– ಮೋದಿ ಸಿಂಧೂರ ವ್ಯಾಪಾರಿ: ಟಿಎಂಸಿ ಟೀಕೆ
ನವದೆಹಲಿ: ಲ್ಯಾಟಿನ್ ಅಮೆರಿಕದ ಪನಾಮ ದೇಶದಲ್ಲಿರುವ ಶಶಿ ತರೂರ್ (Shashi Tharoor), ಭಯೋತ್ಪಾದಕರಿಗೆ ಅವರ ಭಾಷೆಯಲ್ಲೇ ಪ್ರತ್ಯುತ್ತರ ನೀಡುವುದಾಗಿ ನಮ್ಮ ಪಿಎಂ ಹೇಳಿದ್ದಾರೆ. ಸಿಂಧೂರದ ಬಣ್ಣ ಕೆಂಪು; ಹಾಗೆಯೇ ರಕ್ತದ ಬಣ್ಣ ಕೂಡ ಕೆಂಪು ಎಂದು ತರೂರ್ ಹೇಳಿದ್ದಾರೆ.
ಇದಕ್ಕೆ ಕಾಂಗ್ರೆಸ್ (Congress) ಟೀಕಿಸಿದ್ದು, ಶಶಿ ತರೂರ್ ಬಿಜೆಪಿಯ ಸೂಪರ್ ವಕ್ತಾರರಾಗಿ ಬದಲಾಗಿದ್ದಾರೆ. ಬಿಜೆಪಿ ನಾಯಕರಿಗಿಂತ ಹೆಚ್ಚಾಗಿ ಚಮಚಾಗಿರಿ ಮಾಡುತ್ತಿದ್ದಾರೆ ಎಂದು ಉದಿತ್ ರಾಜ್ ಟೀಕಿಸಿದ್ದಾರೆ. ಈ ಹಿಂದೆ ಬಿಸಿ ಬಿಸಿ ಟೀ ಮಾರಿದ್ದ ವ್ಯಕ್ತಿ ಇವತ್ತು ಸಿಂಧೂರವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿಯನ್ನು ಟಿಎಂಸಿ ಸಚಿವ ಉದ್ಯಾನ್ ಗುಹಾ ಟೀಕಿಸಿದ್ದಾರೆ. ಇದನ್ನೂ ಓದಿ: Kodagu | ಕಾಲೇಜು ಹಾಸ್ಟೆಲ್ನಲ್ಲಿ ರಾಯಚೂರು ಮೂಲದ ವಿದ್ಯಾರ್ಥಿನಿ ಆತ್ಮಹತ್ಯೆ
ಪಹಲ್ಗಾಮ್ ಉಗ್ರ ದಾಳಿ ಮತ್ತು ಉಗ್ರವಾದಕ್ಕೆ ಪಾಕಿಸ್ತಾನದ ಬೆಂಬಲದ ಸತ್ಯಾಸತ್ಯತೆಯನ್ನು ಜಗತ್ತಿಗೆ ಮನವರಿಕೆ ಮಾಡಲು, ಭಾರತದ ಸರ್ವಪಕ್ಷ ಸಂಸದೀಯ ನಿಯೋಗ ವಿವಿಧ ದೇಶಗಳಿಗೆ ಭೇಟಿ ನೀಡಿದೆ. ಅದರಂತೆ ಸದ್ಯ ಲ್ಯಾಟಿನ್ ಅಮೆರಿಕ ರಾಷ್ಟ್ರವಾದ ಪನಾಮಾದಲ್ಲಿರುವ ಶಶಿ ತರೂರ್ ಸದಸ್ಯರಾಗಿರುವ ನಿಯೋಗವು, ಭಾರತವು ದಶಕಗಳಿಂದ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯನ್ನು ದಿಟ್ಟವಾಗಿ ಎದುರಿಸುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯುಪಿಯಲ್ಲಿ ರೇಪಿಸ್ಟ್, ಕೊಲೆಗಾರರ ವಿರುದ್ಧ ‘ಆಪರೇಷನ್ ಲಂಗ್ಡಾ’ – 11 ಕ್ರಿಮಿನಲ್ಸ್ ಕಾಲಿಗೆ ಗುಂಡೇಟು
ನಾವು ಸುಮಾರು ನಾಲ್ಕು ದಶಕಗಳಿಂದ ದಾಳಿಯ ಮೇಲೆ ದಾಳಿಯನ್ನು ಅನುಭವಿಸಿದ್ದೇವೆ. ನೋವು, ದುಃಖ, ಗಾಯಗಳು, ನಷ್ಟಗಳನ್ನು ಸಹಿಸಿಕೊಳ್ಳುವುದನ್ನು ಮುಂದುವರಿಸುವುದು ಮತ್ತು ನಂತರ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಹೋಗಿ ಅಳಲು ತೋಡಿಕೊಳ್ಳುವುದನ್ನು ಭಾರತ ಈಗ ನಿಲ್ಲಿಸಿದೆ. ಭಾರತ ವಿರೋಧಿ ಭಯೋತ್ಪಾದಕ ಕೃತ್ಯಗಳಿಗೆ ಈಗೇನಿದ್ದರೂ ಸೇನಾ ಕಾರ್ಯಚರಣೆಗಳೇ ನಮ್ಮ ಉತ್ತರವಾಗಿರುತ್ತವೆ ಎಂದು ಶಶಿ ತರೂರ್ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ಉಲ್ಲೇಖಿಸಿದ್ದರು. ಇದನ್ನೂ ಓದಿ: Hassan | ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು