ವಿಜಯನಗರ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ರಾಷ್ಟ್ರಧ್ವಜದ ಬಗ್ಗೆ ಎಲ್ಲಿಯೂ ತಪ್ಪಾಗಿ ಮಾತಾಡಿಲ್ಲ. ಅವರು ಹೇಳಿರೋದೇ ಒಂದು ಬಗೆಯಾಗಿದೆ. ಅದನ್ನು ಅರ್ಥೈಸಿರೋದೇ ಇನ್ನೊಂದು ಬಗೆಯಾಗಿ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರು ರಾಷ್ಟ್ರಧ್ವಜದ ಗೌರವಕ್ಕೆ ಚ್ಯುತಿ ಬರುವ ಹಾಗೆ ಮಾತಾಡಿಲ್ಲ, ಮಾತಾನಾಡಬಾರದೂ ಕೂಡಾ. ಈಶ್ವರಪ್ಪನವರು ಎಲ್ಲಿಯೂ ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸುತ್ತೇವೆ ಅಂತ ಹೇಳಿಲ್ಲ. ಅದನ್ನು ತಪ್ಪು ಗ್ರಹಿಸಿ ವಿರೋಧ ಪಕ್ಷದವರು ಜನರನ್ನು ತಪ್ಪು ದಾರಿಗೆ ಎಳಿತಿದ್ದಾರೆ. ಅಧಿವೇಷನ ನಡೆಸೋಕೆ ಅವರು ಬಿಡುತ್ತಿಲ್ಲ. ಈಶ್ವರಪ್ಪ ಅವರು ತಪ್ಪು ಅರ್ಥದಲ್ಲಿ ಏನೂ ಹೇಳಿಲ್ಲವಲ್ಲ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿ ಪಕ್ಷಗಳಿಂದ ಸಿಂಧೂರ ರಾಜಕಾರಣ – ಸಂಸ್ಕೃತಿ ತಂಟೆಗೆ ಬರ್ಬೇಡಿ ಎಂದು ಸರ್ಕಾರದ ಎಚ್ಚರಿಕೆ
Advertisement
Advertisement
ಇದೇ ವೇಳೆ ಅಂಜನಾದ್ರಿ ಬೆಟ್ಟದ ಬಗ್ಗೆ ಮಾತನಾಡಿ, ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಾನವಾಗಿದ್ದು, ಟಿಟಿಡಿ ಅವರು ನಮ್ಮಲ್ಲಿ ಅಂಜನಾದ್ರಿ ಇದೆ ನಾವು ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಿದೆ. ರಾಮಾಯಣದಲ್ಲಿ ಇಲ್ಲಿನ ಕಿಷ್ಕಿಂದ ಬಗ್ಗೆ ಉಲ್ಲೇಖ ಇದೆ ಅದೇ ಅಂಜನಾದ್ರಿ ಆಗಿದೆ. ಇಲ್ಲಿಯ ಹಾಗೇ ಸಾಕ್ಷ್ಯಾಧಾರಗಳು ಟಿಟಿಡಿ ಬಳಿ ಸಿಗಲ್ಲ. ನಮ್ಮ ಇಲಾಖೆಯಿಂದಲೂ ಎಲ್ಲ ಮಾಹಿತಿ ಸಂಗ್ರಹಿಸ್ತಿದ್ದೇನೆ. ಬಜೆಟ್‍ನಲ್ಲಿ ಅಂಜನಾದ್ರಿ ಅಭಿವೃದ್ಧಿ ಬಗ್ಗೆ ಹಣ ಸಿಗುವ ಸಂಭವ ಇದೆ. ಅಲ್ಲಿನ ಡಿಸಿ ಅವರಿಂದ ಪ್ರಪೋಸಲ್ ತೆಗೆದುಕೊಳ್ಳಲಾಗಿದೆ. ಆನಂದ್ ಸಿಂಗ್ ಅವರು ಉಸ್ತುವಾರಿ ಆಗಿರೋದ್ರಿಂದ ಅಂಜನಾದ್ರಿ ಅಭಿವೃದ್ಧಿ ಪಕ್ಕಾ ಎಂದರು. ಸದ್ಯದಲ್ಲಿಯೇ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎಂದು ಸರ್ಕಾರದಿಂದ ಅಧಿಕೃತ ಘೋಷಣೆ ಮಾಡಲಾಗುವುದು ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನವರ ಹೋರಾಟಕ್ಕೆ ನಾನು ಜಗ್ಗಲ್ಲ, ಬಗ್ಗಲ್ಲ, ಹಿಗ್ಗಲ್ಲ: ಈಶ್ವರಪ್ಪ