ಬೆಂಗಳೂರು: ರಾಜ್ಯದಲ್ಲಿ ಸಮವಸ್ತ್ರದ ನೆಪದಲ್ಲಿ ಸಂಸ್ಕೃತಿ ಸಂಘರ್ಷ ಮುಗಿಲುಮುಟ್ಟಿದೆ. ಕೆಲವರು ಸಿಂಧೂರ ಸಂಪ್ರದಾಯನ್ನು ಪ್ರಶ್ನಿಸತೊಡಗಿದ್ದಾರೆ. ಇದನ್ನು ಬಿಜೆಪಿ ಖಂಡಾತುಂಡವಾಗಿ ವಿರೋಧ ಮಾಡ್ತಿದೆ.
ಸಿಂಧೂರ, ಬಳೆಯಂತಹ ವಿಚಾರಗಳನ್ನು ಪ್ರಸ್ತಾಪಿಸಿ ಸಮಾಜದ ಸಾಮರಸ್ಯ ಹಾಳುಮಾಡಬೇಡಿ ಎಂದು ಸಚಿವ ಬಿ.ಸಿ ನಾಗೇಶ್ ಎಚ್ಚರಿಕೆ ನೀಡಿದ್ದಾರೆ. ಆದರೆ ಸಿಂಧೂರ ವಿವಾದದ ಬಗ್ಗೆ ಪ್ರತಿಕ್ರಿಯಿಸಲು ಸಚಿವ ಕಾರಜೋಳ ನಿರಾಕರಿಸಿದ್ದಾರೆ. ಇತ್ತ ಕಾಂಗ್ರೆಸ್ ಮಾತ್ರ ಎರಡೂ ಇರಲಿ, ತಪ್ಪೇನು ಎಂದು ಕೇಳುತ್ತಿದೆ. ಹಿಜಬ್ ಪರವಾಗಿ ಬ್ಯಾಟಿಂಗ್ ಮಾಡ್ತಿರುವ ವಿಪಕ್ಷ ಕಾಂಗ್ರೆಸ್ ಪಕ್ಷ ಇದೀಗ ಸಿಂಧೂರ ಸಂಸ್ಕೃತಿಯನ್ನು ಬೆಂಬಲಿಸಿದೆ.
Advertisement
Advertisement
ಹಿಜಬ್‍ನಂತೆ ಸಿಂಧೂರದಿಂದ್ಲೂ ಯಾರಿಗೂ ಏನು ತೊಂದ್ರೆ ಆಗಲ್ಲ. ಆಯಾಯ ಸಂಸ್ಕೃತಿ, ಸಂಪ್ರದಾಯ ಪಾಲನೆ ಮಾಡುವವರಿಗೆ ತೊಂದರೆ ಕೊಡಬಾರದು. ಮೊದಲಿನಿಂದಲೂ ಇರುವ ಸಂಪ್ರದಾಯಗಳಿಗೆ ಯಾರೂ ಅಡ್ಡಿಪಡಿಸುವುದು ಬೇಡ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ರೋಡ್ ಶೋ ವೇಳೆ ಕಾರಿನ ಮೇಲಿಂದ ಕೆಳಗೆ ಬಿದ್ದ ಪವನ್ ಕಲ್ಯಾಣ್!
Advertisement
Advertisement
ಇದೇ ವೇಳೆ ಹಿಜಬ್ ವಿವಾದದ ಹಿಂದೆ ಬಿಜೆಪಿಯ ಹುನ್ನಾರ ಇದೆ ಎಂಬ ಆರೋಪವನ್ನು ಮಾಡಿದ್ದಾರೆ. ಸಿಂಧೂರ, ಬಳೆ ತಂಟೆಗೆ ಬಂದ್ರೆ ನಾಲಗೆ ಸೀಳ್ತೀವಿ ಎಂದು ಎಚ್ಚರಿಸಿದ್ದ ಪ್ರಮೋದ್ ಮುತಾಲಿಕ್ ವಿರುದ್ಧ ಕ್ರಮಕ್ಕೆ ಯುಟಿ ಖಾದರ್ ಒತ್ತಾಯಿಸಿದ್ದಾರೆ. ಈಗ ಸರ್ಕಾರ ಕ್ರಮ ಕೈಗೊಳ್ಳದಿದ್ರೆ ಕೋಮುಭಾವನೆ ಕೆರಳಿಸುವವರಿಗೆ ಭಯ ಇಲ್ಲವಾಗುತ್ತದೆ ಎಂಬ ಆತಂಕ ಹೊರಹಾಕಿದ್ದಾರೆ. ಈ ಮಧ್ಯೆ ಸಿಂಧೂರ, ಬಳೆ ಬಗ್ಗೆ ಮುಸ್ಲಿಮ್ ವಿದ್ಯಾರ್ಥಿನಿಯರು ಪ್ರಶ್ನೆ ಮಾಡಿದ್ದನ್ನು ಖಂಡಿಸಿ ಕಲಬುರಗಿಯ ಹಿಂದೂಪರ ಮುಖಂಡರು ಸಿಂಧೂರ ಚಳವಳಿ ಶುರು ಮಾಡಿದ್ದಾರೆ.