– ಪಂಜಾಬ್ ಸಿಎಂ ಕೋಟಾದಡಿ 7 ಸ್ಟಾರ್ ಲಕ್ಷುರಿ ಸರ್ಕಾರಿ ಮನೆ ಹಂಚಿಕೆ
ನವದೆಹಲಿ/ಚಂಡೀಗಢ: ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ವಿರುದ್ಧ ಬಿಜೆಪಿ ಹೊಸ ದಾಳಿ ನಡೆಸಿದೆ. ಚಂಡೀಗಢದಲ್ಲಿ 2 ಎಕ್ರೆ ಪ್ರದೇಶದಲ್ಲಿ ದೆಹಲಿ ಶೀಷ್ ಮಹಲ್‌ಗಿಂತಲೂ ಐಷಾರಾಮಿ ಮನೆ ನಿರ್ಮಿಸಲು ಪಂಜಾಬ್ ಸರ್ಕಾರದ ಸಂಪನ್ಮೂಲಗಳನ್ನ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದೆ. ಅಲ್ಲದೇ ʻಶೀಷ್ ಮಹಲ್ 2.0ʼ(Sheesh Mahal 2.0) ಅಂತ ಮನೆಯ ಫೋಟೋ ಕೂಡ ಟ್ವೀಟ್ ಮಾಡಿದೆ.
‼️शीशमहल 2.0
दिल्ली में 52 करोड़ का शीशमहल बनवाने के बाद अब केजरीवाल चंडीगढ़ में 2 एकड़ की 7-स्टार सरकारी कोठी में आराम फरमाएंगे। जनता के सामने आम आदमी होने का ड्रामा करने वाले सर जी के शाही ठाठ कम होने का नाम ही नहीं ले रहे हैं।
केजरीवाल न तो मंत्री हैं, न विधायक, फिर भी… pic.twitter.com/V7MLczBswn
— BJP Delhi (@BJP4Delhi) October 31, 2025
ಹೌದು. ದೆಹಲಿ ಮಹಿಳಾ ಆಯೋಗದ (DCW) ಮಾಜಿ ಅಧ್ಯಕ್ಷೆ ಸ್ವಾಮಿ ಮಲಿವಾಲ್ ಅವರು, ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಕೋಟಾದಡಿ ಚಂಡೀಗಢ ಸೆಕ್ಟರ್-2ರಲ್ಲಿ (Chandigarh’s Sector 2 ) ಕೇಜ್ರಿವಾಲ್‌ಗೆ ʻಐಷಾರಾಮಿ 7-ಸ್ಟಾರ್ ಸರ್ಕಾರಿ ಮಹಲುʼ ಹಂಚಿಕೆ ಮಾಡಲಾಗಿದೆ ಎಂದು ಆರೋಪಸಿದರು. ಆ ಬಳಿಕ ಬಿಜೆಪಿ ದಾಳಿ ನಡೆಸಿದೆ. ಇದನ್ನೂ ಓದಿ: ಶೀಷ್ ಮಹಲ್‌ನಿಂದ ಹೊಸ ಅಬಕಾರಿ ನೀತಿ ಹಗರಣ ವರೆಗೆ – ದೆಹಲಿಯಲ್ಲಿ ಆಪ್ ಸೋತಿದ್ದೇಕೆ?
ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ 52 ಕೋಟಿ ರೂ. ವೆಚ್ಚದಲ್ಲಿ ಶೀಷ್ ಮಹಲ್ ನಿರ್ಮಿಸಿದ್ದರು. ಇದೀಗ ಚಂಡೀಗಢದಲ್ಲಿ 2 ಎಕ್ರೆ ವಿಸ್ತೀರ್ಣದಲ್ಲಿ 7 ಸ್ಟಾರ್ ಐಷಾರಾಮಿ ಸರ್ಕಾರಿ ಮನೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಸಾರ್ವಜನಿಕರ ಮುಂದೆ ಸಾಮಾನ್ಯ ವ್ಯಕ್ತಿಯಂತೆ ನಾಟಕವಾಡುವ ಸರ್ ಜಿ ಅವರ ರಾಜವೈಭೋಗ ಕಡಿಮೆಯಾಗುವ ಯಾವುದೇ ಲಕ್ಷಣ ಸಧ್ಯಕ್ಕೆ ಕಾಣ್ತಿಲ್ಲ ಅಂತ ಬಿಜೆಪಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ.
