಾರಾಗಿದ್ದರು. 2007 ರಲ್ಲಿ ದೇಶಕ್ಕೆ ಮರಳಿದ ಅವರು, ಪನಾಮ ಪೇಪರ್ಸ್ ಲೀಕ್ ಸಂಬಂಧಿಸಿದ ಆಸ್ತಿಯನ್ನು ಮರೆಮಾಚುವ ಆರೋಪದ ಮೇಲೆ 2017 ರಲ್ಲಿ ನವಾಜ್ ಷರೀಫ್ ತಪ್ಪಿತಸ್ಥರೆಂದು ಸಾಬೀತಾದ ನಂತರ ರಾಷ್ಟ್ರೀಯ ರಂಗಕ್ಕೆ ಪ್ರವೇಶಿಸಿದರು. ನವಾಜ್ ಷರೀಫ್‍ಗಿಂತ ಭಿನ್ನವಾಗಿ, ಶಹಬಾಜ್ ಅವರು ಪಾಕಿಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ವಿದೇಶಿ ಮತ್ತು ರಕ್ಷಣಾ ನೀತಿಯನ್ನು ನಿಯಂತ್ರಿಸುವ ಪಾಕಿಸ್ತಾನದ ಮಿಲಿಟರಿಯೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದಾರೆ ಎಂದು ವಿಶ್ಲೇಷಕರು ಹೇಳುತ್ತಾರೆ.

Share This Article