ಬಾಲಿವುಡ್ ನಟಿ ಶ್ರದ್ಧಾ ಕಪೂರ್ (Shraddha Kapoor) ನಟನೆಯ ‘ಸ್ತ್ರೀ 2’ (Stree 2) ಸಿನಿಮಾ ಸಕ್ಸಸ್ ಬಳಿಕ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್ ಮಾತ್ರವಲ್ಲ ಪರಭಾಷೆಗಳಿಂದಲೂ ಅವರಿಗೆ ಬುಲಾವ್ ಬರುತ್ತಿದೆ. ಇದೀಗ ಸಂದರ್ಶನವೊಂದರಲ್ಲಿ ಲವ್ ಲೈಫ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸಂಗಾತಿ ಕುರಿತು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ತೆಲುಗು ನಟ ನಾರಾ ರೋಹಿತ್ ಜೊತೆ ಸಿರೀಶ ಲೆಲ್ಲಾ ನಿಶ್ಚಿತಾರ್ಥ
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾದ ಶ್ರದ್ಧಾ, ರಿಲೇಷನ್‌ಶಿಪ್ ಬಗ್ಗೆ ಕೇಳಿದಾಗ ಯಾವುದೇ ಸಂಕೋಚವಿಲ್ಲದೆ ಮುಕ್ತವಾಗಿ ಉತ್ತರಿಸಿದ್ದಾರೆ. ನಟಿ ಯಾರ ಹೆಸರನ್ನೂ ತೆಗೆದುಕೊಂಡಿಲ್ಲ. ಆದರೆ ನನ್ನ ಸಂಗಾತಿಯೊಂದಿಗೆ ಸಮಯ ಕಳೆಯುವುದು, ಸಿನಿಮಾ ನೋಡುವುದು, ಡಿನ್ನರ್ ಹೋಗುವುದು ಅಥವಾ ಟ್ರಾವೆಲ್ ಮಾಡುವುದು ನನಗೆ ತುಂಬಾ ಇಷ್ಟ ಎಂದು ಶ್ರದ್ಧಾ ಹೇಳಿದ್ದಾರೆ. ಅವಶ್ಯವಾಗಿ ನನಗೆ ಮದುವೆ ಮೇಲೆ ತುಂಬಾ ನಂಬಿಕೆ ಇದೆ. ಆದರೆ ಸರಿಯಾದ ವ್ಯಕ್ತಿ ಸಿಗುವುದು ಮುಖ್ಯ ಎಂದಿದ್ದಾರೆ.
ಇನ್ನು ಕಳೆದ ವರ್ಷ ಶ್ರದ್ಧಾ ಕಪೂರ್ ಅವರ ಹೆಸರು ಬರಹಗಾರ ರಾಹುಲ್ ಮೋದಿ ಅವರೊಂದಿಗೆ ಸದ್ದು ಮಾಡಿತ್ತು. ಅದರಂತೆ ಇಬ್ಬರೂ ಕೂಡ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಎಲ್ಲೂ ಮಾತನಾಡಿಲ್ಲ. ಇದರ ನಂತರ, ಶ್ರದ್ಧಾ ಕಪೂರ್ ತನ್ನ ಇನ್ಸ್ಟಾಗ್ರಾಂ ಖಾತೆಯಿಂದ ರಾಹುಲ್ ಅವರನ್ನು ಅನ್ ಫಾಲೋ ಮಾಡಿದಾಗ ಅವರ ಬ್ರೇಕಪ್ ಸುದ್ದಿ ಬೆಳಕಿಗೆ ಬಂದಿತ್ತು. ಆದರೆ ಇದರ ಬಗ್ಗೆಯೂ ಈ ಜೋಡಿ ಕ್ಲ್ಯಾರಿಟಿ ನೀಡಿರಲಿಲ್ಲ.