ಚಿಕ್ಕೋಡಿ: ಬೆಳಗಾವಿ (Belgavi) ಜಿಲ್ಲೆಯ ನಿಪ್ಪಾಣ (Nippani) ಪಟ್ಟಣದ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮು ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ಹಾಗೂ ಚಿಕ್ಕೋಡಿ (Chikkodi) ಲೋಕಸಭೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಶಿಕಲಾ ಜೊಲ್ಲೆ ಪೂರ್ಣಕುಂಭ ಮೆರವಣಿಗೆಯಲ್ಲಿ ಕುಂಭ ಕಳಶ ಹೊತ್ತು ಹಾಲಸಿದ್ಧನಾಥ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಶ್ರೀ ಹಾಲಸಿದ್ದನಾಥ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ವಾಲಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇದನ್ನೂ ಓದಿ: ಕಾಂಗ್ರೆಸ್‍ನವರು ನಿಷ್ಪಪ್ರಯೋಜಕ, ಅಪ್ರಯೋಜಕ ಅಂತ ನಾವು ಹೇಳೋದಿಲ್ಲ: ಪ್ರಹ್ಲಾದ್ ಜೋಶಿ ಲೇವಡಿ
ಕುಂಭ ಮೆರವಣಿಗೆಗೆ ಚಾಲನೆ ನೀಡಿ ಸಾವಿರಾರು ಮಹಿಳೆಯರೊಂದಿಗೆ ಕುಂಭ ಮೆರವಣಿಗೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಶಿಕಲಾ ಜೊಲ್ಲೆ ಉತ್ತಮ ಮಳೆಯಿಂದ ಕಬ್ಬಿನ ಇಳುವರಿ ಹೆಚ್ಚಾಗಿದ್ದು ಈ ಬಾರಿ ರೈತರಿಗೆಲ್ಲ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ಇದನ್ನೂ ಓದಿ: ರಾಮನನ್ನು ಆದರ್ಶ ಪುರುಷ ಎಂದು ತೋರಿಸಿದ್ದು ವಾಲ್ಮೀಕಿ: ಜಗದೀಶ್ ಶೆಟ್ಟರ್