जब से प्रधानमंत्री की फर्जी यमुना की कहानी पकड़ी गयी है बीजेपी बौखला सी गयी है।
और बौखलाहट में बीजेपी आजकल सबकुछ फ़र्ज़ी कर रही है। फ़र्ज़ी यमुना, फ़र्ज़ी प्रदूषण के आंकडे, फर्जी बारिश के दावे, और अब फ़र्ज़ी 7 स्टार दावा।
बीजेपी का फ़र्ज़ी दावा है कि चंडीगढ़ में 7 स्टार घर… https://t.co/ZlGsIYwtNr
— Aam Aadmi Party Delhi (@AAPDelhi) October 31, 2025
ಇದರೊಂದಿಗೆ ಆಪ್ ನಾಯಕನನ್ನ ʻಸೂಪರ್ ಸಿಎಂʼ ಎಂದು ವ್ಯಂಗ್ಯ ಮಾಡುವ ಬಂಗಲೆಯ ಸ್ಯಾಟಲೈಟ್ ಫೋಟೋವನ್ನ ಬಿಜೆಪಿ ಹಂಚಿಕೊಂಡಿದೆ. ಕೇಜ್ರಿವಾಲ್ ಸಚಿವರಲ್ಲ, ಶಾಸಕರೂ ಅಲ್ಲ. ಆದ್ರೂ ಅವರು ತನ್ನ ಅರಮನೆಗಳು, ರಾಜ ವೈಭೋಗಗಳು, ಐಷಾರಾಮಿ ಜೊತೆಗಿನ ನಂಟು ಬಿಟ್ಟುಕೊಡುವುದಿಲ್ಲ ಎಂದು ಲೇವಡಿ ಮಾಡಿದೆ. ಇದನ್ನೂ ಓದಿ: ಜನ ಕೋವಿಡ್ ವಿರುದ್ಧ ಹೋರಾಡುತ್ತಿರುವಾಗ ʻಶೀಷ್ ಮಹಲ್ʼ ನವೀಕರಣ – ಮೋದಿ ಮತ್ತೆ ಕಿಡಿ
ಆರೋಪ ನಿರಾಕರಿಸಿ ಆಪ್
ಬಿಜೆಪಿ ಆರೋಪಗಳನ್ನ ಆಪ್ ತಳ್ಳಿಹಾಕಿದೆ. ಇದು ಐಷಾರಾಮಿ ಮಹಲ್ ಅಲ್ಲ, ಸಿಎಂ ಅವರ ಕ್ಯಾಂಪ್ ಹೌಸ್. ಬಿಜೆಪಿ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ಪ್ರಧಾನಿ ಮೋದಿ ಅವರ ʻನಕಲಿ ಯಮುನಾʼ ಕಥೆ ಬಹಿರಂಗ ಆದಾಗಿನಿಂದ ಬಿಜೆಪಿ ವಿಷಯಾಂತರಕ್ಕೆ ಯತ್ನಿಸುತ್ತಿದೆ. ಹತಾಶೆಯಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ತಿರುಗೇಟು ನೀಡಿದೆ.
