ಸಾಮಾನ್ಯವಾಗಿ ಇಡ್ಲಿ ಅಥವಾ ರವೆ ಇಡ್ಲಿಯನ್ನು ಮಾಡುತ್ತೇವೆ. ಈ ಎರಡು ರುಚಿಯನ್ನು ಹೊರತು ಪಡಿಸಿ ಹೊಸ ರುಚಿ ಬೇಕೆನ್ನುವವರು ಶ್ಯಾವಿಗೆ ಇಡ್ಲಿ ಸಹ ಟ್ರೈ ಮಾಡಬಹುದು. ಇದು ಕೇಳಲು ವಿಚಿತ್ರವಾಗಿದ್ದರೂ, ಸಖತ್ ಟೇಸ್ಟ್ ಆಗಿರುತ್ತದೆ.
Advertisement
ಬೇಕಾಗುವ ಸಾಮಗ್ರಿಗಳು:
* ಶ್ಯಾವಿಗೆ- 2 ಕಪ್
* ತುರಿದ ಕ್ಯಾರೆಟ್- 1 ಕಪ್
* ಅವಲಕ್ಕಿ- ಅರ್ಧ ಕಪ್
* ತೆಂಗಿನಕಾಯಿ ತುರಿ- ಅರ್ಧ ಕಪ್
* ಮೊಸರು ಅರ್ಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಹಸಿ ಮೆಣಸು- 3 ರಿಂದ 4
* ಹಸಿ ಬಟಾಣಿ- ಸ್ವಲ್ಪ
Advertisement
ಮಾಡುವ ವಿಧಾನ:
Advertisement
* ಒಂದು ಬಾಣಲೆಗೆ ಶ್ಯಾವಿಗೆ ಹಾಕಿ, ಅದನ್ನ ಸ್ವಲ್ಪ ಹುರಿದುಕೊಂಡು ನಂತರ ಅದನ್ನ ಆರಿಸಿ ನೀರು ಹಾಕಿ ನೆನೆಸಿಡಿ. ಎರಡು ಗಂಟೆಯಾದರೂ ಅಕ್ಕಿ ನೆನಸಿದ ಬಳಿಕ, 1 ಕಪ್‍ನಷ್ಟು ಕ್ಯಾರೆಟ್ ಸಿಪ್ಪೆ ತೆಗೆದುಕೊಂಡು ತುರಿದುಕೊಂಡು ಹಾಕಿಕೊಳ್ಳಬೇಕು.
Advertisement
* ಮಿಕ್ಸಿ ಜಾರಿನಲ್ಲಿ ಒಂದು ಹಿಡಿ ಹಸಿ ಬಟಾಣಿ, ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು, ಮೆಣಸಿನ ಕಾಯಿ, ಉಪ್ಪು ಸೇರಿಸಿ ರುಬ್ಬಿಟ್ಟುಕೊಳ್ಳಿ. ರುಬ್ಬುವಾಗ ಹಿಟ್ಟು ಇಡ್ಲಿಯ ಹದಕ್ಕೆ ಇದ್ದರೆ ಉತ್ತಮ.
* ತಯಾರಿಸಿಕೊಂಡ ಮಿಶ್ರಣಕ್ಕೆ ಶ್ಯಾವಿಗೆ, ಕ್ಯಾರೆಟ್ ಹಾಕಿ ಮತ್ತು ಗಟ್ಟಿ ಮೊಸರು ಕಪ್ ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ.
* ನಂತರ ಇಡ್ಲಿ ಪಾತ್ರೆಗೆ ಹಾಕಿ ಬೇಯಿಸಿದರೆ ರುಚಿ ರುಚಿಯಾದ ಶ್ಯಾವಿಗೆ ಇಡ್ಲಿ ಸವಿಯಲು ಸಿದ್ಧವಾಗುತ್ತದೆ.