ಬೆಂಗಳೂರು: ನನ್ನ ಮತ್ತು ಮುಖ್ಯಮಂತ್ರಿಗಳ ಮೇಲೆ ಹಾಗೂ ನಮ್ಮ ಸರ್ಕಾರದ (Congress Govt) ವಿರುದ್ಧ ಶತ್ರು ಭೈರವಿ ಯಾಗ (Shatru Bhairavi Yaaga) ಮಾಡಿಸುತ್ತಿದ್ದಾರೆ. ಇದು ನಮ್ಮ ಸರ್ಕಾರವನ್ನು ನಾಶ ಮಾಡಬೇಕು ಅಂತಾ ರಾಜಕೀಯದಲ್ಲಿ ಇರುವವರೇ ಮಾಡಿಸುತ್ತಿರುವ ಯಾಗ ಅದಕ್ಕಾಗಿ ಅಘೋರಿಗಳ ಮೊರೆ ಹೋಗಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಮತ್ತು ಮುಖ್ಯಮಂತ್ರಿಗಳ ಮೇಲೆ, ನಮ್ಮ ಸರ್ಕಾರದ ವಿರುದ್ಧ ಯಾಗ ನಡೆಯುತ್ತಿದೆ. ದೊಡ್ಡ ಮಟ್ಟದ ಪೂಜೆ ನಡೆಯುತ್ತಿದೆ. ಯಾವ ಪೂಜೆ ಮಾಡ್ತಿದ್ದಾರೆ? ಯಾರು ಮಾಡ್ತಿದ್ದಾರೆ? ಎಲ್ಲಿ ಮಾಡ್ತಿದ್ದಾರೆ? ಅಂತ ಎಲ್ಲವನ್ನು ಬರೆದುಕೊಟ್ಟಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಮೋದಿ ಭಾಷಣ ಪ್ರಧಾನಿ ಕಚೇರಿಯ ಘನತೆ ಕ್ಷೀಣಿಸುವಂತೆ ಮಾಡಿದೆ: ಮನಮೋಹನ್ ಸಿಂಗ್ ಆರೋಪ
ಕೇರಳದ ರಾಜರಾಜೇಶ್ವರಿ ದೇವಸ್ಥಾನದ (Kerala’s Rajarajeshwari Temple )ಆಸುಪಾಸಿನಲ್ಲಿ ಶತ್ರು ನಾಶಕ್ಕಾಗಿ ಶತ್ರು ಭೈರವಿ ಯಾಗ ನಡೆಯುತ್ತಿದೆ. ನಮ್ಮ ಸರ್ಕಾರವನ್ನು ನಾಶ ಮಾಡಬೇಕು ಅಂತ ಅಘೋರಿಗಳ ಮೊರೆ ಹೋಗಿದ್ದಾರೆ. ಅದಕ್ಕಾಗಿ ಹಂದಿ, ಕುರಿ ಸೇರಿ ಎಲ್ಲಾ ಬಲಿ ಕೊಡ್ತಿದ್ದಾರೆ. ಇದೆಲ್ಲವನ್ನ ಯಾರು ಮಾಡಿಸುತ್ತಿದ್ದಾರೆ ಅಂತ ನಮಗೆ ಗೊತ್ತಿದೆ. ಅವರ ನಂಬಿಕೆ ಅವರು ಮಾಡಲಿ. ಆದ್ರೆ ನಾವು ನಂಬಿರುವ ದೇವರು ನಮ್ಮನ್ನ ಕಾಪಾಡುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಕಾಂತಾರ’ ಪ್ರೀಕ್ವೆಲ್ ಸಿನಿಮಾಗೆ ಮಾಲಿವುಡ್ ನಟ ಎಂಟ್ರಿ
ಶತ್ರು ಸಂಹಾರ ಯಾಗ ಮಾಡಿಸುವುದಕ್ಕಾಗಿಯೇ 5 ಹಂದಿ, 3 ಎಮ್ಮೆ, 21 ಕಪ್ಪು ಬಣ್ಣದ ಕುರಿ, 21 ಮೇಕೆಗಳನ್ನ ಬಲಿ ಕೊಡ್ತಿದ್ದಾರೆ. ಈ ಶತ್ರು ಸಂಹಾರ ಯಾಗ ಯಾರು ಮಾಡ್ತಿದ್ದಾರೆ? ಯಾರು ಮಾಡಿಸುತ್ತಿದ್ದಾರೆ? ಎಲ್ಲವೂ ನನಗೆ ಗೊತ್ತಿದೆ. ಇದೆಲ್ಲವನ್ನು ರಾಜಕೀಯದಲ್ಲಿ ಇರುವವರೇ ಮಾಡೋದು. ಆದ್ರೆ ಈ ಬಗ್ಗೆ ಸದ್ಯಕ್ಕೆ ನಾನು ಏನೂ ಮಾತಾಡೋದಿಲ್ಲ ಎಂದು ಆತಂಕಕಾರಿ ಸಂಗತಿಯನ್ನ ಬಿಚ್ಚಿಟ್ಟಿದ್ದಾರೆ.
ಕೇರಳದ ರಾಜರಾಜೇಶ್ವರಿ ದೇವಾಲಯದ ಆಸುಪಾಸಿನಲ್ಲಿ ಕಿಡಿಗೇಡಿಗಳು ಶತ್ರು ಸಂಹಾರ ಯಾಗ ಮಾಡ್ತಿದ್ದಾರೆ. ಆದ್ರೆ ನಮ್ಮ ದೇವರ ಕೃಪೆ ಬಹಳ ಜೋರಾಗಿದೆ. ನಾನು ಹೊರಗೆ ಹೋಗುವ ಪ್ರತಿದಿನ ದೇವರಿಗೆ ಕೈ ಮುಗಿದು ಹೋಗ್ತೀನಿ. ಅದಕ್ಕೆ ಇಷ್ಟು ರಕ್ಷಣೆ ಎಲ್ಲಾ ಇದೆ ಎಂದ ಅವರು ಶತ್ರು ಸಂಹಾರ ಯಾಗದ ಬಗ್ಗೆ ಚೀಟಿಯಲ್ಲಿ ಬರೆದುಕೊಂಡಿದ್ದನ್ನ ಮಾಧ್ಯಮಗಳ ಮುಂದೆ ಪ್ರಸ್ತುತಪಡಿಸಿದ್ದಾರೆ. ಇದನ್ನೂ ಓದಿ: ಡೆತ್‌ನೋಟ್‌ನಲ್ಲಿರುವ ನಾಗರಾಜ್ ಜೊತೆ ನಾಗೇಂದ್ರಗೆ ವ್ಯವಹಾರ ಇದೆ: ಸಿಟಿ ರವಿಯಿಂದ ಫೋಟೋ ರಿಲೀಸ್