ವಾಷಿಂಗ್ಟನ್: ಮಿನ್ನಿಯಾಪೋಲಿಸ್‌ನಲ್ಲಿ ವಲಸೆ ಮತ್ತು ಕಸ್ಟಮ್ಸ್ ಜಾರಿ (ಐಸಿಇ) ಅಧಿಕಾರಿಯೊಬ್ಬರು 37 ವರ್ಷದ ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಆಕೆ ಭಯಾನಕವಾಗಿ ವರ್ತಿಸಿ ಓಡಿಹೋಗಲು ಯತ್ನಿಸಿದ್ದೇ ಆಕೆಯ ಮೇಲೆ ಗುಂಡಿನ ದಾಳಿಗೆ ಕಾರಣ ಎಂದಿದ್ದಾರೆ.
ಅಂತಹ ಸಂದರ್ಭಗಳಲ್ಲಿ ಗುಂಡು ಹಾರಿಸುವುದು ಸರಿಯೇ ಎಂಬ ವರದಿಗಾರರ ಪ್ರಶ್ನೆಗೆ, ಆಕೆ ಭಯಾನಕವಾಗಿ ವರ್ತಿಸಿದಳು. ಬಳಿಕ ಅಲ್ಲಿಂದ ಕಾರಲ್ಲಿ ಪರಾರಿಯಾಗಲು ಯತ್ನಿಸಿದ್ದಳು. ಇದು ಅಧಿಕಾರಿಯ ದಾಳಿಗೆ ಕಾರಣವಾಯಿತು ಎಂದಿದ್ದಾರೆ. ಇದನ್ನೂ ಓದಿ: ಇಬ್ಬರು ಭಾರತೀಯ ಟ್ರಕ್ ಚಾಲಕರು ಅಮೆರಿಕದಲ್ಲಿ ಅರೆಸ್ಟ್ – ಟ್ರಕ್‌ನಲ್ಲಿತ್ತ 1,13,000 ಜನರನ್ನು ಕೊಲ್ಲುವಷ್ಟು ಕೊಕೇನ್?
ಗುಂಡಿನ ದಾಳಿಯ ವೀಡಿಯೊ ತುಣುಕನ್ನು ಅವರು ಪ್ರದರ್ಶಿಸಿದರು. ಬಳಿಕ ನಡೆದ ಘಟನೆಯ ಗಂಭೀರತೆಯನ್ನು ಒಪ್ಪಿಕೊಂಡು, ಇಂತಹ ಘಟನೆ ನಡೆಯುವುದು ನನಗೆ ಇಷ್ಟವಿಲ್ಲ. ಇದೊಂದು ಹಿಂಸಾತ್ಮಕ ಘಟನೆ, ಈ ದೃಶ್ಯ ನೋಡಲು ಭಯಾನಕವಾಗಿದೆ. ಅದನ್ನು ನೋಡಲು ನನಗೆ ಇಷ್ಟವಿಲ್ಲ ಎಂದಿದ್ದಾರೆ.
ವೀಡಿಯೋದಲ್ಲಿ ಏನಿದೆ?
ರಸ್ತೆ ಮಧ್ಯದಲ್ಲಿದ್ದ ಕಾರನ್ನು ICE ಅಧಿಕಾರಿಗಳು ತಡೆದಿದ್ದಾರೆ. ಈ ವೇಳೆ ಮಹಿಳೆ ಕಾರನ್ನು ಚಲಾಯಿಸಿಕೊಂಡು ಹೋಗಲು ಮುಂದಾಗಿದ್ದಾಳೆ. ಅಷ್ಟರಲ್ಲೇ ಆಕೆಯ ಮೇಲೆ ಗುಂಡಿನ ದಾಳಿ ನಡೆದಿದೆ. ಬಳಿಕ ಕಾರು ಮತ್ತೊಂದು ಕಾರಿಗೆ ಡಿಕ್ಕಿಯಾಗಿ ನಿಂತಿದೆ. ಕಾರನ್ನು ಪರಿಶೀಲಿಸಿದಾಗ ಗುಂಡೇಟಿನಿಂದ ಆಕೆ ಸಾವನ್ನಪ್ಪಿರುವುದು ಗೊತ್ತಾಗಿದೆ. ಈ ಘಟನೆಯು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಪ್ರತಿಭಟನೆಗಳಿಗೆ ಕಾರಣವಾಗಿದೆ. ಇದನ್ನೂ ಓದಿ: 66 ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹೊರ ನಡೆದ ಅಮೆರಿಕ – ಟ್ರಂಪ್ ನಿರ್ಧಾರ ಮಾಡಿದ್ದೇಕೆ?