ಕೇಜ್ರಿವಾಲ್ ಜಿಗೆ ಮಹಲು ನೀಡಲಾಗಿದೆ ಅನ್ನೋದು ನಕಲಿ ಹಕ್ಕು. ಇದು ನಿಜವೇ ಆದ್ರೆ ದಾಖಲೆ ಪತ್ರಗಳನ್ನ ತೋರಿಸಲಿ. ಸಿಎಂ ಕ್ಯಾಂಪ್ ಹೌಸ್ ಫೋಟೊ ಹಂಚಿಕೊಳ್ಳುವ ಮೂಲಕ ಬಿಜೆಪಿ ಸುಳ್ಳಿನ ಸರದಾರ ಅನ್ನೋದನ್ನ ಸಾಬೀತು ಮಾಡಿದೆ ಎಂದು ಕುಟುಕಿದೆ. ಇದನ್ನೂ ಓದಿ: ಇಬ್ಬರ ಜಗಳ 3ನೇಯವರಿಗೆ ಲಾಭ; ಕಾಂಗ್ರೆಸ್-ಆಪ್ ಕಿತ್ತಾಟ ಬಿಜೆಪಿಗೆ ವರದಾನ ಆಗಿದ್ಹೇಗೆ?
ದೆಹಲಿಯಲ್ಲೊಂದು ಶೀಷ್ ಮಹಲ್
ಕಳೆದ ದೆಹಲಿ ಚುನಾವಣೆ ಸಂದರ್ಭದಲ್ಲೂ ಕೇಜ್ರಿವಾಲ್ ಅವರ ದೆಹಲಿ ಶೀಷ್ ಮಹಲ್ ವ್ಯಾಪಕ ಸದ್ದು ಮಾಡಿತ್ತು. ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಶೀಷ್ ಮಹಲ್ ಅನ್ನು ಮೂರು ಬಾರಿ ನವೀಕರಣಗೊಳಿಸಿದ್ದಾರೆ. ಇದರಿಂದ ಒಟ್ಟು 33.66 ಕೋಟಿ ರೂ. ಖರ್ಚಾಗಿದೆ ಎಂದು ಹೇಳಲಾಗಿತ್ತು. ಶೀಷ್‌ಮಹಲ್ ಆವರಣದ 6 ಫ್ಲಾಗ್ ಸ್ಟಾಫ್ ರಸ್ತೆ, ಕಚೇರಿ ಮತ್ತು ಆವರಣದ ನವೀಕರಣದಿಂದ ಒಟ್ಟು ವೆಚ್ಚ ದುಬಾರಿಯಾಗಿದೆ. ಶೀಷ್‌ಮಹಲ್ ಪ್ರಾಥಮಿಕ ವೆಚ್ಚ 7.91 ಕೋಟಿ ರೂ. ಅಂತ ಅಂದಾಜಿಸಲಾಗಿತ್ತು, ಅದ್ರೆ 2020ರಲ್ಲಿ 8.62 ಕೋಟಿ ರೂ.ಗಳನ್ನು ನೀಡಲಾಯಿತು. 2022ರಲ್ಲಿ ಲೋಕೋಪಯೋಗಿ ಇಲಾಖೆ ಕಾಮಗಾರಿಯನ್ನು ಪೂರ್ಣಗೊಳಿಸಿದಾಗ ಒಟ್ಟು ವೆಚ್ಚ 33.66 ಕೋಟಿ ರೂ. ತಲುಪಿದೆ. ಅಂದಿನ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಗಿರೀಶ್ ಚಂದ್ರ ಮುರ್ಮು ಅವರ ವರದಿಯಲ್ಲಿ ಈ ಅಂಶಗಳನ್ನು ದಾಖಲಿಸಿದ್ದರು. ಮುರ್ಮು ಅವರು 2024ರ ನವೆಂಬರ್ 20ರಂದು ಅಧಿಕಾರ ತ್ಯಜಿಸುವ ಒಂದು ವಾರದ ಮೊದಲು ಈ ವರದಿಗೆ ಸಹಿ ಹಾಕಿದ್ದರು ಎನ್ನಲಾಗಿತ್ತು. ದೆಹಲಿ ಚುನಾವಣೆ ಹೊತ್ತಲ್ಲೇ ಈ ವರದಿ ಬಹಿರಂಗಗೊಂಡಿದ್ದು, ಫಲಿತಾಂಶ ಮೇಲಿನ ಪರಿಣಾಮಕ್ಕೂ ಕಾರಣವಾಯ್ತು.


